Featured
ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂಗೆ ಅರುಣ್ ಜೇಟ್ಲಿ ಹೆಸರು.
ನವದೆಹಲಿ: ದೆಹಲಿ ಕ್ರಿಕೆಟ್ ಆಡಳಿತ ಮಂಡಳಿ, ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರನ್ನ ಇಡಲು ನಿರ್ಧರಿಸಿದೆ. ಆದರೆ ಗ್ರೌಂಡ್ ಮೂಲ ಹೆಸರಲ್ಲೇ ಇರಲಿದೆ.
ಈ ಕುರಿತು ಟ್ವೀಟ್ ಮಾಡಿರುವ DDCA ( ದೆಹಲಿ ಕ್ರಿಕೆಟ್) ಅಧ್ಯಕ್ಷ ರಜತ್ ಶರ್ಮಾ ‘ ಅರುಣ್ ಜೇಟ್ಲಿಯವರ ಪರಿಶ್ರಮದಿಂದ ಸ್ಟೇಡಿಯಂ ಅತ್ಯಾಧುನಿಕ ಸೌಲಭ್ಯ ಪಡೆದುಕೊಂಡಿತು, ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿಗೆ ನೋಡುವ ಅವಕಾಶ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಜೇಟ್ಲಿ ಬೆಂಬಲದಿಂದ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶೀಶ್ ನೆಹ್ರಾ, ರಿಷಬ್ ಪಂತ್ ಕ್ರಿಕೆಟ್ ನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋದರು’ ಎಂದು ಹೇಳಿದ್ದಾರೆ.
ಸೆ.12ರಂದು ಜವಹರಲಾಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೆಸರು ನಾಮಕರಣವಾಗಲಿದೆ.
ಭಾರತದ ಅಪರೂಪದ ರಾಜಕಾರಣಿ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿ ಶನಿವಾರ ಮೃತರಾಗಿದ್ದರು, ಜೇಟ್ಲಿ ದೆಹಲಿ ಕ್ರಿಕೆಟ್ ಅಧ್ಯಕ್ಷರಾಗಿಯೂ, ಕ್ರಿಕೆಟ್ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು.
You may like
ರಾಹುಲ್ ಬೆನ್ನಿಗೆ ನಿಂತ ಮಾಜಿ ಕೋಚ್
ಟಾಸ್ ಗೆದ್ದ ಬೆಂಗಳೂರು ಟೀಂ, ಆರ್ಸಿಬಿ ಪ್ಲೇಯಿಂಗ್ 11ನಿಂದ ಸಿರಾಜ್-ಮ್ಯಾಕ್ಸಿ ಔಟ್!
ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಹಿಡಿಯಲು ಪಾಠ ಹೇಳಿದ ಅನಿಲ್ ಕುಂಬ್ಳೆ!
ಟಿ20 ಕ್ರಿಕೆಟ್ನ ಐತಿಹಾಸಿಕ ರೆಕಾರ್ಡ್ ಉಡೀಸ್ ಮಾಡಿದ ವಿರಾಟ್ ಕೊಹ್ಲಿ..!
IPL-2024; ಫೋರ್.. ಸಿಕ್ಸರ್-ಇಂದಿನಿಂದ ಐಪಿಎಲ್ ಹಬ್ಬ
ಆರ್ ಸಿಬಿ UNBOX…ಹೊಸ ಜೆರ್ಸಿ…ಹೊಸ ಹುಮ್ಮಸ್ಸು..ಹೊಸ ಅಧ್ಯಾಯ..!