Featured
ರಾಜುಗೌಡ ಬೆಂಬಲಿಗರಿಂದ ಸಿಎಂ ತವರಲ್ಲಿ ಪ್ರತಿಭಟನೆ

ಶಿವಮೊಗ್ಗ: ಏನೇ ಸರ್ಕಸ್ ಮಾಡಿದರೂ ಅತೃಪ್ತ ಬಿಜೆಪಿ ನಾಯಕರ ಬೆಂಬಲಿಗರಿಂದ ಪ್ರತಿಭಟನೆ ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಸುರಪುರ ಶಾಸಕ ರಾಜೂಗೌಡ ಬೆಂಬಲಿಗರು ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿ ವಾಲ್ಮಿಕಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬೆಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹರಿಶ್ ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಪ್ಪತ್ತಕ್ಕೂ ಅಧಿಕ ಜನರಿದ್ದರು, ಈ ಸಂದರ್ಭದಲ್ಲಿ ಮಾತನಾಡಿ, ಸಚಿವ ಸಂಪುಟದಲ್ಲಿ ವಾಲ್ಮಿಕಿ ಜನಾಂಗಕ್ಕೆ ಅನ್ಯಾಯವಾಗಿದೆ, ರಾಜೂಗೌಡ ಸಚಿವರಾಗಲು ಅರ್ಹರು. ಸರ್ಕಾರ ಅವರಿನ್ನ ಸಚಿವರನ್ನಾಗಿ ಮಾಡಬೇಕು ಎಂದು ಸಿಎಂ ತವರಲ್ಲೇ ಪ್ರತಿಭಟನೆ ಮಾಡಿದರು.
Advertisement
Post Views: 3
Continue Reading
Advertisement
You may like
Click to comment
















