Featured
ಸಿಗಂಧೂರು ಚೌಡೇಶ್ವರಿ ಮಹಿಮೆ ನಿಮಗೆಷ್ಟು ಗೊತ್ತು..? ಭಕ್ತರಿಗೆ ಗೊತ್ತಿಲ್ಲದ ಆ ವಿಶೇಷತೆಗಳೇನು ಗೊತ್ತಾ..?
ಶಿವಮೊಗ್ಗ : ಸಿಗಂಧೂರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿರೋ ಸ್ವರ್ಗ. ಕಾಡಿನಿಂದ ಆವೃತ್ತವಾದ ಸಿಗಂಧೂರು ಸಣ್ಣ ಊರು. ಗಲಾಟೆ, ಗದ್ದಲಗಳೇ ಇಲ್ಲದೆ ಪ್ರಶಾಂತವಾಗಿರೋ ಸ್ಥಳ. ಸಾಗರ ಪೇಟೆಯಿಂದ 45 ಕಿ.ಮೀ. ದೂರದಲ್ಲಿ ತುಮರಿ ಎಂಬ ಊರಿದೆ. ಅಲ್ಲೇ ಇದೇ ಪ್ರಸಿದ್ಧ ತೀರ್ಥ ಕ್ಷೇತ್ರ ಸಿಂಗಧೂರು. ಇಲ್ಲಿನ ದೇವತೆಯೇ ಚೌಡೇಶ್ವರಿ.
ಸಿಗಂಧೂರಿನ ಚೌಡೇಶ್ವರಿ ದೇವಿಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿಯೇ, ಚೌಡೇಶ್ವರಿ ದೇವಿ ಎಂದು ಜನ ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಶರಾವತಿ ಹಿನ್ನೀರಿನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಸೃಷ್ಟಿಯಾದ ನಡುಗಡ್ಡೆಗಳು ಇಲ್ಲಿನ ಪ್ರಮುಖ ಅಕರ್ಷಣೆ . ಇವುಗಳ ಜೊತೆಗೆ ಚೌಡೇಶ್ವರಿ ದೇವಿಯನ್ನು ಸಿಗಂಧೂರು, ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದ ಜನರ ಗಮನ ಸೆಳೆಯುವಂತೆ ಮಾಡಿದೆ.
ಇತರೆ ಧಾರ್ಮಿಕ ಕ್ಷೇತ್ರಗಳಲ್ಲಿ ಇಲ್ಲದ ವಿಶೇಷತೆಗಳು ಸಿಗಂಧೂರಿನಲ್ಲಿವೆ. ಕಳ್ಳರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ದತಿ ಇದೆ. ಜಮೀನು, ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯೇ ಕಾವಲಿರುತ್ತಂತೆ. ಅಲ್ಲಿ ಕಳ್ಳತನಗಳು ಆಗುವುದಿಲ್ಲ ಎಂಬ ಪ್ರತೀತಿ. ಹೀಗಾಗೀಯೇ ಇಂದಿಗೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೂಲೆ-ಮೂಲೆಗಳ ಊರುಗಳಲ್ಲಿ ಸಿಗಂಧೂರು ಚೌಡೇಶ್ವರಿ ದೇವಿಯ ಕಾವಲಿದೆ ಎಂಬ ಬೋರ್ಡ್ಗಳನ್ನು ನಾವು ಗಮನಿಸಬಹುದು .
ಪ್ರತಿ ವರ್ಷ ಮಕರ ಸಂಕ್ರಾತಿ ( ಜನವರಿ 14 ಅಥವಾ 15 ರಂದು ) ಇಲ್ಲಿ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಸೇರುತ್ತಾರೆ. ದೇವಾಸ್ಥಾನದಲ್ಲಿ ಅಭೀಷೇಕ, ಮಹಾಭಿಷೇಕ, ಪಂಚಾಮೃತ ಪೂಜೆ, ಅಲಂಕಾರ ಪೂಜೆಗಳು ನಡೆಯುತ್ತವೆ. ನಿತ್ಯ ಬೆಳಗಿನ ಜಾವ 4.30 ರಿಂದ 5 ಗಂಟೆವರೆಗೆ, ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2, ಸಂಜೆ 6 ರಿಂದ 7 ಗಂಟೆವರೆಗೆ ಪೂಜೆ, ದರ್ಶನಕ್ಕೆ ಅವಕಾಶ ಇರುತ್ತದೆ.
ಹಿನ್ನೀರು ದಾಟಿದ ನಂತರ ಕಾಡಿನ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ ಚೌಡಮ್ಮ ದೇವಿಯ ದರ್ಶನವಾಗುತ್ತದೆ. ಲಾಂಚ್ಗೆ ಸಣ್ಣ ಪ್ರಮಾಣದ ಶುಲ್ಕ ವಿದೆ. ವಾಹನಗಳನ್ನೂ ಲಾಂಚ್ನಲ್ಲೇ ಹಾಕಿಕೊಂಡು ದಾಟಬಹುದು. ಒಮ್ಮೆ ಬಿಡುವು ಮಾಡಿಕೊಂಡು, ಸಿಂಗಧೂರಿಗೆ ಹೋಗಿ ತಾಯಿ ಚೌಡೇಶ್ವರಿಯ ದರ್ಶನ ಮಾಡಿಕೊಂಡು ಬನ್ನಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?