Featured
POP ಗಣೇಶ ಪ್ರತಿಷ್ಠಾಪನೆಗೆ ತಾರೆಯರ ವಿರೋಧ..! : ಯಾರು ಏನೆಲ್ಲಾ ಹೇಳಿದ್ರು..?
![](https://risingkannada.com/wp-content/uploads/2019/08/ganesha.jpg)
ಬೆಂಗಳೂರು : ಪ್ರಕೃತಿಗೆ ಹಾನಿ ಉಂಟುಮಾಡುವ ಪಿಒಪಿ ಗಣೇಶ ಪ್ರತಿಷ್ಠಾಪನೆ ವಿರುದ್ಧ ಎಷ್ಟೇ ಜಾಗೃತಿ ಮೂಡಿಸಿದ್ರೂ, ಎಷ್ಟೇ ವಿರೋಧ ವ್ಯಕ್ತವಾದ್ರೂ, ಪಿಒಪಿ ಗಣೇಶ ಮಾತ್ರ ಕಡಿಮೆ ಆಗ್ತಿಲ್ಲ. ಇದರ ಹಿಂದೆ ದೊಡ್ಡ ಮಾಫಿಯಾನೇ ಇದೆ ಅನ್ನೋದು ಬಹಳಷ್ಟು ಮಂದಿಗೆ ಗೊತ್ತು. ಆದ್ರೂ, ಸರ್ಕಾರ ಆಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಷ್ಟಾದ್ರೂ, ಪಿಒಪಿ ವಿರುದ್ಧ ಧ್ವನಿ ಮಾತ್ರ ನಿಂತಿಲ್ಲ. ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಲು ಹಲವು ತಾರೆಯರು, ಸೆಲಬ್ರೆಟಿಗಳು ಮನವಿ ಮಾಡಿದ್ದಾರೆ.
ಪರಿಸರ ಸ್ನೇಹಿ ಗಣಪತಿ ಪೂಜಿಸಿ : ಸಾಹಿತಿ ಡಾ.ಎಸ್.ಎಲ್.ಭೈರಪ್ಪ
ಪಿಒಪಿ ಮೂರ್ತಿಗಳು ವಿಷಾಕಾರಕ. ಇವುಗಳಿಂದ ರಾಸಾಯನಿಕ ಪದಾರ್ಥಗಳಿಂದ ಕೆರೆ-ಕುಂಟೆ, ನದಿಗಳು ಮಲಿನವಾಗುತ್ತವೆ. ನೀರಿನಲ್ಲಿರುವ ಜಲಚರಗಳು, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಹಾಗೂ ಮನುಷ್ಯರ ಜೀವಕ್ಕೂ ಕಂಟಕ. ಪ್ರತಿಯೊಬ್ಬರು ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸಿ, ಆರಾಧಿಸಬೇಕು. ಮೊದಲು ಪಿಒಪಿ ಮೂರ್ತಿಗಳ ತಯಾರಿಕರನ್ನು ತಡೆಗಟ್ಟಬೇಕು. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಂಡರೆ, ಜನರೂ ಸಹ ಪರಿಸರ ಸ್ನೇಹಿ ಗಣಪತಿಯನ್ನು ಆರಾಧಿಸುತ್ತಾರೆ .
ಮಣ್ಣಲ್ಲಿ ಮಣ್ಣಾಗುವ ಮೂರ್ತಿ ಪೂಜಿಸಿ : ಸಾಹಿತಿ ವೆಂಕಟೇಶಮೂರ್ತಿ
ಪರಿಸರ ಮತ್ತು ಕೆರೆ-ಬಾವಿಯಂತಹ ನೀರಿನ ಮೂಲಗಳ ಹಿತದೃಷ್ಟಿಯಿಂದ ಪಿಒಪಿ ಗಣಪತಿ ಪೂಜಿಸಬಾರದು. ಪರಿಸರದಲ್ಲಿ ಬೆರೆಸಿದರೆ ಅಪಾಯಕಾರಿ. ಗಣೇಶ ಮಣ್ಣಿನಿಂದಲೇ ಉದ್ಭವವಾಗಿರುವುದರಿಂದ ವಿಸರ್ಜನೆ ವೇಳೆ ನೀರು ಮತ್ತು ಮಣ್ಣಿನಲ್ಲಿಯೇ ಬೆರೆತ್ತುಹೋಗುವ ಗಣಪತಿಗಳನ್ನು ನಾವೆರಲ್ಲರೂ ಪೂಗಿಸಬೇಕಿದೆ. ಭಕ್ತಿ ಜತೆಗೆ ವೈಜ್ಞಾನಿಕವಾಗಿಯೂ ಮಣ್ಣಿನಲ್ಲಿ ಉತ್ಸವ ಆಚರಣೆ ಮಾಡುವುದು ನಡೆಯಬೇಕು.
ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿ: ನಟ ಪುನೀತ್ ರಾಜ್ಕುಮಾರ್
ಮುಂದಿನ ಪೀಳಿಗೆಗೆ ಪರಿಶುದ್ಧವಾದ ಪ್ರಕೃತಿಯನ್ನು ಉಳಿಸಿ ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನೀರು ಮಲಿನವಾಗದಂತೆ ತಡೆಯುವುದು ಬಹಳ ಮುಖ್ಯ. ಪಿಒಪಿ ಮೂರ್ತಿಗಳ ಪ್ರತಿಷ್ಟಾಪನೆ ಮಾಡಬೇಡಿ. ಮಣ್ಣಿನ ಗಣೇಶ ಅರಾಧಿಸಿ ತಮ್ಮ ಮನೆಯ ಕೈ ತೋಟ ಅಥವಾ ತಮಗೆ ಅನುಕೂಲವಾದ ಕಡೆ ವಿಸರ್ಜನೆ ಮಾಡಿ. ಆ ಮಣ್ಣಿನಲ್ಲಿ ಒಂದು ಗಿಡ ನೆಡಿ. ಪ್ರಕೃತಿಗೆ ಪೂರಕವಾಗಿ ಹಬ್ಬವನ್ನು ಆಚರಿಸೋಣ. ಎಲ್ಲರೂ ಕಡ್ಡಾಯವಾಗಿ ಮಣ್ಣಿನ ಗಣೇಶನಿಂದಲೇ ಹಬ್ಬ ಆಚರಿಸೋಣ.
ಪ್ರಕೃತಿ ಪೂಜಿಸೋಣ : ನಟ ಕಿಚ್ಚ ಸುದೀಪ್
ನಾವು ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ಮತ್ತೆ ನಮಗೆ ಕೊಡುತ್ತಿರುವುದನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ಹೀಗಾಗಿ, ಈ ಬಾರಿ ವಿಘ್ನ ನಿವಾರಕನ ಹಬ್ಬಕ್ಕೆ ಪಿಒಪಿ ಗಣೇಶ ಮೂರ್ತಿಗಳನ್ನು ಉಪಯೋಗಿಸದೆ, ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾತ್ರ ಬಳಸಿ ಪ್ರಕೃತಿ ಮಾತೆಯನ್ನು ಕಾಪಾಡೋಣ. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಿಒಪಿ ಪೂಜಿಸಿದರೆ ಗಾಳಿ, ನೀರು ಮತ್ತು ಪ್ರಕೃತಿ ಹಾಳಾಗಲಿದೆ.
ಸೀಡ್ ಗಣಪ ಪೂಜಿಸಿ : ನಟಿ ಹರಿಪ್ರಿಯಾ
ನಮಗೆ ಪ್ರತಿ ಹಬ್ಬ ಕೂಡ ನೆನಪಿನಲ್ಲಿ ಉಳಿಯುವಂತಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಿ ನಂತರ ವಿಸರ್ಜನೆ ವೇಳೆ ಪಾಟ್ ನಲ್ಲಿಯೇ ವಿಸರ್ಜಸಿ. ಅದರಲ್ಲಿ ಪರಿಮಳ ಬೀರುವ ಹೂವು, ಆರೋಗ್ಯಕ್ಕೆ ಉತ್ತಮವಾದ ಆಹಾರವಾಗುವ ಹಣ್ಣು ಅಥವಾ ಯಾವುದೇ ಮರದ ಬೀಜಗಳನ್ನು ನೆಡಿ. ನೀವು ಈ ನೆನೆಪು ಮೆಲಕು ಹಾಕುವಾಗಲೆಲ್ಲಾ ಗಣೇಶ ಹಬ್ಬ ನೆನಪಿನಲ್ಲಿ ಉಳಿಯುತ್ತೆ.
ಪ್ರಕೃತಿಯನ್ನು ಆರಾಧಿಸೋಣ : ನಟಿ ಮಾನ್ವಿತಾ ಹರೀಶ್
ನಾನು ಪಿಒಪಿ ಅಥವಾ ಮಣ್ಣಿನ ಗಣಪತಿಗಿಂತ ಹೆಚ್ಚಾಗಿ ಮನದಲ್ಲಿಯೇ ಪ್ರತಿ ದಿನ, ಪ್ರತಿ ಕ್ಷಣ ದೇವರನ್ನು ನೆನೆಯುತ್ತೇನೆ. ಪ್ರತಿದಿನ ನನ್ನ ಮನಸ್ಸು ಮತ್ತು ಗಣೇಶ ಮಾತಾಡಿಕೊಳ್ಳುತ್ತೇವೆ. ಗಣೇಶನನ್ನು ಪ್ರತಿಷ್ಠಾಪಿಸಿ, ಶಬ್ಧ ಮಾಲಿನ್ಯ ಮಾಡಿ ಕೊನೆಗೆ ಕೊಳಚೆ ನೀರಿನಲ್ಲಿ ವಿಸರ್ಜನೆ ಮಾಡಿದರೆ ಸುಮ್ಮನೆ ಬಿಡುತ್ತಾ ? ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಎಲ್ಲರೂ ಪ್ರಕೃತಿಯನ್ನು ಗೌರವಿಸಿ ಮಣ್ಣಿನ ಗಣಪತಿಯನ್ನು ಆರಾಧಿಸೋಣ.
ಪಿಒಪಿ ಗಣಪತಿಯನ್ನು ಬಳಸುವುದರಿಂದ ನೀರು ಮತ್ತು ನೀರಿನಲ್ಲಿ ವಾಸವಾಗಿರುವ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ನಾವೆಲ್ಲರೂ ಪರಿಸರ ರಕ್ಷಣೆಗೆ ಕೈ ಜೋಡಿಸೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?