Featured
ನೆಗೆಟಿವ್ ಟಾಕ್ ಮಧ್ಯೆಯೂ ಒಂದೇ ದಿನಕ್ಕೆ 130 ಕೋಟಿ ಗಳಿಸಿದ ಪ್ರಭಾಸ್ ಸಾಹೋ..! ಹೊಸ ಇತಿಹಾಸ ಸೃಷ್ಟಿ..!
ರೈಸಿಂಗ್ ಕನ್ನಡ ಸಿನಿಮಾ : ಪ್ರಭಾಸ್ ಮತ್ತು ಶ್ರದ್ಧಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಾಹೋಗೆ ಮಿಶ್ರಪ್ರತಿಕ್ರಿಯೆ ಬಂದರೂ, ಬಾಕ್ಸಾಫೀಸ್ ಗಳಿಕೆಯಲ್ಲಿ ಮಾತ್ರ ಧೂಳೇಬ್ಬಿಸಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 130 ಕೋಟಿಗಳಿಸಿದ್ದು, ಭಾರತೀಯ ಚಿತ್ರರಂಗ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಾಹೋ ಮೊದಲ ದಿನವೇ 130 ಕೋಟಿ ಗಳಿಸಿದೆ ಎಂದು ಯುವಿ ಕ್ರಿಯೇಷನ್ಸ್ ಅಧಿಕೃತ ಟ್ವೀಟ್ ಮಾಡಿದೆ.
ಇಷ್ಟೇ ಅಲ್ಲದೆ, ಸಾಹೋ ಸಿನಿಮಾ ವಿರುದ್ಧ ಬಾಲಿವುಡ್ ಸಿನಿ ಪಂಡಿತರು ನೆಗೆಟಿವ್ ಆಗಿ ವಿಮರ್ಶೆ ಮಾಡಿದ್ದಾರೆ ಎಂದು ಪ್ರಭಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ದಿನದ ಗಳಿಕೆ ನೋಡಿದ್ಮೇಲೆ, ಸಿನಿಮಾ ಪಂಡಿತರಿಗೆ ಭ್ರಮನಿರಸನ ಆಗಿರುತ್ತೆ ಎಂದು ಕಾಲೆಳೆದಿದ್ದಾರೆ. ಸಾಹೋ ಸಿನಿಮಾ ಹಾಲಿವುಡ್ ರೇಂಜ್ನಲ್ಲಿದೆ. ಆದ್ರೆ, ಬಾಲಿವುಡ್ನವರಿಗೆ ಸೌತ್ ಸ್ಟಾರ್ ಸಿನಿಮಾ ಬೆಳೆಸೋದು ಇಷ್ಟವಿಲ್ಲ. ಹೀಗಾಗಿ, ಈ ರೀತಿಯ ನೆಗೆಟಿವ್ ವಿರ್ಮಶೆ ಹಾಗೂ ಕಾಮೆಂಟ್ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ.
ಖಾನ್ಸ್ ಇಲ್ಲ.. ಶಂಕರ್-ರಾಜಮೌಳಿ ಇಲ್ಲ.. ರಜಿನಿಕಾಂತ್ ಇಲ್ಲ..!
ಹೀಗೊಂದು ತಿರುಗೇಟು ಕೊಡ್ತಿರೋದು ಪ್ರಭಾಸ್ ಅಭಿಮಾನಿಗಳು. ಸಾಹೋ ಸಿನಿಮಾದಲ್ಲಿ ಯಾವುದೇ ಬಿಗ್ ಬಿಗ್ ಬಾಲಿವುಡ್ ಸ್ಟಾರ್ಗಳಾಗಲಿ, ಖಾನ್ಗಳಾಗಲಿ ಇಲ್ಲ. ನಿರ್ದೇಶಕ ರಾಜಮೌಳಿ, ಶಂಕರ್ ಇಲ್ಲ. ಸೂಪರ್ಸ್ಟಾರ್ ರಜನಿಕಾಂತ್ ಇಲ್ಲ. ಇರೋದು ಕೇವಲ ಪ್ರಭಾಸ್ ಮಾತ್ರ. ಸಾಹೋ ಮೊದಲ ದಿನದ ಗಳಿಕೆ ನೋಡಿದ್ರೆ, ಪ್ರಭಾಸ್ ಸ್ಟಾರ್ ಡಮ್ ಅರ್ಥವಾಗುತ್ತೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಎರಡನೇ ದಿನವೂ ಸಾಹೋ ಗಳಿಕೆ ಜೊರಾಗಿಯೇ ಇದೆ ಎಂದು ಬಾಕ್ಸ್ಆಫೀಸ್ ರಿಪೋರ್ಟ್ ಹೇಳಿದೆ. ಇನ್ನು ಭಾನುವಾರ ಹಾಗೂ ಸೋಮವಾರ ಗಣಪತಿ ಹಬ್ಬದ ರಜೆ ಇದೆ. ಹೀಗಾಗಿ ನಾಲ್ಕು ದಿನಗಳ ಗಳಿಕೆ 500 ಕೋಟಿ ದಾಟಿದರೂ ಅಚ್ಚರಿಯಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ನೆಗೆಟಿವ್ ಕಾಮೆಂಟ್ ಮಧ್ಯೆಯೂ ಈ ರೀತಿ ಗಳಿಕೆ ನೋಡಿ, ವಿಮರ್ಶಕರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ .
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?