Connect with us

Featured

ಸಿದ್ಧರಾಮಯ್ಯ ಕಿರಿಕ್, ಕಾಂಗ್ರೆಸ್ ಶಾಕ್..!

ರೈಸಿಂಗ್ ಕನ್ನಡ:

ನ್ಯೂಸ್​ ಡೆಸ್ಕ್​: 

ಮಾಜಿ ಸಿಎಂ ಸಿದ್ಧರಾಮಯ್ಯ ಮಾಸ್ ಲೀಡರ್. ಪಕ್ಷ , ಸಿದ್ಧಾಂತ, ದ್ವೇಷ ಬಿಟ್ಟು ಎಲ್ಲರೂ ಒಪ್ಪಿಕೊಳ್ಳುವಂತಹ ರಾಜಕಾರಣಿ ಅಂದ್ರೆ ಅದು ಸಿದ್ಧರಾಮಯ್ಯ. ಕಾಂಗ್ರೆಸ್ ಪಾಲಿನ ಬಹುದೊಡ್ಡ ಮಾಸ್ ಲೀಡರ್ ಸಿದ್ಧು ಅಂದ್ರೂ ಅದರಲ್ಲಿ ಉತಪ್ರೇಕ್ಷೆ ಇಲ್ಲ. ಆದ್ರೆ ಮಾಜಿ ಸಿಎಂ ಸಿದ್ಧರಾಮಯ್ಯ ಈಗ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದ್ದಾರೆ. ಸಿದ್ಧರಾಮಯಯ್ಯ ಮಾತುಗಳು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗುತ್ತಿದೆ. ಮತ್ತೊಂದು ಕಡೆ ಬಿಜೆಪಿ ಸಿದ್ಧು ಮಾತನ್ನೇ  ಓಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಜಾತಿ, ಧರ್ಮ ಮತ್ತು ವೋಟ್ ಬ್ಯಾಂಕ್ ಇಲ್ದೆ ಚುನಾವಣೆ ನಡೀತಾ ಇಲ್ಲ. ಎಲೆಕ್ಷನ್ ಬಂತು ಅಂದ್ರೆ ಸಾಕು, ಧರ್ಮ, ಜಾತಿ ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿ ಅಂತೂ ಒಂದು ವರ್ಗದ ಮತಗಳನ್ನು ತನ್ನತ್ತ ಸೆಳೆದುಬಿಟ್ಟಿದೆ. ಕಾಂಗ್ರೆಸ್ ಅಲ್ಲಿ ಇಲ್ಲಿ ಒಂದು ಸ್ವಲ್ಪ ಮತಗಳನ್ನು ಉಳಿಸಿಕೊಂಡಿದ್ದರೂ, ಇತ್ತೀಚೆಗೆ ಸಿದ್ಧರಾಮಯ್ಯ ಆಡ್ತಿರೋ ಮಾತುಗಳಿಂದ ಅದನ್ನೂ ಕಳೆದುಕೊಳ್ಳುವ ಭಯದಲ್ಲಿದೆ..!

Advertisement

ಹನುಮನ ಬರ್ತ್ಡೇಟ್ ಕಿರಿಕ್..!

ಮೈಸೂರಿನ ತಮ್ಮ ಊರಿನ ಮತಗಟ್ಟೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಿ, ತಮ್ಮ ಸ್ನೇಹಿತರ ಮನೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಬಾಡೂಟ ಮಾಡಿದ್ದರು. ಆ ವೇಳೆ, ಅವರ ಆಪ್ತರೊಬ್ಬರು, ಸರ್..ಇವತ್ತು ಹನುಮಜ್ಜಯಂತಿ ಎಂದು ಅಲರ್ಟ್ ಮಾಡಿದ್ದಾರೆ. ಆಗ, “ಏನು ಇವತ್ತು ಹನುಮಜ್ಜಯಂತಿನಾ, ಆಂಜನೇಯ ಹುಟ್ಟಿದ ದಿನ ನಿನಗೆ ಗೊತ್ತಾ, ಸುಮ್ನೆ ಊಟ ಮಾಡಯ್ಯ”ಎಂದು ಪ್ರೀತಿಯಿಂದ ಸಿದ್ದರಾಮಯ್ಯ ಗದರಿಸಿದ್ದರು. ಸಿದ್ಧು ಈ ಮಾತನ್ನು ಬಿಜೆಪಿ ಈಗ ಬ್ರಹ್ಮಾಸ್ತçವಾಗಿ ಬಳಸಿಕೊಳ್ತಿದೆ.!

ಗೋಮಾಂಸ ತಿಂದ್ರೆ ಏನಾಗುತ್ತೆ..?

ನಾನು ಗೋಮಾಂಸ ತಿನ್ನುತ್ತೇನೆ, ಅದರಲ್ಲಿ ತಪ್ಪೇನಿದೆ. ನನ್ನ ಆಹಾರದ ಪದ್ದತಿ ನನ್ನದು, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಯಸ್ಸಾದ, ಆರೋಗ್ಯವಾಗಿ ಇಲ್ಲದ ಹಸುಗಳನ್ನು ಮನೆಯಲ್ಲೇ ಇಟ್ಟುಕೊಳ್ಳಲು ಬಿಜೆಪಿಯವರು ದುಡ್ಡು ಕೊಡುತ್ತಾರಾ ಎಂದು ಸಿದ್ಧು ಕೇಳಿರುವ ಪ್ರಶ್ನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಒಂದು ಸಮೂದಾಯ ಕೂಡ ಸಿದ್ಧು ಈ ಮಾತಿನಿಂದ ಸಿಟ್ಟಿಗೆದ್ದಿದೆ..!

ಕಳೆದ ಚುನಾವಣೆಯಲ್ಲಿ ಮೀನೂಟದ ಎಡವಟ್ಟು..!

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ, ಮೀನೂಟ ಮಾಡಿ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದ ಸಿದ್ದರಾಮಯ್ಯನವರ ವಿರುದ್ದ ಖಟ್ಟರ್ ಹಿಂದುತ್ವವಾದಿಗಳು ಏಕ್ ಧಂ ತಿರುಗಿಬಿದ್ದಿದ್ದರು. ಇದು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೊಡೆತ ಕೊಟ್ಟಿದ್ದು ಕೂಡ ಸುಳ್ಳಲ್ಲ..!

Advertisement

ಹಿಂದುತ್ವ ಟ್ರಂಪ್ಕಾರ್ಡ್ ಆಟ, ಸಿದ್ಧು ಹೇಳಿಕೆಯಿಂದ ಪೀಕಲಾಟ..!

ರಾಷ್ಟ್ರೀಯತೆ, ಹಿಂದುತ್ವವನ್ನು ಮುಂದೆ ಇಟ್ಟುಕೊಂಡೇ ಬಿಜೆಪಿ ಎಲ್ಲಾ ಕಡೆ ಮತ ಕೇಳುತ್ತಿದೆ. ದೇಶದ ಹಲವು ಭಾಗಗಳಲ್ಲಿ ಇದು ಯಶಸ್ಸು ಕೂಡ ಕಂಡಿದೆ. ಕಾಂಗ್ರೆಸ್ ಕೂಡ ಇತ್ತೀಚೆಗೆ ಈ ಪ್ರಯತ್ನವನ್ನು ಮಾಡ್ತಿದೆ. ಆದ್ರೆ ಸಿದ್ಧರಾಮಯ್ಯನವರ ಈ ನಡೆಯಿಂದ ಕಾಂಗ್ರೆಸ್ ಕೂಡ ಕಂಗೆಟ್ಟಿದೆ. ತಮ್ಮಿಂದ ದೂರ ಹೋಗಿರುವ ಮತಗಳನ್ನು ಒಟ್ಟುಗೂಡಿಸಲು ಪ್ರಯತ್ನ ಪಡ್ತಿರೋ ಕಾಂಗ್ರೆಸ್ಗೆ ಸಿದ್ಧರಾಮಯ್ಯ ಈಗ ವಿಲನ್ ಆಗಿ ಕಾಡ್ತಿದ್ದಾರೆ..!

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ