ರೈಸಿಂಗ್ ಕನ್ನಡ :
ಎಲ್ಲರೂ ಬೆರಗಾಗುವ ನ್ಯೂಸ್ ಇದು.. ಚಾಲೆಂಜ್ ಮಾಡಿ ಹೇಳ್ತೀವಿ, ಕನಸಿನಲ್ಲೂ ಕೂಡ ಕಾಂಡೋಮ್ಅನ್ನ ಈ ರೀತಿಯಾಗಿ ಬಳಸಬಹುದು ಅನ್ನೋ ಊಹೆಯೂ ಬರಲ್ಲ. ಯೆಸ್, ಒಲಿಂಪಿಕ್ಸ್ನಲ್ಲಿ ಅಥ್ಲೆಟ್ ಒಬ್ಬರು, ಕಾಂಡೋಮ್ಅನ್ನ ತಾವು ಬಳಸುವ ಕಯಾಕ್ ರಿಪೇರಿಗೆ ಬಳಸಿ, ಚಿನ್ನ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಹೀಗೆ ಕಾಂಡೋಮ್ಅನ್ನ ಕಯಾಕ್ ರಿಪೇರಿಗೆ ಬಳಸಿ ಚಿನ್ನ ಗೆದ್ದ ಅಥ್ಲೆಟ್ ಹೆಸರು ಜೆಸ್ಸಿಕಾ ಫಾಕ್ಸ್. ಆಸ್ಟ್ರೇಲಿಯಾದ ಅಥ್ಲೆಟ್. ಕಯಾಕ್ ಅಂದ್ರೆ, ತೊಗಲ ದೋಣಿ. ಟೊಕಿಯೋ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಕಯಾಕ್ ಸ್ಪರ್ಧೆಯ C1ನಲ್ಲಿ ಚಿನ್ನ ಹಾಗೂ K1ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ. ಆದ್ರೆ, ಜೆಸ್ಸಿಕಾ ಫೇಮಸ್ ಆಗಿರೋದು ತಾನು ಹಾಕಿರೋ ಪೋಸ್ಟ್ ಮತ್ತು ವಿಡಿಯೋದಿಂದ. ಯೆಸ್, ತಾನು ಚಿನ್ನದ ಪದಕ ಗೆಲ್ಲೋದಕ್ಕೆ ಕಾಂಡೋಮ್ ಕಾರಣ ಎನ್ನುವ ರೀತಿಯಲ್ಲಿ ಜೆಸ್ಸಿಕಾ ವಿಡಿಯೋ ಶೇರ್ ಮಾಡ್ಕೊಂಡಿದ್ದಾರೆ.
ಕಯಾಕ್ ಸ್ಪರ್ಧೆಗೂ ಮುನ್ನ, ನನ್ನ ಕಯಾಕ್ನ ಮುಂಬಾಗಕ್ಕೆ ಕೊಂಚ ಸಮಸ್ಯೆಯಾಗಿತ್ತು. ಈ ವೇಳೆ ನನಗೆ ಕಾಂಡೋಮ್ ಉಪಯೋಗಕ್ಕೆ ಬಂತು. ಕಾಂಡೋಮ್ನಿಂದ ಕಯಾಕ್ಅನ್ನ ರಿಪೇರಿ ಮಾಡಿಕೊಂಡೆ. ಥ್ಯಾಂಕ್ಯೂ ಕಾಂಡೋಮ್ ಅಂತ ಜೆಸ್ಸಿಕಾ , ಟಿಕ್ಟಾಕ್ ವಿಡಿಯೋ ಮಾಡಿದ್ದಾರೆ. ಇದೀಗ ಜೆಸ್ಸಿಕಾ ವಿಡಿಯೋ ವಿಶ್ವಾದ್ಯಂತ ವೈರಲ್ ಆಗಿದೆ.
ಕಾಂಡೋಮ್ ಅನ್ನ ಈ ರೀತಿಯಾಗಿಯೂ ಬಳಸಬಹುದಾ ಅನ್ನೋ ಐಡಿಯಾ ಹೇಗ್ ಬಂತಪ್ಪಾ ಅಂತ ನೆಟ್ಟಿಗರು ತಲೆಕೆಡಿಸಿಕೊಳ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?