ಟಾಪ್ ನ್ಯೂಸ್
ಸುನಿಲ್ ಮಿತ್ತಲ್ಗೆ ನೈಟ್ ಹುಡ್ : ಚಾರ್ಲ್ಸ್ ರಿಂದ ಮೊದಲ ಭಾರತೀಯನಿಗೆ ಪದವಿ ಪ್ರದಾನ
ಭಾರ್ತಿ ಎಂಟರ್ ಪ್ರೈಸಸ್ ಸಂಸ್ಥಾಪಕ ಸುನಿಲ್ ಭಾರ್ತಿ ಮಿತ್ತಲ್ ಗೆ ಇಂಗ್ಲೆಂಡ್ ನ ಅತ್ಯುನ್ನತ ಪುರಸ್ಕಾರ ನೈಟ್ ಹುಡ್ ಸಿಕ್ಕಿದೆ. ಮಿತ್ತಲ್ ಗೆ ನೈಟ್ ಹುಡ್ ಸಿಕ್ಕಿರುವುದರಿಂದ ಅವರು ಸರ್ ಸುನಿಲ್ ಭಾರ್ತಿ ಮಿತ್ತಲ್ ಎಂದು ಕರೆಸಿಕೊಳ್ಳಲಿದ್ದಾರೆ. ಭಾರತದ ಅನೇಕರಿಗೆ ಈಗಾಗಲೇ ನೈಟ್ ಹುಡ್ ಪದವಿ ಸಿಕ್ಕಿದೆ. ಸರ್ ಸಿ.ವಿ.ರಾಮನ್, ಸರ್ ಎಂ.ವಿಶ್ವೇಶ್ವರಯ್ಯ ಸೇರಿ ಅನೇಕ ಖ್ಯಾತನಾಮರು ಈ ಪದವಿ ಪಡೆದುಕೊಂಡಿದ್ದಾರೆ.
ಈ ಸಾಲಿಗೆ ಸುನಿಲ್ ಭಾರ್ತಿ ಮಿತ್ತಲ್ ಸೇರ್ಪಡೆಯಾಗಿದ್ದಾರೆ. ಆದರೆ ಕುತೂಹಲದ ವಿಚಾರ ಇಂಗ್ಲೆಂಡ್ ನ ರಾಜನಾಗಿ ಕಿಂಗ್ ಚಾರ್ಲ್ಸ್ ಅಧಿಕಾರ ವಹಿಸಿಕೊಂಡ ಬಳಿಕ ನೈಟ್ ಹುಡ್ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸುನಿಲ್ ಭಾರ್ತಿ ಮಿತ್ತಲ್ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ಹಂಚಿಕೊಂಡಿರುವ ಸುನಿಲ್ ಮಿತ್ತಲ್, ತಮಗೆ ಈ ಪದವಿ ಸಿಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇಂಗ್ಲೆಂಡ್ ನೀಡುತ್ತಿರುವ ಈ ಗೌರವ ತಮಗೆ ವಿಶೇಷವಾದದ್ದು ಎಂದು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?