Featured
ಸಾಹೋ ಸಿನಿಮಾದ ಆ ಹಾಡು ಮತ್ತು ಪೋಸ್ಟರ್ ಕಾಪಿನಾ..? ಬೆಂಗಳೂರು ಕಲಾವಿದೆಯ ಆರೋಪವೇನು..?

ಬೆಂಗಳೂರು : ಪ್ರಭಾಸ್ ಮತ್ತು ಶ್ರದ್ಧಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಾಹೋ ರಿಲೀಸ್ ಆಗಿದೆ. ಆದ್ರೆ, ಸಾಹೋ ಸಿನಿಮಾ ಮೇಲೆ ಬೆಂಗಳೂರು ಮೂಲಕ ಕಲಾವಿದೆ ಕಾಪಿ ರೈಟ್ ಆರೋಪ ಮಾಡಿದ್ದಾರೆ. ಸಾಹೋ ಸಿನಿಮಾದಲ್ಲಿ ಬರುವ Baby Won’t You Tell Me ಹಾಡಿನಲ್ಲಿ ಬಳಸಿರೋ ಪೋಸ್ಟರ್ ಹಾಗೂ ಸೆಟ್ ಡಿಸೈನ್ ನನ್ನದು ಎಂದು ಕಲಾವಿದೆ ಆರೋಪಿಸಿದ್ದಾರೆ.
ಹೀಗೆ ಗಂಭೀರ ಆರೋಪ ಮಾಡಿರೋ ಕಲಾವಿದೆ
ಹೆಸರು ಶಿಲೋ ಶಿವ್ ಸುಲೇಮನ್. ಈಕೆ 2014ರಲ್ಲಿ ನಡೆದಿದ್ದ ಬರ್ತಿಂಗ್ ಮ್ಯಾನ್ ಫೆಸ್ಟಿವಲ್ನಲ್ಲಿ
ಇದೇ ರೀತಿಯ ಕಲಾಕೃತಿಯನ್ನ ಪ್ರದರ್ಶನ ಮಾಡಿದ್ರು. ಅದಕ್ಕೆ ಸಂಬಂಧಿಸಿದ, 2014ರಲ್ಲಿ ಪ್ರದರ್ಶನ ಮಾಡಿದ್ದ
ಕಲಾಕೃತಿಯನ್ನ ಹಾಗೂ ಸಾಹೋ ಸಿನಿಮಾದಲ್ಲಿ ಹಾಡಿನಲ್ಲಿ ಬರುವ ದೃಶ್ಯದ ಪೋಸ್ಟರ್ಅನ್ನ ಹೋಲಿಕೆ ಮಾಡುತ್ತಾ
ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಕಲಾವಿದೆ.
ತನ್ನ ಕಲಾಕೃತಿಯನ್ನ ಕಾಪಿ ಮಾಡಲಾಗಿದೆ.
ಕನಿಷ್ಟ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿರೋ ಕಲಾವಿದೆ, ಕಲೆಗೆ ಬೆಲೆಯೇ ಇಲ್ವಾ ಎಂದಿದ್ದಾರೆ.
ಈ ಕುರಿತು ಇನ್ಸ್ಟಾ ಗ್ರಾಂನಲ್ಲಿ ಬರಹ ಕೂಡ ಪ್ರಕಟ ಮಾಡಿದ್ದಾರೆ.
ಈಗಾಗಲೇ ಸಾಹೋ ಸಿನಿಮಾ ರಿಲೀಸ್ ಆಗಿದೆ. ನಿರೀಕ್ಷೆ ಮಟ್ಟದಲ್ಲಿ ಸಿನಿಮಾ ಇಲ್ಲ ಅನ್ನೋ ನೆಗೆಟಿವ್ ಟಾಕ್ ಮಧ್ಯೆ, ಬೆಂಗಳೂರು ಕಲಾವಿದೆಯ ಈ ಆರೋಪ ಸಿನಿಮಾಗೆ ಮತ್ತಷ್ಟು ಡ್ಯಾಮೇಜ್ ತರುವಂತಿದೆ..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















