Featured
ತಾಯಿ ಆಗ್ತಿದ್ದಾರಾ ದೀಪಿಕಾ ಪಡುಕೋಣೆ..? : ಸಿನಿಮಾಗಳಿಗೆ ಡಿಪ್ಪಿ ಗುಡ್ ಬೈ..?

ಮುಂಬೈ : ಬಹುಶಃ ಇದು ನಿಜ ಆಗಿರಬಹುದು. ಆದ್ರೆ, ಅಧಿಕೃತವಾಗಿಲ್ಲ. ವಿಷಯಕ್ಕೆ ಬಂದ್ರೆ, ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದೀಪಿಕ ಪಡುಕೋಣೆ ಮತ್ತು ರಣವೀರ್ ಸಿಂಗ್ ಹಲವು ರೀತಿಯ ಫೋಟೋಗಳನ್ನ ಶೇರ್ ಮಾಡ್ತಿದ್ದಾರೆ. ಫೋಟೋಗಳ ಮೂಲಕವೇ ಸಣ್ಣ ಸಣ್ಣ ಹಿಂಟ್ ಕೊಡ್ತಿದ್ದಾರೆ. ಹೊಸದಾಗಿ ಇನ್ಸ್ಟಾ ಗ್ರಾಂನಲ್ಲಿರೋ ಫೋಟೋ ಹಲವು ಅನುಮಾನಗಳಿಗೆ ಕಾರಣವಾಗಿದೆ..
ಹೊಸ ಫೋಟೋದಲ್ಲಿ ರಣವೀರ್ ಬ್ಲೂ ಸೂಟ್ ಹಾಕಿದ್ದಾರೆ. ಆದ್ರೆ, ದೀಪಿಕಾ
ಯಾವಾಗಲು ಫಿಟ್ ಆಗಿರೋ ಡ್ರೆಸ್ ಹಾಕ್ತಿದ್ರು. ಇದರಲ್ಲಿ ಮಾತ್ರ ಲೂಸ್ ಲೂಸ್ ಆಗಿರೋ ಡ್ರೆಸ್ ಹಾಕಿದ್ದು,
ದುಪ್ಪಟ್ಟ ಕೂಡ ಹಾಕಿದ್ದಾರೆ. ಈ ಫೋಟೋ ಪೋಸ್ಟ್ ಮಾಡ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದು,
ಬೇಬಿ ಹಂಪ್ ಮುಚ್ಚಿಕೊಳ್ಳಲು ಈ ರೀತಿ ಡ್ರೆಸ್ ಹಾಕಿದ್ದಾರೆ ಎಂದಿದ್ದಾರೆ.
ದೀಪಿಕಾ ಗರ್ಭಿಣಿಯಾದಂತೆ ಕಾಣ್ತಿದೆ ಅಂತ ಮತ್ತೊಬ್ಬ ಫ್ಯಾನ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕೂಡ ದೀಪಕಾ ಗರ್ಭಣಿ ಎಂದಿದ್ದಾರೆ. ಅದರಂತೆ, ಕೆಲವು ಅಭಿಮಾನಿಗಳು ದೀಪಿಕಾಗೆ ಪ್ರಶ್ನೆ ಮಾಡಿದ್ದು, ನೀವು ಗರ್ಭಿಣಿ ಆಗಿದ್ದೀರಾ ಅಂತ ಕೇಳಿದ್ದಾರೆ. ಇದಕ್ಕೆಲ್ಲಾ ಒಂದೇ ಒಂದು ರೀಪ್ಲೇ ಮಾಡಿರೋ ದೀಪಿಕಾ ಪಡುಕೋಣೆ, ಹಲವು ಎಮೋಜಿಗಳನ್ನ ಹಾಕಿದ್ದಾರೆ.
ಅರ್ಜುನ್ ಕಪೂರ್ ಬಹಿರಂಗ ಮಾಡಿದ್ರಾ..?
ಇದೆಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಏನಪ್ಪಾ ಅಂದ್ರೆ, ನಟ ಅರ್ಜುನ್ ಕಪೂರ್ ಬರೆದಿರೋ ಕಾಮೆಂಟ್. ಬಾಬಾ ಭಾಯ್ ಈಸ್ ಗೊನ್ನಾ ಗೀವ್ ಯೂ ಒನ್ ಎಂದಿದ್ದು, ಅರ್ಜುನ್ ಕಾಮೆಂಟ್ ನೋಡಿರೋ ಅಭಿಮಾನಿಗಳು, ಇದು ಪಕ್ಕಾ ನ್ಯೂಸ್. ದೀಪಿಕಾ ತಾಯಿ ಆಗ್ತಿರೋದು ಗ್ಯಾರೆಂಟಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಸಿನಿಮಾಗಳಿಂದ ದೀಪಿಕಾ ದೂರ ದೂರ..!
ಈ ಎಲ್ಲಾ ಊಹೆಗಳು ಒಂದು ಕಡೆಯಾದ್ರೆ, ಮತ್ತೊಂದೆಡೆ ದೀಪಿಕಾಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದ್ರೆ, ದೀಪಿಕಾ ಮಾತ್ರ ಯಾವುದೇ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲ. ಸದ್ಯ ದೀಪಿಕಾ ಕೈಯಲ್ಲಿ 83 ಮತ್ತು ಚಪಕ್ ಸಿನಿಮಾಗಳು ಮಾತ್ರ ಇವೆ. ಆಫರ್ಗಳು ಇದ್ದರೂ ಯಾವುದೇ ಸಿನಿಮಾವನ್ನ ದೀಪಿಕಾ ಒಪ್ಪಿಕೊಳ್ತಿಲ್ಲ. ಹೀಗಾಗಿ, ದೀಪಿಕಾ ತಾಯಿ ಆಗ್ತಿದ್ದಾರಾ ಅನ್ನೋ ಅನುಮಾನ ಕಾಡ್ತಿದೆ.
ಈ ಎಲ್ಲಾ ಅನುಮಾನ, ಊಹೆಗಳಿಗೆ ದೀಪಿಕಾ ಮತ್ತು ರಣವೀರ್ ಜೋಡಿಯೇ ಉತ್ತರ ನೀಡಬೇಕಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















