Featured
ಸಾಹೋ ಪ್ರಭಾಸ್ಗೆ ಅನುಷ್ಕಾ ಶೆಟ್ಟಿ ಸಂಕಟ..! ಅಚ್ಚರಿಯಾದ್ರೂ ಇದು ಸತ್ಯ..? ಇಷ್ಟಕ್ಕೂ ಏನಾಯ್ತು..?
ಹೈದರಾಬಾದ್ : ಬಾಹುಬಲಿ ಸಿನಿಮಾ ಮೂಲಕ ಇಡೀ ದೇಶಕ್ಕೆ ಸೌತ್ ಸಿನಿಮಾದ ಕ್ಯಾಪಸಿಟಿ ಏನು ಅಂತ ತೋರಿಸಿದವರು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ. ಇವರಿಬ್ಬರ ಜೋಡಿಗೆ, ಕೇವಲ ಆಂಧ್ರ, ತೆಲಂಗಾಣದಲ್ಲೇ ಅಲ್ಲದೆ, ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಭಾಸ್, ಅನುಷ್ಕಾ ಆನ್ ಸ್ಕ್ರೀನ್ ರೊಮ್ಯಾನ್ಸ್, ನಟನೆ ಎಲ್ಲವೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಅದೇ ಈಗ ಪ್ರಭಾಸ್ರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.
ಹೌದು, ಇಷ್ಟಕ್ಕೂ ಆಗ್ತಿರೋದು ಏನಪ್ಪ ಅಂದ್ರೆ, ಪ್ರಭಾಸ್ ಸದ್ಯ ಸಾಹೋ ಸಿನಿಮಾದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್, ಚೆನ್ನೈ, ಮುಂಬೈ, ಬೆಂಗಳೂರು, ಕೇರಳ ಎಂಬಂತೆ ಇಡೀ ದೇಶಾದ್ಯಂತ ಪ್ರಭಾಸ್ ಸುತ್ತುತ್ತಾ ಇದ್ದಾರೆ. ಇಂಥಹ ಸಂದರ್ಭದಲ್ಲಿ ಪ್ರಭಾಸ್ ಎಲ್ಲೇ ಹೋದರೂ, ಅನುಷ್ಕಾ ಶೆಟ್ಟಿ ಕುರಿತು ಪ್ರಶ್ನೆ ಕೇಳ್ತಿದ್ದಾರೆ. ಎಲ್ಲೇ ಹೋದ್ರೂ, ಯಾವುದೇ ಊರಿಗೆ, ಯಾವ ಭಾಷೆಯ ಪತ್ರಕರ್ತರ ಬಳಿ ಹೋದರೂ, ಅವರಿಂದ ಬರುವ ಪ್ರಶ್ನೆ ಅನುಷ್ಕಾ ಶೆಟ್ಟಿಯ ಬಗ್ಗೆ ಆಗಿರುತ್ತೆ.
ಅನುಷ್ಕಾ ಶೆಟ್ಟಿ ಜೊತೆ ಯಾಕೆ ಸಿನಿಮಾ ಮಾಡಿಲ್ಲ. ನಿಮ್ಮ ಇಬ್ಬರ ಜೋಡಿ ತುಂಬಾ ಚೆನ್ನಾಗಿತ್ತು. ಇಬ್ಬರು ಲವ್ ಮಾಡ್ತಿದ್ದರಾ..? ಮದುವೆ ಆಗ್ತಾರಾ.? ನಿಮ್ಮ ಮದುವೆ ಯಾವಾಗ..? ಹೀಗೆ ಅನುಷ್ಕಾಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಪ್ರಭಾಸ್ಗೆ ಸಾಕಾಗಿ ಹೋಗಿದೆಯಂತೆ. ಸಾಹೋ ಸಿನಿಮಾಗಿಂತಲೂ ಅನುಷ್ಕಾ ಕುರಿತ ಪ್ರಶ್ನೆಗಳೇ ಹೆಚ್ಚಾಗಿ ಇರುತ್ತವಂತೆ. ಇಷ್ಟಾದ್ರೂ, ಕೋಪವನ್ನ ತಡೆಹಿಡಿದು, ಎಲ್ಲಾ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರ ಕೊಡ್ತಿದ್ದಾರಂತೆ ಪ್ರಭಾಸ್.
ಅದೇನೇ ಆಗ್ಲಿ, ಈಗಾಗ್ಲೇ ಸಾಕಷ್ಟು ಬಾರಿ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರು ಕೂಡ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ನಾವಿಬ್ಬರು ಒಳ್ಳೇ ಫ್ರೆಂಡ್ಸ್ ಎಂದು. ಆದರೂ, ಅನುಷ್ಕಾ ವಿಷಯದಿಂದ ಪ್ರಭಾಸ್ಗೆ ನಿದ್ದೆ ಇಲ್ಲದಂತೆ ಮಾಧ್ಯಮಗಳು ಮಾಡ್ತಿವೆಯಂತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?