ಸಿನಿಮಾ
6ನೇ ವಾರ, 36ನೇ ದಿನ,196 ಚಿತ್ರಮಂದಿರಗಳಲ್ಲಿ ಕಾಟೇರ ಸದ್ದು..!
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಡಿಸೆಂಬರ್ 28, 2023ರಂದು ಕನಾ೯ಟಕದಾದ್ಯಂತ ಬಿಡುಗಡೆ ಗೊಂಡಿದೆ..ಇದೀಗ ಆರನೇ ವಾರದತ್ತ ದಾಪುಗಾಲು ಹಾಕುತ್ತಿದೆ. ಕನ್ನಡ ಭಾಷೆಯಲ್ಲಿ ರಿಲೀಸ್ ಆದಂತಹ ಚಿತ್ರ 200ಕೋಟಿಯ ಗಡಿಯನ್ನು ದಾಟಿದೆ. ತರುಣ್ ಸುಧೀರ್ ನಿದೇ೯ಶನದ ಕಾಟೇರ 80ರ ದಶಕದಲ್ಲಿ ರೈತರನ್ನ, ಹಾಗೂ ಹಿಂದುಳಿದ ಜನಾಂಗವನ್ನು ನಮ್ಮ ಈ ಸಮಾಜ ಹೇಗೆ ನಡೆಸಿಕೊಂಡಿತ್ತು ಎನ್ನುವ ಕಥಾ ಹಂದರವನ್ನು ಒಳಗೊಂಡಿದೆ..ಹೀಗಾಗಿಯೇ ಸಿನಿಮಾ ಜನರ ಮನ್ನಣೆ ಪಡೆದುಕೊಂಡಿದೆ.
ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ಡಿ ಬಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ, ಡ್ಯಾನ್ಸ್ ಕೂಡ ಅಷ್ಟೆ ಅದ್ಭುತವಾಗಿ ಮಾಡಿದ್ದಾರೆ. ಇನ್ನು ನಾಯಕಿ ಆರಾಧನಾ ಕೂಡ ಮೊದಲನೇ ಚಿತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರವು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಈ ಬಾರಿ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಅತಿ ಹೆಚ್ಚು ಪ್ರಶಸ್ತಿಗಳನ್ನ ‘ಕಾಟೇರ’ ಪಡೆದುಕೊಂಡಿದೆ.
ತರುಣ್ ಕಿಶೋರ್ ರವರ ನಿರ್ದೇಶನದ ‘ಕಾಟೇರ’ 2023ರ ಅತ್ಯುತ್ತಮ ಚಲನಚಿತ್ರ, ನಟಿ ಆರಾಧನಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ, ಶ್ರುತಿ ಅತ್ಯುತ್ತಮ ಪೋಷಕ ನಟಿ, ತರುಣ್ ಕಿಶೋರ್ ಹಾಗೂ ಜಡೇಶ್ ಕೆ. ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಸಿನಿಮಾಗೆ ಸಂಭಾಷಣೆ ಬರೆದ ಮಾಸ್ತಿಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ನೀಡಲಾಗಿದೆ. ‘ಪಸಂದಗಾವ್ನೆ’ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಾಟೇರ ಸಿನಿಮಾ 6ನೇ ವಾರ ,36 ನೇ ದಿನ, 196 ಚಿತ್ರಮಂದಿರಗಳಲ್ಲಿ ಮತ್ತು 63 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ 200 ಕೋಟಿಯ ಗಡಿ ದಾಟುತ್ತ ಮುನ್ನುಗ್ಗುತ್ತಿದೆ ಒಟ್ಟಿನಲ್ಲಿ 2023ರ ಅತ್ಯುತ್ತಮ ಚಿತ್ರ ವಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?