Featured
ತ್ರಿಮೂರ್ತಿ ಸನ್ನಿಧಿಯಲ್ಲಿ ‘ವಿಧಿಬರಹ’ ಆರಂಭ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ನಾಡಹಬ್ಬ ದಸರಾ ಮೊದಲ ದಿನ ‘ವಿಧಿಬರಹ’ ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್.ಈ ಅರಂಭ ಫಲಕ ತೋರಿದರು.
ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ ‘ವಿಧಿಬರಹ’ ಚಿತ್ರದಲ್ಲಿದೆ.

ರಘುವರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಚಿತ್ರಗಳ ನಿರ್ದೇಶಿಸಿ ಅನುಭವವಿರುವ ರಘುವರ್ಮ ನಿರ್ದೇಶನದ ಮೂರನೇ ಚಿತ್ರವಿದು.
ದೀಪ ಕ್ರಿಯೇಷನ್ಸ್ ಲಾಂಛನದಲ್ಲಿ ಮಂಜುನಾಥ್ ಈ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್ ೩೦ರಿಂದ ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಆರು ಹಾಡುಗಳಿದ್ದು, ಲಯ ಕೋಕಿಲ ಸಂಗೀತ ನೀಡುತ್ತಿದ್ದಾರೆ. ಎಸ್.ಎಲ್.ವಿ ರವಿ ಛಾಯಾಗ್ರಹಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಶೋಭ್ ರಾಜ್, ಲಯಕೋಕಿಲ, ರಾಜೇಶ್ ನಟರಂಗ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜ, ರಾಜೇಶ್ ಗಟ್ಟಿಮೇಳ ಮುಂತಾದವರು ‘ವಿಧಿಬರಹ’ ಚಿತ್ರದ ತಾರಾಬಳಗದಲ್ಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?