Featured
ಆರ್ಥಿಕ ಹಿಂಜರಿತ: ಮೋದಿ ಸರ್ಕಾರದಿಂದ ಎಲ್ಲಾ ರೀತಿಯಲ್ಲೂ ಲೋಪ: ಮನ್‌ಮೋಹನ್ ಸಿಂಗ್

ನವದೆಹಲಿ: ಕಳೆದ ತ್ರೈಮಾಸಿಕ ವರದಿಯಲ್ಲಿ ಜಿಡಿಪಿಯಲ್ಲಿ ಇಳಿಕೆ ಕಂಡಿದ್ದು ಪೂರಕವಾಗಿ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಏರುಪೇರಾಗಿರುವ ಕುರಿತು ಮಾಜಿ ಪ್ರಧಾನಿ ಹಾಗೂ ಅರ್ಥಿಕ ತಜ್ಞ ಮನ್‌ಮೋಹನ್ ಸಿಂಗ್ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದಾರೆ.
ಇಡಿ ವ್ಯವಸ್ಥೆಯ ಹಿಂಜರಿತವನ್ನ ವಿವರಿಸಿ, ಪ್ರಧಾನಿ ಮೋದಿ ಸರ್ಕಾರವೇ ಕಾರಣ ಎಂದು ನೇರವಾಗಿ ಟೀಕಿಸಿದ್ದಾರೆ, ಪ್ರಧಾನಿ ಮೋದಿ ಸರ್ಕಾರ ಎಲ್ಲಾ ರೀತಿಯಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಆರ್ಥಿಕ ಹಿಂಜರಿತಕ್ಕೆ ಮೂಲ ಕಾರಣ, ಆರ್ಥಿಕತೆಯ ಗತಿ ಆಘಾತಕಾರಿಯಾಗಿದೆ, ಈ ಸರ್ಕಾರದ ನೀತಿಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಕಳೆದ ಆರು ವರ್ಷಗಳಲ್ಲಿ ಜಿಡಿಪಿ ಇಷ್ಟೊಂದು ಕಡಿಮೆ ಮಟ್ಟದ ಅಂಶಗಳಿಗೆ ಕುಸಿತ ಕಂಡಿರಲಿಲ್ಲ ಎಂದಿದ್ದಾರೆ. ದೇಶಕಂಡ ಉತ್ತಮ ಆರ್ಥಿಕ ತಜ್ಞರೂ ಆಗಿದ್ದ ಮನ್‌ಮೋಹನ್ ಸಿಂಗ್ ಹೇಳಿಕೆ , ಭಾರತೀಯ ಆರ್ಥಿಕ ವಲಯದಲ್ಲಿ ಇನ್ನಷ್ಟು ಆತಂಕವನ್ನುಂಟು ಮಾಡಿದೆ.
Post Views: 4
Continue Reading
Advertisement
You may like
Click to comment
















