Featured
ಸ್ಟೋಯ್ನಿಸ್ ಆಲ್ರೌಂಡ್ ಆಟಕ್ಕೆ ಮುಳುಗಿದ ಸನ್ ರೈಸರ್ಸ್: ಫೈನಲ್ ತಲುಪಿ ದಾಖಲೆ ಬರೆದ ಡೆಲ್ಲಿ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಐಪಿಎಲ್ನ ಕ್ವಾಲಿಫೈಯರ್ 2ರ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ತಂಡವನ್ನ ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿದು ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಅಬುಧಾಬಿ ಅಂಗಳದಲ್ಲಿ ನಡೆದ ಮಹಾ ಕದನದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ದಕೊಂಡಿತ್ತು. ಪೃಥ್ವಿ ಶಾ ಬದಲು ತಂಡದ ಓಪನರ್ ರಾಗಿ ಭಡ್ತಿ ಪಡೆದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಓಪನರ್ ಶಿಖರ್ ಧವನ್ ಜೊತೆ 86 ರನ್ಗಳ ಸೊಗಸಾದ ಓಪನಿಂಗ್ ಕೊಟ್ರು. ಆದ್ರೆ 38 ರನ್ಗಳಿಸಿ ಮುನ್ನಗುತ್ತಿದ್ದ ಸ್ಟೋಯ್ನಿಸ್ ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆದ್ರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ 21 ರನ್ ಗಳಿಸಿ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಹೇಟ್ಮಯರ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡಿದ ಶಿಖರ್ ಧವನ್ 78 ರನ್ ಸಿಡಿಸಿ ಸಂದೀಪ್ ಶರ್ಮಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ರು. ಕೊನೆಯಲ್ಲಿ ಹೇಟ್ಮಯರ್ ಅಜೇಯ 42, ರಿಷಬ್ ಪಂತ್ ಅಜೇಯ 2 ರನ್ ಕಲೆ ಹಾಕಿದ್ರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು.
190 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ಡೆಲ್ಲಿ ವೇಗಿಗಳಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ರಬಾಡ ದಾಳಿಗೆ ತತ್ತರಿಸಿ ಹೋಯ್ತು. ಪ್ರೀಯಮ್ ಗರ್ಗ್ 7, ಡೇವಿಡ್ ವಾರ್ನರ್ 17,ಮನೀಶ್ ಪಾಂಡೆ 21, ಕೇನ್ ವಿಲಿಯಮ್ಸನ್ 67, ಜಾಸನ್ ಹೋಲ್ಡರ್ 11, ಅಬ್ದುಲ್ ಸಮಾದ್ 33, ರಶೀದ್ ಖಾನ್ 11 ಕೊನೆಯವರೆಗೂ ಹೋರಾಡಿದ ಸನ್ರೈಸರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವಷ್ಟರ ಮಟ್ಟಿಗೆ ಮಾತ್ರ ಶಕ್ತವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ 17 ರನ್ಗಳ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಹಾಕಿತು. ಡೆಲ್ಲಿ ಪರ ಸ್ಟೋಯ್ನಿಸ್ 3 ಮತ್ತು ರಬಾಡ 4 ವಿಕೆಟ್ ಪಡೆದು ಮಿಂಚಿದ್ರು. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಿದ ಮಾರ್ಕಸ್ ಸ್ಟೋಯ್ನಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















