Featured
ಅಬ್ಬಾ.. ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 60 ಸಾವಿರ ಮಕ್ಕಳ ಜನನ : 2021ರಲ್ಲಿ 14 ಕೋಟಿ ಮಕ್ಕಳು ಹುಟ್ತಾರಂತೆ..!
![](https://risingkannada.com/wp-content/uploads/2021/01/WhatsApp-Image-2021-01-05-at-12.51.26-PM.jpeg)
ರೈಸಿಂಗ್ ಕನ್ನಡ :- (ವಿಶ್ವಸಂಸ್ಥೆ )ಇದು ದಾಖಲೆ ಜೊತೆ ಅಚ್ಚರಿ ವಿಷಯ. ಹೊಸ ವರ್ಷದ ದಿನ ಅಂದ್ರೆ, ಜನವರಿ 1, 2021ರಲ್ಲಿ ಭಾರತದಲ್ಲಿ 60 ಸಾವಿರ ಮಕ್ಕಳು ಜನಿಸಿದ್ದಾರೆಂದು ಯೂನಿಸೆಫ್ ಹೇಳಿದೆ. ಅದೇ ದಿನ ವಿಶ್ವದಲ್ಲಿ ಬರೋಬ್ಬರಿ 3,71,500 ಮಕ್ಕಳು ಹುಟ್ಟಿದ್ದಾರಂತೆ.
ವಿಶೇಷ ಅಂದ್ರೆ, ಹೊಸ ವರ್ಷದ ದಿನ ಭಾರತದಲ್ಲೇ ಅತೀ ಹೆಚ್ಚು ಮಕ್ಕಳು ಜನಸಿದ್ದಾರೆ ಅನ್ನೋದು. ವಿಶ್ವದಲ್ಲಿ 2021ರ ಜನವರಿ 1ರಂದು ಪ್ರಮುಖವಾಗಿ 10 ರಾಷ್ಟ್ರಗಳಲ್ಲಿ ಅತೀ ಹೆಚ್ಚು ಮಕ್ಕಳು ಹುಟ್ಟಿದ್ದಾರೆ. ಭಾರತದಲ್ಲಿ 60 ಸಾವಿರ, ಚೀನಾದಲ್ಲಿ 35615, ನೈಜೀರಿಯಾದಲ್ಲಿ 21439, ಪಾಕಿಸ್ತಾನದಲ್ಲಿ 14161, ಇಂಡೋನೇಷ್ಯಾದಲ್ಲಿ 12 ಸಾವಿರ, ಅಮೆರಿಕದಲ್ಲಿ 10 ಸಾವಿರ ಹೀಗೆ.. ಇಡೀ ವಿಶ್ವದಲ್ಲಿ 3,71,500 ಮಕ್ಕಳು ಒಂದೇ ದಿನ ಜನಿಸಿದ್ದಾರೆ.
ವಿಶೇಷ ಅಂದ್ರೆ, 2021ನೇ ವರ್ಷದಲ್ಲಿ ಸುಮಾರು 15 ಕೋಟಿ ಮಕ್ಕಳು ವಿಶ್ವದಲ್ಲಿ ಜನಿಸಬಹುದು ಎಂದು ಅಂದಾಜು ಮಾಡಲಾಗಿದೆ. ಕೊರೋನಾ ಜೊತೆ ಲಾಕ್ಡೌನ್ನಿಂದಾಗಿ ಮಕ್ಕಳ ಜನನ ಪ್ರಮಾಣ ಈ ವರ್ಷದ ಹೆಚ್ಚಾಗಿಯೇ ಇರಲಿದೆಯಂತೆ. 2021ರಲ್ಲಿ ಜನಿಸುವ ಮಕ್ಕಳ ಜೀವಿತಾವಧಿ ಅಂದಾಜು 84 ವರ್ಷ ಇರುತ್ತೆ ಎಂದು ಯೂನಿಸೆಫ್ ಹೇಳಿದೆ.
ಇಷ್ಟೇ ಅಲ್ದೆ, ಹೊಸ ವರ್ಷದ ಮೊದಲ ದಿನದಂದು ಜನಿಸಿರೋ ಮಕ್ಕಳು ಹಿಂದಿನ ವರ್ಷಕ್ಕಿಂತ ವಿಭಿನ್ನ ಜಗತ್ತನ್ನ ಪ್ರವೇಶ ಮಾಡಿದ್ದಾರೆ. ಹೊಸ ವರ್ಷ ವಿನೂತನ ಅವಕಾಶಗಳನ್ನ ಹೊತ್ತು ತರುತ್ತದೆ. ಅವರಿಗಾಗಿ ನಾವು ಜಗತ್ತನ್ನು ಮತ್ತಷ್ಟು ಸುರಕ್ಷಿತವಾಗಿ ಮಾಡೋಣ ಎಂದು ಯೂನಿಸೆಫ್ ಕಾರ್ಯ ನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಫೋರ್ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?