Featured
ಅಡುಗೆ ಸ್ಪೆಷಲ್ : ಮೊಳಕೆ ಹುರಳಿಕಾಳು ಸಾರು ಮಾಡುವ ವಿಧಾನ
![](https://risingkannada.com/wp-content/uploads/2019/08/ಹುರುಳಿಕಾಳು.jpg)
ಯಾವುದೇ ಧಾನ್ಯಗಳನ್ನ ಮೊಳಕೆ ಮಾಡಿ, ಸಾರು ಮಾಡಿದ್ರೆ ಆರೋಗ್ಯಕ್ಕೆ ಒಳ್ಳೇದು. ಅದರಲ್ಲೂ ಹುರಳಿಕಾಳನ್ನು ಮೊಳಕೆ ಕಟ್ಟಿ, ಸಾಂಬಾರ್ ಮಾಡಿದರೆ ಊಟಕ್ಕೂ ಚೆನ್ನ, ಆರೋಗ್ಯಕ್ಕೂ ಚೆನ್ನ. ಹಾಗಿದ್ರೆ, ಮೊಳಕೆ ಹುರಳಿಕಾಳು ಸಾರು ಮಾಡೋದು ಹೇಗೆ ಅನ್ನೋದನ್ನ ನೋಡೋಣ.
ಬೇಕಾಗುವ ಪದಾರ್ಥಗಳು
ಮೊಳಕೆ ಕಟ್ಟಿದ ಹುರಳಿಕಾಳು – 2 ಕಪ್
ಹಸಿ ತೆಂಗಿನಕಾಯಿ – 1/2 ಕಪ್
ಟೊಮೊಟೋ – – 1
ಹುಣಸೆರಸ – – 2 ಚಮಚ
ಕೆಂಪು ಮೆಣಸಿನಕಾಯಿ – – 6
ಕೊತ್ತಂಬರಿ ಬೀಜ – – 2 ಚಮಚ
ಅರಿಶಿನ – – ¼ ಚಮಚ
ಶುಂಠಿ – – ½ ಇಂಚು
ಚೆಕ್ಕೆ – – 1 ಚೂರು
ಬೆಲ್ಲ – – ಸ್ವಲ್ಪ
ಎಣ್ಣೆ – – 2 ಚಮಚ
ಸಾಸಿವೆ – – 1 ಚಮಚ
ಕರಿಬೇವು – 2 ಎಸಲು
ಉಪ್ಪು – – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಕುಕ್ಕರಿನಲ್ಲಿ ಮೊಳಕೆ ಕಟ್ಟಿದ ಹುರಳಿಕಾಳು, ನೀರು, ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿ ಜಾರಿನಲ್ಲಿ ಹಸಿ ತೆಂಗಿನಕಾಯಿ ತುರಿ, ಕೆಂಪು ಮೆಣಸಿನಕಾಯಿ, ಚೆಕ್ಕೆ, ಶುಂಠಿ, ಕೊತ್ತಂಬರಿ ಬೀಜ , ಅರಿಶಿನ, ಟೊಮೊಟೋ, ಹುಣಸೆರಸವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ. ಕಾದ ಎಣ್ಣೆಗೆ ಸಾಸಿವೆ, ಕೆರಿಬೇವಿನ ಒಗ್ಗರಣೆ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಕುದಿಸಿ. ಅನಂತರ ಇದಕ್ಕೆ ಬೇಯಿಸಿದ ಹುರುಳಿಕಾಳು, ಬೆಲ್ಲ ಅಗತ್ಯವಿದಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿದರೆ ಮೊಳಕೆ ಹುರುಳಿಕಾಳು ಸಾರು ತಿನ್ನಲು ಸಿದ್ಧ. ಇದನ್ನು ಅನ್ನ, ಮುದ್ದೆ, ಚಪಾತಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?