Featured
ಡಿಕೆಶಿಗೆ ರಾತ್ರಿಯೇ ED ಸಮನ್ಸ್..! ಅರೆಸ್ಟ್ ಆಗೋದು ಪಕ್ಕಾನಾ..?
ಬೆಂಗಳೂರು : ಹೈಕೋರ್ಟ್ನಲ್ಲಿ ಡಿ.ಕೆ. ಶಿವಕುಮಾರ್ ಅರ್ಜಿ ವಜಾ ಆಗ್ತಿದ್ದಂತೆ, ಈಗಾಗಲೇ, ಒಂದು ಮುನ್ಸೂಚನೆ ಸಿಕ್ಕಾಗಿದೆ. ಯಾವುದೇ ಕ್ಷಣದಲ್ಲೂ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಬಹುದು ಎಂದು. ಅದರಂತೆ ಇವತ್ತೇ ರಾತ್ರಿ, ಡಿಕೆಶಿಯ ಸದಾಶಿವನಗರ ಮನೆಗೆ ಆಗಮಿಸಿದ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಿದರು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿ ಹೊರಟ್ರು.
ಈ ವೇಳೆ ಕೊಂಚ ಗಲಿಬಿಲಿ ಕೊಂಡಿದ್ದ ಡಿಕೆಶಿ ಅಲ್ಲಿಂದ ಹೊರಟು ಹೋಗಿದ್ರು. ಇಡಿ ಅಧಿಕಾರಿಗಳು ಬರ್ತಿದ್ದಂತೆ ಹೊರಗೆ ಹೊರಡು ಹೋದ್ರು. ಈ ವೇಳೆ, ಮಾಧ್ಯಮಗಳ ಜೊತೆ ಮಾತ್ನಾಡಿದ ಅವು, ಇವತ್ತು ಏನೂ ಮಾತನಾಡಲ್ಲ. ನಾಳೆ ಸಿಗೋಣ, ಟೈಮ್ ಹೇಳ್ತೀನಿ. ಎಲ್ಲರೂ ವ್ಯಾಖ್ಯಾನ ಮಾಡ್ತಿದ್ದೀರಾ, ನಾಳೆ ಎಲ್ಲವನ್ನೂ ಹೇಳ್ತೀನಿ ಎಂದು ಹೇಳಿ ಡಿಕೆಶಿ ಹೊರಟ್ರು. ನಾಲ್ವರು ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ವಿಚಾರಣೆ ಯಾವಾಗ ಅನ್ನೋದು ಇನ್ನೂ ಮಾಹಿತಿ ಸಿಗಬೇಕಿದೆ.
ಒಂದ್ವೇಳೆ, ಡಿಕೆಶಿಗೆ ಸುಪ್ರೀಂಕೋರ್ಟ್ ಜಾಮೀನು ನೀಡದೇ ಇದ್ರೆ, ಅರೆಸ್ಟ್ ಆಗಬಹುದು ಎನ್ನೋ ಮಾತು ಕೇಳಿ ಬರ್ತಿದೆ. ಆದ್ರೆ, ಇಡಿ ಅಧಿಕಾರಿಗಳು ಅರೆಸ್ಟ್ ಮಾಡಲೇಬೇಕು ಎನ್ನುವಂತಹ ಕೇಸ್ ಇದಲ್ಲ ಅನ್ನೋ ವಾದವನ್ನ ಕೆಲವು ವಕೀಲರು ಮಂಡಿಸಿದ್ದಾರೆ. ಮತ್ತೆ ಕೆಲವ್ರು, ಚಿದಂಬರಂ ಅವರನ್ನೇ ಬಂಧಿಸದವ್ರು ಮೋದಿ, ಅಮಿತ್ ಶಾ.. ಇನ್ನೂ, ಡಿಕೆಶಿಯನ್ನ ಬಿಡ್ತಾರಾ ಅಂತಿದ್ದಾರೆ.. ನೋಡೋಣ, ಮುಂದೇನಾಗುತ್ತೆ ಅನ್ನೋದನ್ನ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?