Featured
ಆಂಧ್ರ ಪ್ರದೇಶಕ್ಕೆ ನಾಲ್ಕು ರಾಜಧಾನಿ..? ಜಗನ್ ಅಚ್ಚರಿಯ ನಿರ್ಧಾರ ಎಷ್ಟು ಸರಿ..? ಅಮರಾವತಿ ಕಥೆ ಏನಾಗುತ್ತೆ..?
![](https://risingkannada.com/wp-content/uploads/2019/08/jagan.jpg)
ಅಮರಾವತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಹಲವು ವಿಭಿನ್ನ ನಿರ್ಧಾರಗಳಿಂದ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಐವರು ಡಿಸಿಎಂಗಳನ್ನು ಮಾಡಿ, ಇಡೀ ದೇಶದ ರಾಜಕೀಯದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ಜಗನ್, ಈಗ ಆಂಧ್ರ ರಾಜ್ಯಕ್ಕೆ ನಾಲ್ಕು ರಾಜಧಾನಿಗಳನ್ನ ಘೋಷಣೆ ಮಾಡೋಕೆ ಹೊರಟಿದ್ದಾರೆ.
ಯೆಸ್, ನೀವು ಓದ್ತಾ ಇರೋದು ಪಕ್ಕಾ. ಆದ್ರೆ, ಇನ್ನೂ ಅಧಿಕೃತವಾಗಿ ಆದೇಶ ಹೊರಬಿದ್ದಿಲ್ಲ. ಹೀಗೊಂದು ಆಲೋಚನೆ ಹಾಗೂ ಯೋಜನೆಯನ್ನ ಜಗನ್ ಮೋಹನ್ ರೆಡ್ಡಿ, ಕೇಂದ್ರ ಬಿಜೆಪಿ ನಾಯಕರಿಗೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಟಿ.ಜಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ನಾಲ್ಕು ರಾಜಧಾನಿಗಳು ಯಾವುವು..?
ನಾಲ್ಕು ರಾಜಧಾನಿಗಳನ್ನ ಈಗಾಗಲೇ ಆಯ್ಕೆ ಮಾಡಲಾಗಿದೆ. ಮೊದಲನೆಯದ್ದು, ವಿಜಯನಗರಂ. ಇದು ಆಂಧ್ರದ ಉತ್ತರ ಕರಾವಳಿ ಭಾಗದ ರಾಜಧಾನಿಯಾಗಲಿದೆ. ಎರಡನೇಯದ್ದು, ಕಾಕಿನಾಡ. ಇದು ಗೋದಾವರಿ ಜಿಲ್ಲೆಗಳ ರಾಜಧಾನಿಯಾಗಲಿದೆ. ಮೂರನೆಯದ್ದು, ಗುಂಟೂರು. ಇದು ದಕ್ಷಿಣ ಕರಾವಳಿ ಭಾಗಕ್ಕೆ ರಾಜಧಾನಿ. ನಾಲ್ಕನೆಯದ್ದು ಮತ್ತು ಕೊನೆಯದ್ದು ಕಡಪ. ಇದು ರಾಯಲಸೀಮಾ ಪ್ರಾಂತ್ಯಕ್ಕೆ ರಾಜಧಾನಿ ಆಗಲಿದೆ.
ಐದು ಡಿಸಿಎಂಗಳಂತೆ ನಾಲ್ಕು ರಾಜಧಾನಿ..!
ಯೆಸ್, ಹೇಗೆ ಪ್ರತಿ ಪ್ರಾಂತ್ಯ ಹಾಗೂ ಸಮುದಾಯಕ್ಕೆ ಒಬ್ಬರಂತೆ ಐವರು ಡಿಸಿಎಂಗಳನ್ನ ಆಯ್ಕೆ ಮಾಡಲಾಗಿತ್ತೋ, ಅದರಂತೆ ಪ್ರಾಂತ್ಯವಾರು ರಾಜಧಾನಿಗಳನ್ನ ಮಾಡಲು ಜಗನ್ ಮುಂದಾಗಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದಾರಂತೆ ಜಗನ್.
ಅಮರಾವತಿ ಕಥೆ ಏನು..?
ಈ ನಡುವೆ, ಒಂದು ತಾಂತ್ರಿಕ ಸಮಸ್ಯೆ ಬಂದಿದೆ. ಈಗಾಗಲೇ ಅಮರಾವತಿ ಆಂಧ್ರದ ರಾಜಧಾನಿ ಎಂದು ಈ ಹಿಂದಿನ ಟಿಡಿಪಿ ಸರ್ಕಾರ ಘೋಷಣೆ ಮಾಡಿತ್ತು. ಅದಕ್ಕಾಗಿ ಒಂದು ಲಕ್ಷ ಕೋಟಿ ವೆಚ್ಚದ ಪ್ರಾಜೆಕ್ಟ್ ಕೂಡ ರೆಡಿ ಮಾಡಿತ್ತು. ಅಲ್ಲದೆ, ಸುಮಾರು 38 ಸಾವಿರ ಕೋಟಿ ವೆಚ್ಚ ಕೂಡ ಮಾಡಲಾಗಿದೆ. ಈಗಾಗಲೇ 28 ಸಾವಿರ ರೈತ ಕುಟುಂಬಗಳಿಂದ 33 ಸಾವಿರ ಎಕರೆ ಭೂಮಿಯನ್ನ ಅಮರಾವತಿ ರಾಜಧಾನಿಗಾಗಿ ಪಡೆದುಕೊಳ್ಳಲಾಗಿದೆ. ಕೇವಲ ತಾತ್ಕಾಲಿಕ ಸಚಿವಾಲಯ ನಿರ್ಮಾಣಕ್ಕಾಗಿಯೇ 800 ಕೋಟಿ ವೆಚ್ಚ ಮಾಡಲಾಗಿತ್ತು.
ಈಗಾಗ್ಲೇ ಅಮರಾವತಿಯನ್ನ ರಾಜಧಾನಿಯನ್ನಾಗಿ ಮಾಡಲು ಪ್ರಕ್ರಿಯೆ ಆರಂಭವಾಗಿದೆ. ಆದ್ರೀಗ ಜಗನ್, ನಾಲ್ಕು ಹೊಸ ರಾಜಧಾನಿಗಳನ್ನ ಘೋಷಣೆ ಮಾಡೋ ತಯಾರಿಯಲ್ಲಿದ್ದಾರೆ. ಹಾಗಿದ್ರೆ, ಅಮರಾವತಿ ಕಥೆ ಏನು ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡ್ತಿದೆ. ಟಿಡಿಪಿ ಸರ್ಕಾರ ಅನಾವಶ್ಯಕವಾಗಿ ಅಮರಾವತಿಯನ್ನ ರಾಜಧಾನಿಯನ್ನಾಗಿ ಮಾಡ್ತು. ಕೇವಲ ರಿಯಲ್ ಎಸ್ಟೇಟ್ ಏಜೆಂಟರಿಗಾಗಿ ಈ ಪ್ರಾಜೆಕ್ಟ್ ಮಾಡಲಾಗಿತ್ತು ಅನ್ನೋದು ಜಗನ್ ಪಕ್ಷದ ಅಭಿಪ್ರಾಯ.
ಹಾಗಿದ್ರೆ, ಜಗನ್ ಆಂಧ್ರ ಪ್ರದೇಶಕ್ಕೆ ಹೊಸ ನಾಲ್ಕು ರಾಜಧಾನಿಗಳನ್ನ ಘೋಷಣೆ ಮಾಡ್ತಾರಾ..? ಇದು ಸರಿಯಾದ ನಿರ್ಧಾರನಾ..? ಇದರಿಂದ ಅಧಿಕಾರ ವಿಕೇಂದ್ರಿಕರಣ ಆಗಿ, ಅಭಿವೃದ್ಧಿಗೆ ಸಹಕಾರಿ ಆಗುತ್ತಾ..? ಕರ್ನಾಟಕಕ್ಕೂ ಮತ್ತೊಂದ ರಾಜಧಾನಿ ಅಗತ್ಯ ಇದೆಯಾ..? ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?