Connect with us

Featured

ಆರ್.ಅಶೋಕ್​​ ಸಾಮ್ರಾಜ್ಯ ಪತನ..! ಬೆಂಗಳೂರು ನಾಯಕತ್ವ ಹೋಯ್ತು.. ಏನ್ಮಾಡೋದು..?

ಬೆಂಗಳೂರು : ಆರ್​.ಅಶೋಕ್​ ಅವರನ್ನ ಸಾಮ್ರಾಟ್​ ಅಶೋಕ್​ ಅಂತಲೇ ಬೆಂಗಳೂರಿನ ನಾಯಕರು, ಕಾರ್ಯಕರ್ತರು ಕರೀತಾರೆ. ಇನ್ಮುಂದೆ, ಬಹುಶಃ ಆ ರೀತಿ ಸಾಮ್ರಾಟ್​ ಅಶೋಕ್​ ಅಂತ ಕರೆಯೋಕೆ ಆಗಲ್ವೇನೋ ಅನ್ಸುತ್ತೆ. ಯಾಕಂದ್ರೆ, ಇನ್ಮುಂದೆ ಡಾ.ಅಶ್ವತ್ಥ ನಾರಾಯಣ ಬೆಂಗಳೂರಿನ ಸಾಮ್ರಾಜ್ಯಕ್ಕೆ ಸಾಮ್ರಾಟರಾಗೋದ್ರಲ್ಲಿ ಅನುಮಾನವೇ ಇಲ್ಲ.

ಯೆಸ್, ಬಿಜೆಪಿಯ ಒಕ್ಕಲಿಗರಲ್ಲಿ ಪ್ರಭಾವಿ ನಾಯಕ ಅಂದ್ರೆ, ಅದು ಆರ್. ಅಶೋಕ್​. ಆದ್ರೆ, ಇನ್ಮುಂದೆ ಆ ಟ್ರೇಡ್​ ಮಾರ್ಕ್​ ಇರೋದಿಲ್ಲ. ಜೊತೆಗೆ ಬೆಂಗಳೂರಿನಲ್ಲಿ ಬಿಜೆಪಿಯ ಯಾವುದೇ ಕೆಲಸ ಆಗ್ಬೇಕಂದ್ರು, ಅದು ಅಶೋಕ್​ಗೆ ಗೊತ್ತಿಲ್ಲದೇ ಆಗುತ್ತಿರಲಿಲ್ಲ. ಇನ್ಮುಂದೆ, ಅದ್ಯಾವುದಕ್ಕೂ ಅಸ್ಪದವೇ ಇರೋಲ್ಲ. ಯಾಕಂದ್ರೆ, ಮಲ್ಲೇಶ್ವರಂ ಶಾಸಕ, ಸಚಿವ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಇನ್ಮುಂದೆ ಬೆಂಗಳೂರು ಸಾಮ್ರಾಟ.

ಅಶ್ವತ್ಥ ನಾರಾಯಣ ಯಾವಾಗ ಮಂತ್ರಿಯಾದ್ರೋ, ಆಗಲೇ ಅಶೋಕ್​ ಪವರ್ ಕೊಂಚ ಕಟ್​ ಆಗಿತ್ತು. ಆದ್ರೀಗ, ಅಶ್ವತ್ಥ ನಾರಾಯಣ ಡಿಸಿಎಂ ಆಗ್ತಿದ್ದಂತೆ, ಅಶೋಕ್​ ಪವರ್ ಫುಲ್​ ಕಟ್​ ಆದಂತೆ ಆಗಿದೆ. ಅಶ್ವತ್ಥ ನಾರಾಯಣ ಕೂಡ ಒಕ್ಕಲಿಗರು ಅನ್ನೋದು ಮತ್ತೊಂದು ಕಾರಣ. ಜೊತೆಗೆ ಬೆಂಗಳೂರಿನ ಶಾಸಕರು, ಕಾರ್ಪೋರೇಟರ್​​ಗಳು ಇನ್ಮುಂದೆ ಅಶೋಕ್​ ಮಾತನ್ನ ಕೇಳೋ ಅಗತ್ಯವೇ ಇರಲ್ಲ. ಕೇಂದ್ರದಲ್ಲಿ ಸಂತೋಷ್​ ಸ್ಟ್ರಾಂಗ್ ಆಗಿ ಇರೋದ್ರಿಂದ, ಇಲ್ಲಿ ಅಶ್ವತ್ಥ ನಾರಾಯಣ ಮಾತು ನಡೆಯುತ್ತೆ. ಸೋ, ಬೆಂಗಳೂರಿನ ನಾಯಕರಿಗೆ ಇನ್ಮುಂದೆ, ಅಶ್ವತ್ಥ ನಾರಾಯಣ ಅವರೇ ಬಾಸ್​.

ಆಕ್ರೋಶ.. ಸಿಟ್ಟು ಹೊರ ಹಾಕಿದ್ರಾ ಅಶೋಕ್​..?

Advertisement

ಸಚಿವ ಸ್ಥಾನ ಸಿಕ್ಕರೂ, ಡಿಸಿಎಂ ಸ್ಥಾನ ಸಿಗಲಿಲ್ಲ. ಇದ್ರಿಂದ ಸಹಜವಾಗಿಯೇ ಆಕ್ರೋಶ, ಅಸಮಾಧಾನ ಹೊರ ಹಾಕಿರೋ ಅಶೋಕ್​, ಸರ್ಕಾರಿ ವಾಹನವನ್ನ ವಾಪಸ್ ಕಳಿಸಿದ್ದಾರೆ. ಆದ್ರೆ, ಎಲ್ಲವೂ ಮುಗಿದು ಹೋಗಿದೆ. ಈಗ ಚಿಂತಿಸಿ ಯಾವುದೇ ಲಾಭವಿಲ್ಲ. ಹೈಕಮಾಂಡ್ ನಿರ್ಧಾರ ಮಾಡಿ ಆಗಿದ್ದು, ಇನ್ಮುಂದೆ ಕೆಮ್ಮಂಗಿಲ್ಲ ಅನ್ನೋ ಚರ್ಚೆ ಬಿಜೆಪಿ ನಾಯಕರಲ್ಲಿ ಕೇಳಿ ಬರ್ತಿದೆ. ಪಾಪ, ಅಶೋಕ್​ ಸಾಮ್ರಾಜ್ಯ ಕಳೆದುಕೊಂಡ ನೋವು ತುಂಬಾನೇ ಕಾಡಿದಂತಿದೆ..

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ