Connect with us

ರಾಜ್ಯ

ಜಗತ್ತಿನ ಮೊದಲ ಓಂ ಆಕಾರದ ದೇಗುಲ:
ಹೇಗಿದೆ ಗೊತ್ತಾ ವಿನ್ಯಾಸ ಮತ್ತು ನಿರ್ಮಾಣ?

ರಾಜಸ್ಥಾನ : ಅದು ವಿಶ್ವದಲ್ಲೇ ಮೊದಲ ಓಂ ಆಕಾರದ ದೇವಾಲಯ. ರಾಮಮಂದಿರದ ಬೆನ್ನಲ್ಲೆ ಉದ್ಘಾಟನೆಗೆ ಸಿದ್ದವಾಗಿರುವ ಈ ದೇವಾಲಯ ಓಂ ಆಕಾರದಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಂಡರೇ ಇಡೀ ವಿಶ್ವದಲ್ಲೇ ಓಂ ಆಕಾರದಲ್ಲಿರುವ ಮೊದಲ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ. ಇನ್ನು ದೇಗುಲ ನಿರ್ಮಾಣವಾಗುತ್ತಿರವ ಆ ಗ್ರಾಮ ಪಾಪೂಲ್ಯಾರಿಟಿ ಪಡೆದುಕೊಳ್ಳಲಿದೆ.. ಇದೀಗ ರಾಮಮಂದಿರ ನಿರ್ಮಾಣವಾಗಿ ಜಗತ್ತನ್ನು ದೇಶದತ್ತ ನೋಡುವಂತೆ ಮಾಡಿದೆ. ಈ ದೇಗುಲವೂ ಸಮರ್ಪಣೆಯಾದ್ರೆ, ಮತ್ತೊಂದು ಸುತ್ತಿಗೆ ಭಾರತ ಧಾರ್ಮಿಕವಾಗಿ ಪ್ರಜ್ವಲಿಸಲಿದೆ.

ಭಾರತದ ದೇವಾಲಯಗಳು ಕೇವಲ ಕಟ್ಟಡವಾಗಿ ಉಳಿದಿಲ್ಲ, ಅವು ಸಂಸ್ಕೃತಿ-ಪರಂಪರೆಯ ಪ್ರತಿಬಿಂಬವಾಗಿದ್ದು, ಅದರ ಭವ್ಯತೆ ಜಗತ್ಪ್ರಸಿದ್ಧವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಯೋಧ್ಯೆಯ ಶ್ರೀರಾಮ ಮಂದಿರ. ಇದೇ ಕಾರಣದಿಂದ ಪ್ರಪಂಚದಾದ್ಯಂತ ಜನರು ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ಇದಲ್ಲದೆ, ಈ ದೇವಾಲಯಗಳ ಸುಂದರವಾದ ವಾಸ್ತುಶಿಲ್ಪವು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ.



ದೇಶದಲ್ಲಿ ಶೀಘ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಇಂತಹದೇ ಮತ್ತೊಂದು ದೇವಾಲಯ ನಿರ್ಮಾಣವಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಓಂ’ ಆಕಾರದ ದೇವಾಲಯ ಇದಾಗಿದೆ. ಈ ಓಂ ಆಕಾರದ ದೇವಾಲಯವು ತುಂಬಾ ಸುಂದರವಾಗಿದೆ. ಅಲ್ಲದೆ, ಓಂ ಆಕಾರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದೇವಾಲಯ ಇದು. ಈ ದೇವಾಲಯವು ಭೂಮಿಯಿಂದ ಮಾತ್ರವಲ್ಲದೆ ಬಾಹ್ಯಾಕಾಶದಿಂದಲೂ ಬಹಳ ಸುಂದರವಾಗಿ ಕಾಣುತ್ತದೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ಭವ್ಯವಾದ ಓಂ ಆಕಾರದ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇದೇ ವರ್ಷ ಸಿದ್ಧವಾಗಲಿದೆ. 250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು 10-19 ಫೆಬ್ರವರಿ 2024 ರ ನಡುವೆ ನಡೆಯಲಿದೆ.

ಈ ಶಿವನ ದೇವಾಲಯದಲ್ಲಿ 1008 ವಿವಿಧ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಓಂ ಆಕಾರದ ಈ ದೇವಾಲಯದ ಆವರಣದಲ್ಲಿ ಒಟ್ಟು 108 ಕೊಠಡಿಗಳಿವೆ. ಇದರ ಗೋಪುರವು 135 ಅಡಿ ಎತ್ತರವಾಗಿದ್ದು, ದೇವಾಲಯದ ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿಯಿದೆ. ಮೇಲ್ಭಾಗದಲ್ಲಿ ಮಹಾದೇವನ ಶಿವಲಿಂಗವನ್ನು ಸ್ಥಾಪಿಸಲಾಗಿದೆ.

1995ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನಡೆದಿದ್ದು, ಕಳೆದ 25 ವರ್ಷಗಳಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಓಂ ಆಶ್ರಮ ಜದನ್ ಪಾಲಿಯನ್ನು ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಓಂನ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿದೆ. ಭವ್ಯವಾದ ದೇಗುಲ ಲೋಕಾರ್ಪಣೆ ಮಾಡಲು ಅಂತಿಮ ಸಿದ್ದತೆ ನಡೆಯುತ್ತಿದೆ..

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ