Featured
ಕರ್ನಾಟಕ ಬಂದ್: ದಾವಣಗೆರೆಯಲ್ಲಿ ಹೆದ್ದಾರಿ ಬಂದ್ ಮಾಡಿ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ:
ರೈಸಿಂಗ್ ಕನ್ನಡ:
ಕೃಷಿ ಮಸೂದೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ದಾವಣಗೆರೆಯಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದೆ.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜು ವಿ. ಶಿವಗಂಗಾ ನೇತೃತ್ವದಲ್ಲಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು.
50 ಕ್ಕೂ ಹೆಚ್ಚು ಕಿಸಾನ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಕಿಸಾನ್ ಕಾಂಗ್ರೆಸ್ ಸದಸ್ಯರು ಸುಗ್ರೀವಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿದರು.
ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಹೆದ್ದಾರಿ ಬಂದ್ ಮಾಡಿದ ಕಿಸಾನ್ ಕಾಂಗ್ರೆಸ್ ಸದಸ್ಯರಿಗೆ ಹೋರಾಟಕ್ಕೆ ಪೊಲೀಸರಿಂದ ಅಡ್ಡಿ ಮಾಡಿದರು. ಪ್ರತಿಭಟನೆ ಹಿನ್ನೆಲೆ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ದಟ್ಟಣೆಯಾಗಿತ್ತು.
ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆ ಹಿನ್ನೆಲೆ ಹೆದ್ದಾರಿಗೆ ಆಗಮಿಸಿದ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಮಾಡಲಾಗಿದೆ.
You may like
ಕರ್ನಾಟಕ ಬಂದ್ ಇಲ್ಲ.. ಇಲ್ಲ.. ಇಲ್ಲ : ಬಂದ್ ವಾಪಸ್ ಪಡೆದ ವಾಟಾಳ್ ನಾಗರಾಜ್
ಸೋಮವಾರ ಭಾರತ್ ಬಂದ್ : ಕರ್ನಾಟಕದಲ್ಲಿ ಏನಿರುತ್ತೆ.? ಏನಿರಲ್ಲ.? ಯಾರ ಯಾರ ಬೆಂಬಲ ಇದೆ.?
ನೂತನ ಕೃಷಿ ಕಾಯ್ದೆಗೆ ವಿರೋಧ: ಕಾಂಗ್ರೆಸ್ ನಾಯಕರಿಂದ ರಾಷ್ಟ್ರಪತಿ ಭೇಟಿ
ದಾವಣಗೆರೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತ: ಅದೃಷ್ವವಶಾತ್ ಪ್ರಾಣಾಪಾಯದಿಂದ ಪಾರು
ದಾವಣಗೆರೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು
ಆಸ್ತಿ ವಿವಾದ: ಆರು ತಿಂಗಳಿನಿಂದ ದೇವಸ್ಥಾನಕ್ಕೆ ಹಾಕಿದ್ದ ಬೀಗ ತೆರೆವು