ದೆಹಲಿ : ದೆಹಲಿಯ ಜನಕ್ ಪುರಿ ಪೊಲೀಸರು ಬಂಟಿ ಔರ್ ಬಬ್ಲಿ ಸಿನಿಮಾ ರೀತಿಯ ಜೋಡಿಯನ್ನ ಅರೆಸ್ಟ್ ಮಾಡಿದ್ದಾರೆ. ತಡರಾತ್ರಿ ಲಿಫ್ಟ್ ಪಡೆದಿದ್ದ ಕಾರು, ಕಾರಿನಲ್ಲಿದ್ದ ಲ್ಯಾಪ್ ಟಾಪ್ ದೋಚಿದದ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳ್ಳತನವಾಗಿದ್ದ ಕಾರು, ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ. ದೆಹಲಿಯ ಪಾಲಂ ನಿವಾಸಿಗಳಾದ ಸಂದೀಪ್ ಮುನ್ನ, ರೀನಾ ಬಂಧಿತರು ಎಂದು ಗೊತ್ತಾಗಿದೆ.
ಫೆಬ್ರವರಿ 22 ರಂದು ಜನಕ್ ಪುರಿ ಪೊಲೀಸ್ ಠಾಣೆಯಲ್ಲಿ ಕಾರು ಕಳ್ಳತನದ ಕುರಿತು ದೂರು ದಾಖಲಾಗಿತ್ತು. ಈ ದೂರಿನ ಪ್ರಕಾರ ರಾತ್ರಿ ವೇಳೆ ಕಾರಿನಲ್ಲಿ ಡ್ರಾಪ್ ನೀಡುವಂತೆ ಜೋಡಿ ವ್ಯಕ್ತಿಯೊಬ್ಬರನ್ನ ಕೇಳಿ ಕೊಂಡಿತ್ತು. ಅವರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ಕಾರಿನ ಮಾಲೀಕ ಲಿಫ್ಟ್ ನೀಡಲು ಮುಂದಾಗಿದ್ದ. ಮೂವರು ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ ಕಾರಿನ ಮಾಲೀಕ ವೈಯಕ್ತಿಕ ಕೆಲಸಕ್ಕೆಂದು ಕಾರು ನಿಲ್ಲಿಸಿ ತೆರಳಿದ್ದ.
ಈ ವೇಳೆ ಕಾರು, ಕಾರಿನಲ್ಲಿದ್ದ ಲ್ಯಾಪ್ ಟಾಪ್ ಜೊತೆಗೆ ಜೋಡಿ ಪರಾರಿಯಾಗಿತ್ತು. ತಕ್ಷಣ ಎಚ್ಚೆತ್ತ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಜೋಡಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವರು ಕದ್ದಿದ್ದ ಕಾರು ಮತ್ತು ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.
ಸಂದೀಪ್ ಮತ್ತು ರೀನಾ ಪಶ್ಚಿಮ ದೆಹಲಿಯ ಉತ್ತಮ್ ನಗರನಲ್ಲಿ ರಿವ್ ಇನ್ ರಿಲಷನ್ ಶಿಪ್ನಲ್ಲಿದ್ದಾರೆ. ಇಬ್ಬರು ಕುಡಿತಕ್ಕೆ ದಾಸರಾಗಿದ್ದು ಮನೆ ಬಾಡಿಗೆ ಕಟ್ಟಲು ಸಹ ಅವರ ಬಳಿ ಹಣ ಇಲ್ಲದ ಕಾರಣ ಕಳ್ಳತನ ಮಾಡಿದ್ದಾರೆ ಎಂದು ಗೊತ್ತಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?