ರೈಸಿಂಗ್ ಕನ್ನಡ ಅಡುಗೆ : ಹೋಳಿಗೆ ಮಾಡೋದು ಒಂದು ಕಲೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೋಳಿಗೆ ಮಾಡ್ತಾರೆ. ಇತ್ತೀಚೆಗಂತೂ ಬಾದಾಮಿ, ಕರ್ಜೂರ ಸೇರಿದಂತೆ ಡ್ರೈಫ್ರೂಟ್ಸ್ ಹೋಳಿಗೆಯೂ ಫೇಮಸ್ ಆಗ್ತಿದೆ. ನಾವೀಗ ತೊಗರಿ ಬೇಳೆ ಹೋಳಿಗೆ ಮಾಡುವ ವಿಧಾನವನ್ನ ನೋಡೋಣ.
ತೊಗರಿ ಹೋಳಿಗೆಗೆ ಬೇಕಾಗುವ ಪದಾರ್ಥಗಳು :
ತೊಗರಿ ಬೇಳೆ – 1/2 ಕೆ.ಜಿ.
ಮೈದಾ ಹಿಟ್ಟು – ¼ ಕೆ.ಜಿ.
ಬೆಲ್ಲ – 1/2 ಕೆ.ಜಿ.
ಎಣ್ಣೆ – 1/4 ಕೆ.ಜಿ.
ಚಿರೊಟಿ ರವೆ – 300 ಗ್ರಾಂ
ತೆಂಗಿನ ಕಾಯಿ ತುರಿ – 1 ಕಪ್
ಏಲಕ್ಕಿ – 4 ರಿಂದ 5
ಅರಿಶಿನ – 1 ಚಿಟಿಕೆ
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ 1 ಲೀಟರ್ ನೀರಿಗೆ 2 ಟೀ ಸ್ಪೂನ್ ಎಣ್ಣೆ ಜೊತೆ ಅರ್ಧ ಕೆಜಿ ತೊಗರಿ ಬೇಳೆ ಹಾಕಿ ಬೇಯಿಸಿಕೊಳ್ಳಿ. ಬೇಳೆ ಮುಕ್ಕಾಲು ಭಾಗ ಬೆಂದಾಗ ತೆಂಗಿನಕಾಯಿ ತುರಿ ಹಾಗೂ ಬೆಲ್ಲ ಹಾಕಿ ಚೆನ್ನಾಗಿ ಕಲಸಿ. ಬೆಲ್ಲ ಪಾಕ ಬಂದಾಗ ಕೆಳಗಿಳಿಸಿ ಏಲಕ್ಕಿಯೊಂದಿಗೆ ಗಟ್ಟಿಯಾಗಿ ರುಬ್ಬಿ ಹೂರಣ ತಯಾರಿಸಿಕೊಳ್ಳಿ. ನಂತರ ಚಿರೊಟಿ ರವೆ, ಮೈದಾ ಹಿಟ್ಟನ್ನು ಜರಡಿ ಮಾಡಿ, ಅದನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಅರಿಶಿನ, ಮೈದಾ, ಚಿರೊಟಿ ರವೆ ಮತ್ತು ಸ್ವಲ್ಪಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ 1 ಗಂಟೆ ಕಾಲ ನೆನೆಯಲು ಬಿಡಿ.
ಒಂದು ಗಂಟೆ ಬಳಿಕ, ಕೈಗೆ ಎಣ್ಣೆ ಸವರಿಕೊಂಡು ಹಿಟ್ಟಿನ ಒಂದು ಉಂಡೆಯನ್ನು ಗುಂಡಾಗಿ ಮಾಡಿಕೊಂಡು ಅದರಲ್ಲಿ ಹೂರಣದ ಉಂಡೆಯನ್ನು ಇಟ್ಟು ಮುಚ್ಚಿ. ನಂತರ ಅಗಲವಾದ ಪ್ಲಾಸ್ಟಿಕ್ ಕವರ್ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆ ಸವರಿ ಹೂರಣ ಮುಚ್ಚಿದ ಉಂಡೆಯನ್ನು ದುಂಡಾಗಿ ತಟ್ಟಿ ಚಪಾತಿ ಕಾವಲಿನ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎರಡೂ ಕಡೆ ಬೇಯಿಸಿ. ತುಪ್ಪ ಅಥವಾ ಬಿಸಿ ಹಾಲಿನೊಂದಿಗೆ ಹೋಳಿಗೆ ತಿಂದರೇ, ಅದ್ಭುತ ರುಚಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?