Featured
ಹಿಂದುಳಿದ ಬ್ರಾಹ್ಮಣರ ಅಭಿವೃದ್ಧಿಗೆ ಮಂಡಳಿ ಬದ್ಧ : ಛಾಯಪತಿ

ರೈಸಿಂಗ್ ಕನ್ನಡ:
ಸೋಮವಾರಪೇಟೆ:
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮಾಜದವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಉನ್ನತಿಕರಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಟ್ಟಿ ಬದ್ಧವಾಗಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಕೆ.ಎನ್. ಛಾಯಪತಿ ಹೇಳಿದರು.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಸಮಾಜದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಮುದಯಾದ ಬಗ್ಗೆ ರಾಜ್ಯಾದ್ಯಂತ ಸರ್ವೆಕಾರ್ಯ ಕೈಗೊಂಡು ಅಂತ್ಯಕಾಲದಲ್ಲಿರುವ ಮತ್ತು ದಿರ್ಘಕಾಲಿಕ ರೋಗಿಗಳಾಗಿರುವರಿಗೆ ವೈದ್ಯಕೀಯ ಧನ ಸಹಾಯ ಮತ್ತು ಅಪರ ಕರ್ಮಗಳನ್ನು ನಡೆಸಲು ಕಡಿಮೆ ವೆಚ್ಚದಲ್ಲಿ ವ್ಯವಸ್ಥೆ ಮಾಡಲಾಗವುದೆಂದರು.
ಇನ್ನೋರ್ವ ಮುಖ್ಯ ಅತಿಥಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಮಾತನಾಡಿ ಗುರು ಹಿರಿಯರನ್ನು ಗೌರವಿಸುವಿಸುದರೊಂದಿಗೆ, ಸಮಾಜದರು ಸದಾ ಸಮಾಜದ ಮುಖಿಯಾಗಬೇಕೆಂದು ಸಲಹೆ ನೀಡಿದರು, ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜೇಂದ್ರ ಅಧ್ಯಕ್ಷತೆ ವಹಿಸಿ, ಕೊಡಗು ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ, ಗೋಪಾಲಕೃಷ್ಣ, ಮಳಿಯ ಕೇಶವಭಟ್ ವೇದಿಕೆಯಲ್ಲಿದ್ದರು.
ಕೊಡಗಿನ ಮೂರು ತಾಲೂಕಿನ ವಿಪ್ರ ಬಾಂಧವರು, ಕ್ಷೇಮಾಭಿವೃದ್ಧಿ ಸಮಿತಿಯ ಎಂ.ಗಿರೀಶ್, ಜಿ.ಶರತ್, ಮಂಜುನಾಥ್ ಗುಂಡುರಾವ್, ನಾರಾಯಣ್, ಸೋಮವಾರಪೇಟೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಕಾಯದಶಿ೯ ಎಸ್. ಡಿ.ವಿಜೇತ್, ಎಸ್. ಆರ್. ಸೋಮೇಶ್, ಮತ್ತಿತರರಿದ್ದು ಉದ್ಯಮಿ ರಾಜಶೇಖರ್ ಕಾಯ೯ಕ್ರಮ ನಿರ್ವಹಿಸಿ,ವೇದ ವಿದ್ವಾನ್ ಸುಬ್ರಾಮ್ ವಂದಿಸಿದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















