Featured
ಕನ್ನಡ ರಾಜ್ಯೋತ್ಸವ: ಏಕೀಕರಣಕ್ಕಾಗಿ ಹೋರಾಡಿದ ಮಾಧವಾನಂದ ಪ್ರಭು
ರೈಸಿಂಗ್ ಕನ್ನಡ:
ನ್ಯೂಸ್ಡೆಸ್ಕ್:
ನಾವೆಲ್ಲ ಕನ್ನಡ ರಾಜ್ಯೋತ್ಸವವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಆದರೆ ಕನ್ನಡ ಏಕೀಕರಣಕ್ಕಾಗಿ ಹೋರಾಡಿದವರ ಬಗ್ಗೆ ನಮಗೆಷ್ಟು ತಿಳಿದಿದೆ?
ನಾವು ಇವತ್ತು ಹೇಳಹೊರಟಿರುವುದು ಕನ್ನಡ ಮತ್ತು ದೇಶಕ್ಕಾಗಿ ಬಲಿದಾನ ಮಾಡಿದ ಮಠಾಧೀಶರೊಬ್ಬರ ಬಗ್ಗೆ. ಕೇವಲ ಆಧ್ಯಾತ್ಮ, ಪ್ರವಚನ ಮಾಡಿಕೊಂಡಿರದೆ , ದೇಶ- ನಾಡಿಗಾಗಿ ಹೋರಾಡಿದ ಆ ಮಹಾ ಸಂತ , ಮರಣೋತ್ತರ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ, ಸ್ವತಃ ಬಂದೂಕು ಪ್ಯಾಕ್ಟರಿಗಳನ್ನ ತೆರೆದು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆ ಸ್ವಾಮೀಜಿ ಯಾರು ಗೊತ್ತಾ?
ದೇಶಕ್ಕೆ ಸ್ವತಂತ್ರ ಸಿಕ್ಕ ನಂತರ ನಮ್ಮ ರಾಜ್ಯ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿತ್ತು. ಆ ಸಮಯದಲ್ಲಿ ಸಂಸ್ಥಾನಗಳ ಒಗ್ಗೂಡಿಸುವುದು ಸುಲಭದ ಮಾತಾಗಿರಲಿಲ್ಲ. ಆಗ ಶುರುವಾಗಿದ್ದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಹಲವು ಮಹನೀಯರು ಪಾಲ್ಗೊಂಡಿದ್ದರು. ಆದ್ರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಈ ಶ್ರೀಕ್ಷೇತ್ರ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀಗಳು.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿರುವ ಇಂಚಗೇರಿ ಮಠದ ಪೀಠಾಧಿಕಾರಿಗಳು ಆಗಿದ್ದ ಮಾಧವಾನಂದ ಶ್ರೀಗಳು ಕರ್ನಾಟಕವನ್ನ ಒಗ್ಗೂಡಿಸಲು ಸಹಸ್ರಾರು ಭಕ್ತರನ್ನ ಕರೆದುಕೊಂಡು ಹೋರಾಟ ನಡೆಸಿದ್ದರು.
ಹಲವಾರು ಪ್ರಾಂತ್ಯಗಳಲ್ಲಿ ಇಬ್ಭಾಗಗೊಂಡಿದ್ದ ಕನ್ನಡ ನಾಡನ್ನ ಅಖಂಡವಾಗಿಸಲು ನಡೆದ ಹೋರಾಟದಲ್ಲಿ ಮಾಧವಾನಂದ ಪ್ರಭುಗಳು 21 ದಿವಸಗಳ ಅಮರಣಾಂತ ಉಪವಾಸ ಕ್ಯೆಗೊಂಡು ಬಂಧಿಸಲ್ಪಟ್ಟಿದ್ದರು. ಗದಗ, ದಾವಣಗೆರೆ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ಪರಿಷತ್ ಗಳನ್ನ ಸಂಘಟಿಸಿ ಸಂಸ್ಥಾನಗಳ ವಿಲೀನಿಕರಣಕ್ಕಾಗಿ ಆಗ್ರಹಿಸಿದ್ದರು. ಅಂದು ನಾಡನ್ನ ಒಗ್ಗೂಡಿಸಲು ಮಾಧವಾನಂದ ಶ್ರೀಗಳ ಶ್ರಮವನ್ನ ಅರಿತ ಕರ್ನಾಟಕ ಸರ್ಕಾರ ೨೦೦೬ ರಲ್ಲಿ ಮರಣೋತ್ತರವಾಗಿ ಮಾಧವಾನಂದ ಶ್ರೀಗಳಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂದಿನ ಮಠದ ಆಡಳಿತಾಧಿಕಾರಿಯಾಗಿದ್ದ ಪಂಪಕವಿ ಬೆಳಗಲಿ, ಮಠದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದರು.ಇದಷ್ಟೆ ಅಲ್ಲ ಮಾಧವಾನಂದ ಶ್ರೀಗಳು ಸ್ವಾತಂತ್ರ್ಯ ಹೋರಾಟ ಮುಗಿದ ಮೇಲೆ ನಮ್ಮ ಕರ್ನಾಟಕದ ಜಮಖಂಡಿ, ಜತ್ತ, ರಾಮದುರ್ಗ, ಮೈಸೂರ ಸಂಸ್ಥಾನಗಳನ್ನ ಭಾರತ ಒಕ್ಕೂಟದಲ್ಲಿ ವಿಲಿನಗೊಳಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅಲ್ಲದೆ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಮಹಾರಾಷ್ಟ್ರದ ಗಡಿ ಹಾಗೂ ಬೆಳಗಾವಿ ಜಿಲ್ಲೆಯ ಕೊಟ್ಟಲಗಿ ಗ್ರಾಮಗಳಲ್ಲಿ ಸ್ವತಃ ಬಂದೂಕು ಪ್ಯಾಕ್ಟರಿಗಳನ್ನ ತೆರೆದು ಬ್ರೀಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು.
ನೇತಾಜೀ ಸುಭಾಷ ಚಂದ್ರಬೋಸ್, ಮಹಾತ್ಮ ಗಾಂಧಿಯವರ ಜೊತೆಗೆ ಸ್ವಾಮಿಗಳು ನಿಕಟ ಸಂಪರ್ಕ ಹೊಂದಿದ್ದರೆಂದರೆ ಅವರ ಸಾಮರ್ಥ್ಯದ ಅರಿವು ನಿಮಗಾಗಿರಬಹುದು. ಮಾಧವಾನಂದರ ಹೋರಾಟಕ್ಕೆ ಬೆಚ್ಚಿ ಬಿದ್ದ ಬ್ರಿಟಿಷ್ ಸರ್ಕಾರ ಶ್ರೀಗಳ ಮೇಲೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿತ್ತು. ಜೊತೆಗೆ ಬ್ರೀಟಿಷರಿಗೆ ಸೆರೆ ಸಿಕ್ಕ ಅವರು ಮುಂಬೈನ ಯರವಾಡ ಜೈಲಿನಲ್ಲಿ ಹಲವು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿತ್ತು.ಇಂದಿಗೂ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಆಚರಣೆಯಾದರೆ ಅದರ ಮರುದಿನವೇ ದಿನಾಂಕ ೨ರಂದು ಮಾಧವಾನಂದ ಶ್ರೀಗಳ ಜಯಂತಿಯನ್ನ ಇಂಚಗೇರಿ ಮಠದ ೫೦೦ಕ್ಕು ಅಧಿಕ ಶಾಖಾ ಮಠಗಳಲ್ಲಿ ಆಚರಣೆ ಮಾಡಲಾಗುತ್ತೆ. ಆದ್ರೆ ಭಾರತ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ದುಡಿದ ಇಂಚಗೇರಿ ಮಠ ಇಂದಿಗೂ ಏಲೆ ಮರೆಯ ಕಾಯಿಯಂತೆ ಇರೋದು ವಿಪರ್ಯಾಸವೇ ಸರಿ..!
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?