International News
ಅರೇಬಿಕ್ ಸಾಲುಗಳನ್ನು ತಪ್ಪಾಗಿ ತಿಳಿದು ಯುವತಿಗೆ ಕಿರುಕುಳ..!
![](https://risingkannada.com/wp-content/uploads/2024/02/2dbss45o_pakistan-woman_625x300_26_February_24.jpg)
ಪಾಕಿಸ್ತಾನದಲ್ಲಿ ಅರೇಬಿಕ್ ಸಾಲುಗಳನ್ನು ಬರೆದಿದ್ದ ಕುರ್ತಾ ಧರಿಸಿದ್ದ ಯುವತಿಗೆ ಸಾಮೂಹಿಕ ಕಿರುಕುಳ ನೀಡಲಾಗಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿ ಯುವತಿಯನ್ನು ರಕ್ಷಿಸಿದ್ದಾರೆ. ಲಾಹೋರ್ ನ ರೆಸ್ಟೋರೆಂಟ್ ಒಂದಕ್ಕೆ ಯುವತಿಯೊಬ್ಬಳ್ಳು ಅರೇಬಿಕ್ ಭಾಷೆಯಲ್ಲಿದ್ದ ಕುರ್ತಾ ಧರಿಸಿ ಬಂದಿದ್ದಳು. ಅಲ್ಲಿದ್ದ ಕೆಲವರು ಇದು ಖುರಾನ್ ನ ಸಾಲುಗಳು ಎಂದು ತಿಳಿದು ಧರ್ಮ ನಿಂದನೆ ಆರೋಪ ಹೊರಿಸಿ ಸಾಮೂಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಯುವತಿ ಧರಿಸಿದ್ದ ಕುರ್ತಾ ತೆಗೆಯಲು ಆಗ್ರಹಿಸಿ ಕಾರಣ ಪೊಲೀಸರನ್ನು ಕರೆಸಿ ಯುವತಿಯನ್ನು ರಕ್ಷಿಸಲಾಗಿದೆ.
ಯುವತಿ ರಕ್ಷಣೆ ವಿಡಿಯೋವನ್ನು ಪೊಲೀಸರು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಯುವತಿಯೊಬ್ಬಳು ಮುಖ ಮುಚ್ಚಿಕೊಂಡು ಹೋಗುತ್ತಿರುವ ದೃಶ್ಯವಿದೆ. ಅಲ್ಲದೆ ಯುವತಿಯನ್ನು ರಕ್ಷಿಸಿದ ಮಹಿಳಾ ಪೊಲೀಸ್ ಅಧಿಕಾರಿಯ ಕುರಿತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಸಯ್ಯದಾ ಶೆರ್ ಬಾನೋ ನಖ್ವಿ ಯುವತಿಗೆ ಕಿರುಕುಳ ನೀಡದಂತೆ ಮನವಿ ಮಾಡುತ್ತಿರುವ ದೃಶ್ಯಾವಳಿಯೂ ಇದೆ.
ಕುರ್ತಾ ಧರಿಸಿದ್ದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿ ಯುವತಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಯುವತಿ ಕ್ಷಮೆ ಯಾಚನೆ ಮಾಡಿದ್ದಾಳೆ. ‘‘ನನಗೆ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಕುರ್ತಾ ವಿನ್ಯಾಸ ಚೆನ್ನಾಗಿದೆ ಎಂಬ ಕಾರಣಕ್ಕೆ ಅದನ್ನು ಧರಿಸಿದ್ದೆ’’, ಎಂದು ಯುವತಿ ಹೇಳಿದ್ದಾಳೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?