Featured
ರಾಜ್ಯಸಭೆಯಲ್ಲಿ ಗದ್ದಲ: 8 ಮಂದಿ ಸದಸ್ಯರನ್ನ ಅಮಾನತು ಮಾಡಿದ ರಾಜ್ಯ ಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು

ರೈಸಿಂಗ್ ಕನ್ನಡ:
ನ್ಯೂಸ್ಡೆಸ್ಕ್:
ಕೃಷಿ ಮಸೂದೆ ಮಂಡನೆಗೆ ಸಂಬಂಧಪಟ್ಟಂತೆ ಕೋಲಾಹಲಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದೆ. ರಾಜ್ಯಸಭೆಯನ್ನ ಮುಂದಿನ ಮಂಗಳವಾರದವರೆಗೆ ಕಾಲ ಮುಂದೂಡಿದ್ದಾರೆ. ಅಮಾನತು ಕುರಿತು ಪರ ವಿರೋಧಗಳ ಚರ್ಚೆ ಆರಂಭವಾಗಿದೆ.
ಕೃಷಿ ಮಸೂದೆ ಮಂಡನೆ ನಂತರ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪಸಭಾಪತಿ ಅವರನ್ನ ಕೆಟ್ಟದಾಗಿ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಭಾ ಸದಸ್ಯರಾದ ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಅಗೇಶ್,ರಿಪೂನ್ ಬೋರಾ,ಡೋಲಾ ಸೇನ್,ಸೈಯದ್ ನಜೀರ್ ಹುಸೇನ್,ಎಲಮರನ್ ಕರೀಮ್ ಮತ್ತು ಡೆರೆಕ್ ಒ ಬ್ರಿಯನ್ ಅವರುಗಳನ್ನ ಒಂದು ವಾರಗಳ ಕಾಲ ಅಮಾನತುಗೊಳಿಸಲಾಗಿದೆ.
ಕೃಷಿ ಸಚಿವ ತೋಮರ್ ಮಸೂದೆ ಮಂಡಿಸುವಾಗ ವಿರೋಧ ಪಕ್ಷಗಳು ವಿರೋದಿಸಿದವು. ಪರಿಶೀಲನಾ ಸಮಿತಿಗೆ ಕಳುಹಿಸುವಂತೆ ಹೇಳಿದವು.ನಿರ್ಣಯವನ್ನ ಧ್ವನಿ ಮತಕ್ಕೆ ಹಾಕಿದಾಗ ವಿರೋಧ ಪಕ್ಷಗಳ ಆಕ್ರೋಶ ಮುಗಿಲು ಮುಟ್ಟಿತ್ತು.
ಇದೇ ಸಂದರ್ಭದಲ್ಲಿ ಸಭಾಪತಿಯತ್ತ ನುಗ್ಗಿದ ತೃಣಮೂಲಕ ಕಾಂಗ್ರೆಸ್ ನಾಯಕ ಡೆರೆಕ್ಒಬ್ರಿಯನಾನ್ ಸೇರಿದಂತೆ ವಿಪಕ್ಷ ಸದಸ್ಯರು ಘೋಷಣೆ ಕೂಗಿಕೊಂಡು ಮೈಕ್ರೋಫೋನ್ಗಳನ್ನ ಕಿತ್ತು ಹಾಕಿದರು. ಧರಣಿಗೆ ಕೂತು ಘೋಷಣೆ ಕೂಗಿದರು. ಇದರ ಪರಿಣಾಮ ಎರಡು ಗಂಟೆಗಳ ಕಾಲ ಮುಂದೂಡಲಾಯಿತು. ಗದ್ದಲ್ಲ ನಡುವೆಯೂ ಉಪ ಸಭಾಪತಿ ಹರಿವಂಶ ಮಸೂದೆಯನ್ನ ಧ್ವನಿ ಮತಕ್ಕೆ ಹಾಕಿದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















