Featured
ಪ್ರಧಾನಿ ಮೋದಿ ಹುಟ್ಟು ಹಬ್ಬ: ಜನಕಲ್ಯಾಣಧಿಕಾರಿ ಯೋಜನಾಯಿಂದ ಉಚಿತ ಊಟ ವಿತರಣೆ

ರೈಸಿಂಗ್ ಕನ್ನಡ:
ಬೆಂಗಳೂರು :
ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ಪ್ರಧಾನಮಂತ್ರಿ ಜನಕಲ್ಯಾಣಧಿಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ ಕರ್ನಾಟಕದ, ವತಿಯಿಂದ ಬೆಂಗಳೂರಿನ ವಿಕ್ಟೋರಿಯಾ ಹಾಗೂ ನಿಮಾನ್ಸ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ಬಡವರಿಗೆ ಮಧ್ಯಾಹ್ನದ ಊಟವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸುಸಂದರ್ಭದಲ್ಲಿ ಉಪಸ್ಥಿತರಿದ್ದ ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಫ್. ಪಾಟೀಲ್ ರವರು ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮಾಜದ ತಳಮಟ್ಟದ ಪ್ರಜೆಯ ವರೆಗೆ ಮುಟ್ಟಿಸುವ ಅದಮ್ಯ ಜವಾಬ್ದಾರಿ ನಿಮ್ಮ NGO ನ ಹೆಗಲ ಮೇಲಿದೆ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಎಂದು ಶುಭ ಕೋರುವುದರ ಮೂಲಕ ಈ ಸೇವಾ ಚಟುವಟಿಕೆಯನ್ನು ಉದ್ಘಾಟಿಸಿದರು.
ಈ ಚಟುವಟಿಕೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ PMJKYPPA ರಾಜ್ಯ ಅಧ್ಯಕ್ಷರಾದ ಅಮಿತಾ ರಾಣಿ ಪಾಂಡೆಯವರು ‘ಶ್ರೀ ನರೇಂದ್ರ ಮೋದಿ ಜಿ ಅವರು ದಣಿವರಿಯದ ಕಾಯಕಯೋಗಿ ಹಾಗೆ ದೇಶದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕಾಗಿ ದುಡಿಯುತ್ತಿದ್ದ ವಯಸ್ಸು ಎನ್ನುವುದು ಕೇವಲ ನೆಪ ಅಷ್ಟೇ.
70ರ ಹರೆಯದಲ್ಲೂ 70 ಸಾವಿರದಷ್ಟು ಕನಸುಗಳನ್ನು ನನಸು ಮಾಡುವ ಹುರುಪಿನೊಂದಿಗೆ ಬಲಿಷ್ಠ ಭಾರತ ಹಾಗೂ ಆತ್ಮ ನಿರ್ಭರ ಭಾರತದ ದಿಶೆಯಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ಭಾರತೀಯರ ಹಾರೈಕೆ ಹಾಗೂ ದೇವರ ಆಶೀರ್ವಾದ ನರೇಂದ್ರ ಮೋದಿಜಿಯವರ ಮೇಲೆ ಸದಾ ಇರಲಿ’ ಎಂದು ನುಡಿದರು.
ಈ ಸೇವಾ ಚಟುವಟಿಕೆಯಲ್ಲಿ ಸದಾಶಿವಪ್ಪ ಬಿಜೆಪಿ ಪ್ರಕೋಷ್ಠ ಉಪಾಧ್ಯಕ್ಷರು, ಸಂದೀಪ್ ರವಿ (ಬಿಜೆಪಿ ಯುವಮೋರ್ಚಾ ಬೆಂಗಳೂರು ಸೌತ್) ,ವಿನಯ್ ಜಾದವ್ (ABVP ಖಜಾಂಚಿ), ಶ್ರೀನಿವಾಸ. ಡಿ.(ಭಾರತ ವಿಕಾಸ ಪರಿಷದ್ ಗ್ರಾಮೀಣ ) ಮತ್ತು PMJKYPPA ಯ ಭರತ ಜೈನ, ದಿನೇಶ್, ಲಲಿತ್, ಶಶಿ ದೇಶಪಾಂಡೆ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















