Connect with us

Uncategorized

ಗಣೇಶನ ದೇಹದ ಪ್ರತಿಯೊಂದು ಅವಯವಗಳು ಏನನ್ನು ಸೂಚಿಸುವುದು..!

ಪ್ರಥಮ ಪೂಜಿತನಾದ ಗಣೇಶನು ಜೀವನದ ಕಷ್ಟಗಳನ್ನು ನಿವಾರಿಸುತ್ತಾನೆ, ಭಕ್ತಿಯಿಂದ ಪೂಜಿಸಿದರೆ ಬೇಡಿದ ವರವನ್ನು ಇಲ್ಲವೆನ್ನದೆ ನೀಡುವವನು ಎಂಬ ನಂಬಿಕೆ ಇದೆ. ಶಾಂತಿ ಹಾಗೂ ಸೌಹಾರ್ದತೆಯನ್ನು ಬಿಂಬಿಸುವವನೂ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟು ಮಾತ್ರವಲ್ಲದೇ ವಿನಾಯಕನ ದೇಹದ ಪ್ರತಿಯೊಂದು ಅವಯವಗಳಿಗೂ ಕೂಡಾ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ.

ಗಣೇಶನ ದೊಡ್ಡ ತಲೆಯ ಸಂಕೇತ ‘ ದೊಡ್ಡದಾಗಿ ಯೋಚಿಸಿ’ ಎಂದರ್ಥ. ಹೇಗೆಂದರೆ ಗಣೇಶನನ್ನು ಬುದ್ಧಿವಂತಿಕೆಯ ದೇವರಾಗಿ ಪೂಜಿಸಲಾಗುತ್ತದೆ. ವಿನಾಯಕನ ಆನೆಯ ತಲೆಯು ಬುದ್ಧಿವಂತಿಕೆ ಹಾಗೂ ವಿಶೇಷ ಮೆದುಳಿನ ಶಕ್ತಿಯನ್ನು ಸೂಚಿಸುತ್ತದೆ.

ಗಣೇಶನ ದೊಡ್ಡ ಕಿವಿಯ ಅರ್ಥ ”ಹೆಚ್ಚು ಆಲಿಸಿ’ ಎನ್ನುವುದಾಗಿದೆ. ವಿಶಾಲವಾದ ಕಿವಿಗಳು ಅವನ ಸಹಾಯವನ್ನು ಪಡೆಯುವ ಜನರ ಕಷ್ಟವನ್ನು ಆಲಿಸುವಂತಹ ಸಾಮರ್ಥ್ಯವು ಗಜಮುಖನಿಗೆ ಹೆಚ್ಚಾಗಿರುತ್ತದೆ. ಜ್ಞಾನವನ್ನು ಪಡೆಯಲು ಕಿವಿಗಳನ್ನು ಬಳಸಲಾಗುತ್ತದೆ. ಆಲೋಚನೆಗಳನ್ನು ಹೆಚ್ಚಿಸುವ ಮಾತುಗಳನ್ನು ಆಲಿಸುವ ಪ್ರಾಮುಖ್ಯತೆಯನ್ನು ಗಣೇಶನ ಕಿವಿಯು ಸೂಚಿಸುತ್ತದೆ.

ಗಣಪತಿಯ ಪುಟ್ಟ ಕಣ್ಣುಗಳು ಏಕಾಗ್ರತೆಯ ಸಂಕೇತವಾಗಿದೆ. ಈ ಕಣ್ಣುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಕಲಿಸುತ್ತವೆ. ಹೇಗೆಂದರೆ ಒಬ್ಬ ವ್ಯಕ್ತಿಯು ಏಕಾಗ್ರತೆಯ ಮೂಲಕ ತನ್ನ ಮನಸ್ಸನ್ನು ನಿಯಂತ್ರಿಸಿದರೆ ಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಬಹುದು.

ಗಣೇಶನ ಹಣೆಯ ಮೇಲಿರುವ ಊರ್ಧ್ವ ತಿಲಕವು ಗಣೇಶನು’ ಸಮಯದ ಪರಿಪಾಲಕ’ನೆಂದು ಸೂಚಿಸುತ್ತದೆ. ಹಣೆಯ ಮೇಲಿರುವ ತ್ರಿಶೂಲವು ಸಮಯವನ್ನು ಸಂಕೇತಿಸುತ್ತದೆ. ಜೊತೆಗೆ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್‌ಕಾಲ ಹಾಗೂ ಅದರ ಮೇಲಿರುವ ಗಣೇಶನ ಪಾಂಡಿತ್ಯವನ್ನು ಸೂಚಿಸುತ್ತದೆ. ಆದ್ದರಿಂದ ಈ ಗುರುತನ್ನು ಸಕ್ರಿಯ ಶಕ್ತಿಯನ್ನಾಗಿ ಪರಿಗಣಿಸಲಾಗುತ್ತದೆ.

ಗಣೇಶನ ಪುಟ್ಟ ಬಾಯಿಯು ‘ ಕಡಿಮೆ ಮಾತನಾಡಿ’ ಎನ್ನುವುದರ ಸಂಕೇತ. ಇದು ನಮಗೆ ಹೆಚ್ಚು ಮಾತನಾಡುವ ಬದಲು ಕೆಲಸವನ್ನು ಮಾಡು ಎನ್ನುವುದನ್ನು ಕಲಿಸುತ್ತದೆ. ಹಾಗಾಗಿ ನಮ್ಮ ಮಾತಿಗಿರುವ ಮೌಲ್ಯವನ್ನು ಮೊದಲು ಅರಿತುಕೊಂಡು, ಆಲಿಸಿ ನಂತರ ಯೋಚಿಸಿ, ನಂತರ ಕಾರ್ಯವನ್ನು ಮಾಡಿದ ಮೇಲೆ ಮಾತನಾಡಬೇಕು ಎನ್ನುವುದನ್ನು ತಿಳಿಸುತ್ತದೆ.

Advertisement

ಗಣೇಶನ ಏಕ ದಂತವು ಎಲ್ಲಾ ರೀತಿಯ ದ್ವಂದ್ವಗಳನ್ನು ಜಯಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ. ಮುರಿದ ದಂತವು ಜೀವನದಲ್ಲಿ ಅನುಭವಗಳನ್ನು ವಿಶ್ಲೇಷಿಸಲು, ಒಳ್ಳೆಯದನ್ನು ಉಳಿಸಿಕೊಳ್ಳಲು, ಕೆಟ್ಟದ್ದನ್ನು ಹೊರಹಾಕಲು ಕಲಿಸುತ್ತದೆ. ಉಳಿದಿರುವ ಏಕದಂತವು ಆತ್ಮಾವಲೋಕನ ಮಾಡಲು ಉತ್ತಮ ಆಲೋಚನೆಗಳು ಮತ್ತು ಒಳ್ಳೆಯ ಅಭ್ಯಾಸಗಳನ್ನು ಉಳಿಸಿಕೊಳ್ಳಲು ಹಾಗೂ ಕೆಟ್ಟ ಆಲೋಚನೆಗಳು ಮತ್ತು ಕೆಟ್ಟ ಅಭ್ಯಾಸಗಳನ್ನು ಹೊರಹಾಕುವಂತಹ ಜೀವನ ಪಾಠವನ್ನು ನಮಗೆ ಕಲಿಸುತ್ತದೆ.

ಜೀವನದಲ್ಲಿ ಒಳ್ಳೆಯದು ಹಾಗೂ ಕೆಟ್ಟದನ್ನು ಜೀರ್ಣಿಸಿಕೊಳ್ಳಿ ಎನ್ನುವ ಪಾಠವನ್ನು ಗಣೇಶನ ಹೊಟ್ಟೆಯು ಹೇಳುತ್ತದೆ. ಶಾಂತತೆಯ ಸದ್ಗುಣವನ್ನು ಸಾಧಿಸಿ ಎನ್ನುವುದನ್ನೂ ಸೂಚಿಸುತ್ತದೆ. ಗಣೇಶನ ಹೊಟ್ಟೆಯು ಅನಂತ ವಿಶ್ವಗಳನ್ನು ಒಳಗೊಂಡಿದೆ. ಇದು ಗಣೇಶನಿಗಿರುವ ಬ್ರಹ್ಮಾಂಡದ ದುಃಖಗಳನ್ನು ನುಂಗುವ ಹಾಗೂ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸಾಂಕೇತಿಸುತ್ತದೆ

ಸಾಮಾಜಿಕತೆ ಹಾಗೂ ಆಧ್ಯಾತ್ಮಿಕತೆ ಎರಡೂ ಜೀವನದ ಪ್ರಮುಖ ಹಂತಗಳಾಗಿದೆ. ಗಣೇಶನ ಒಂದು ಕಾಲು ನೆಲದ ಮೇಲಿದ್ದು ಇನ್ನೊಂದು ಕಾಲು ಎತ್ತಿರುವಂತೆ ಇರುವುದರಿಂದ ಇದು ಜೀವನ ವಿಧಾನವನ್ನು ಸೂಚಿಸುತ್ತದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜಗತ್ತಿನಲ್ಲಿಯೂ ಜೀವನ ನಡೆಸಬೇಕು ಎನ್ನುವುದನ್ನು ತಿಳಿಸುತ್ತದೆ.

ವಿನಾಯಕನ ನಾಲ್ಕು ತೋಳುಗಳೂ ದೇಹದ ಸೂಕ್ಷ್ಮ ಆಂತರಿಕ ಗುಣಲಕ್ಷಣಗಳನ್ನು ಪ್ರನಿಧಿಸುತ್ತದೆ. ಅವುಗಳೆಂದರೆ ಮನಸ್ಸು, ಬುದ್ದಿಶಕ್ತಿ, ಅಹಂ ಹಾಗೂ ಚಿತ್ತ (ಆತ್ಮಸಾಕ್ಷಿ.)

ಮೊದಲ ತೋಳು: ಇದು ಬಂಧಗಳು ಹಾಗೂ ಮಮತೆಯನ್ನು ಬೇರ್ಪಡಿಸುವುದರ ಸೂಚಕವಾಗಿದೆ. ಕೊಡಲಿಯನ್ನು ಬೀಸುವ ಕೈಯು ಎಲ್ಲಾ ಆಸೆಗಳನ್ನು ಬೇರ್ಪಡಿಸುವ, ನೋವು, ಸಂಕಟಗಳನ್ನು ದೂರ ಮಾಡುವುದರ ಸಂಜೇತ. ಈ ಕೊಡಲಿಯಿಂದ ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಹಾಗೂ ಹಿಮ್ಮೆಟ್ಟಿಸುತ್ತಾನೆ.

ಎರಡನೇ ತೋಳು: ಎರಡನೇ ಕೈಯಲ್ಲಿಕಮಲದ ಹೂವು ಹಾಗೂ ಹಗ್ಗವನ್ನು ಗಣೇಶನು ಹಿಡಿದಿದ್ದಾನೆ. ಪದ್ಮವು ಮಾನವ ವಿಕಾಸದ ಅತ್ಯುನ್ನತ ಗುರಿಯನ್ನು ಪ್ರತಿನಿಧಿಸಿದರೆ, ಹಗ್ಗವು ಭಕ್ತರನ್ನು ಅತ್ಯುನ್ನತ ಗುರಿಯತ್ತ ಎಳೆಯುವುದು.

Advertisement

ಮೂರನೇ ತೋಳು: ಗಣೇಶನ ಮೂರನೇ ಕೈಯು ಆಶೀರ್ವಾದದ ಭಂಗಿಯಲ್ಲಿದೆ. ಇದು ಆಧ್ಯಾತ್ಮಿಕ ಅನ್ವೇಷಕರಿಗೆ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತದೆ.

ನಾಲ್ಕನೇ ತೋಳು: ಮೋದಕವನ್ನು ಹಿಡಿದಿರುವ ನಾಲ್ಕನೇ ಹಸ್ತವು ಅರಿತುಕೊಂಡ ಆಂತರಿಕ ಆತ್ಮದ ಮಾಧುರ್ಯವನ್ನು ಸೂಚಿಸುತ್ತದೆ ಹಾಗೂ ಭಕ್ತಿಯ ಪ್ರತಿಫಲವನ್ನು ಪ್ರತಿನಿಧಿಸುತ್ತದೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ