Featured
16-01-2021 : ಶನಿವಾರದ ರಾಶಿ ಭವಿಷ್ಯ ಹೇಗಿದೆ.?
ಮೇಷ :
ಪರಿವಾರದಲ್ಲಿ ಹೊಸಕಳೆ ಬರುವದು. ಕುಟುಂಬದಲ್ಲಿ ಸೌಖಯ ಇರುವದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವುವು. 5
ವೃಷಭ :
ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ.ದೂರಪ್ರಯಾಣ ಯೋಗವಿದೆ. 8
ಮಿಥುನ :
ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವದು. ಹಳೆಯ ಸಾಲ ತೀರುವದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವುವು. 1
ಕರ್ಕ :
ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ.ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು. 9
ಸಿಂಹ :
ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವದು. ಸಮತೋಲಿತ ಜೀವನವಿರುವುದು. 7
ಕನ್ಯಾ :
ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವದು. ಕೇಡುಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ. 6
ತುಲಾ
ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವದು. ಮನೆಯಲ್ಲಿ ನೆಮ್ಮದಿ ಇರುವದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. 3
ವೃಶ್ಚಿಕ :
ಅಭದ್ರತೆ ಕಾಡುವ ಸಂಭವವಿದೆ.ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ.ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. 4
ಧನು :
ಸಾಲಗಾರರ ತೊಂದರೆ ಇರುವದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. 7
ಮಕರ :
ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವವು. 8
ಕುಂಭ :
ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. 3
ಮೀನ :
ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು. 5
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?