Featured
ಉಕ್ಕಿ ಹರಿದ ಭೀಮಾ, ಡೋಣಿ ನದಿ: ವಿಜಯಪುರದಲ್ಲಿ ಹಲವು ಗ್ರಾಮಗಳು ಜಲಾವೃತ,ಸಂಪರ್ಕ ಕಡಿತ
![](https://risingkannada.com/wp-content/uploads/2020/09/vijayapura-1.jpg)
ರೈಸಿಂಗ್ ಕನ್ನಡ:
ವಿಜಯಪುರ:
ಕಳೆದ ಹಲವು ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಡೋಣಿ ನದಿ ಹಾಗೂ ಭೀಮಾ ನದಿ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಡೋಣಿನದಿ ತುಂಬಿ ಹರಿಯುತ್ತಿರುವುದಿಂದ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ಸೇತುವೆ ಜಲಾವೃತವಾಗಿದೆ.
ನೀರು ಅಧಿಕಾವಾಗಿ ಹರಿಯುತ್ತಿದ್ದರು, ಅಪಾಯ ಲೆಕ್ಕಿಸದೇ ಸೇತುವೆ ಮೇಲೆ ಜನರು ಸಂಚರಿಸುತ್ತಿದ್ದಾರೆ.
ಜಾಹೀರಾತು
ಅಪಾಯವನ್ನೂ ಲೆಕ್ಕಿಸದೇ ತುಂಬಿ ಹರಿಯುತ್ತಿದ್ದು, ಸ್ವಲ್ಪ ಆಯತಪ್ಪಿದರೂ ನದಿ ಪಾಗುವ ಸಾಧ್ಯತೆ ಇದೆ. ಸೇತುವೆ ಮುಳುಗಿದ ಕಾರಣ ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ, ಕಲ್ಲದೇನಹಳ್ಳಿ, ಹಗರಗೊಂಡ ಗ್ರಾಮಗಳಿಂದ ತಾಳಿಕೋಟೆ ಪಟ್ಟಣದ ಸಂಪರ್ಕ ಸ್ಥಗಿತಗೊಂಡಿದೆ.
ಇನ್ನೂ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ ಕಾರಣ, ವಿಜಯಪುರ ಜಿಲ್ಲೆ ಸಿಂದಗಿ, ಇಂಡಿ ತಾಲೂಕಿನ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭೀಮಾ ನದಿ ಭಾಗದ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರು ಮಳೆಯಿಂದಾಗಿ ಆತಂಕಗೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?