ಟಾಪ್ ನ್ಯೂಸ್
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಲೋಕಾ ವ್ಯಾಪ್ತಿಗೆ ಶಾಸಕರು, ಸಂಸದರು
![](https://risingkannada.com/wp-content/uploads/2024/03/supreem-court.jpg)
ನವದೆಹಲಿ: ಜನಪ್ರತಿನಿಧಿಗಳ ಲಂಚ ಪ್ರಕರಣ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯನ್ನು ನಾಶಪಡಿಸುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗುವ ಶಾಸಕರು ಮತ್ತು ಸಂಸದರಿಗೆ ರಕ್ಷಣೆ ಇಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಸಂಸತ್ ಮತ್ತು ರಾಜ್ಯ ಶಾಸಕಾಂಗಗಳ ಶಾಸಕರು ಲಂಚ ಪ್ರಕರಣಗಳಲ್ಲಿ ಕಾನೂನು ಕ್ರಮದಿಂದ ಮುಕ್ತರಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೂರ್ಣ ಪೀಠವನ್ನೊಳಗೊಂಡ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ.
ಸಂಸತ್ತಿನಲ್ಲಿ ಮತದಾನಕ್ಕಾಗಿ ಪ್ರಾಸಿಕ್ಯೂಷನ್‌ನಿಂದ ಲಂಚದವರೆಗಿಡುವ ಸಂಸದರು ಶಾಸಕರಿಗೆ ವಿನಾಯಿತಿ ನೀಡಿದ್ದ ೧೯೯೮ ರ ಪಿವಿ ನರಸಿಂಹ ರಾವ್ ತೀರ್ಪಿನ ಪ್ರಕರಣವನ್ನು ನ್ಯಾಯಪೀಠ ರದ್ದುಗೊಳಿಸಿದೆ. ಸಂಸತ್ತು,ವಿಧಾನಸಭೆಯಲ್ಲಿ ಮತ ಭಾಷಣಕ್ಕೆ ಸಂಬಂಧಿಸಿದಂತೆ ಲಂಚದ ಆರೋಪದ ಮೇಲೆ ಸಂಸದ ಅಥವಾ ಶಾಸಕರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಸರ್ವಾನುಮತದ ತೀರ್ಪು ನೀಡಿದೆ.
ಪಿವಿ ನರಸಿಂಹ ರಾವ್ ಅವರ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುವ ಮೂಲಕ ಮತ ಅಥವಾ ಭಾಷಣಕ್ಕಾಗಿ ಲಂಚ ಪಡೆದ ಶಾಸಕರಿಗೆ ವಿನಾಯಿತಿ ನೀಡುವ ಪಿವಿ ನರಸಿಂಹ ಅವರ ತೀರ್ಪು ವಿಶಾಲವಾದ ಪರಿಣಾಮಗಳನ್ನು ಹೊಂದಿದೆ ಎಂದು ನ್ಯಾಯಪೀಠ ಹೇಳಿದೆ. ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಮಾತನಾಡಿ, ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ರಾಜ್ಯಸಭಾ ಚುನಾವಣೆಯಲ್ಲಿ ಪ್ರಶ್ನೆ ಕೇಳಲು ಅಥವಾ ಮತ ಚಲಾಯಿಸಲು ಸಂಸದರು ಹಣ ತೆಗೆದುಕೊಂಡರೆ, ಅವರು ಪ್ರಾಸಿಕ್ಯೂಷನ್‌ನಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದಿದ್ದಾರೆ.
೧೯೮೮ ತೀರ್ಪು ತಳ್ಳಿ ಹಾಕಿದ ಸುಪ್ರೀಂ
ಸದನದಲ್ಲಿ ಭಾಷಣ ಅಥವಾ ಮತಕ್ಕಾಗಿ ಸಂಸದರು ಅಥವಾ ಶಾಸಕರು ಲಂಚ ಪಡೆಯುವ ಪ್ರಕರಣಗಳಲ್ಲಿ ಶಾಸಕರ ವಿನಾಯಿತಿಯನ್ನು ಐವರು ಸದಸ್ಯರ ಸಂವಿಧಾನ ಪೀಠ ಎತ್ತಿಹಿಡಿದ್ದ ೧೯೯೮ ರ ತೀರ್ಪನ್ನು ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರ ಪೀಠ ತಳ್ಳಿಹಾಕಿದೆ.ಬ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಲಂಚವನ್ನು ಸಂಸದೀಯ ಸವಲತ್ತುಗಳಿಂದ ರಕ್ಷಿಸಲಾಗಿಲ್ಲ ಮತ್ತು ೧೯೯೮ ರ ತೀರ್ಪಿನ ವ್ಯಾಖ್ಯಾನ ಸಂವಿಧಾನದ ೧೦೫ ಮತ್ತು ೧೯೪ ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?