Featured
ನ್ಯಾಯಾಧೀಶರ ಜೀವನ ಹೂವಿನ ಹಾಸಿಗೆಯಲ್ಲ: ನ್ಯಾಯಮೂರ್ತಿ ರಮಣ
![](https://risingkannada.com/wp-content/uploads/2020/09/justice.jpg)
ರೈಸಿಂಗ್ ಕನ್ನಡ :
ನ್ಯೂಸ್ಡೆಸ್ಕ್:
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧಿಶರುಗಳ ಬಗ್ಗೆ ವ್ಯಂಗ್ಯದ ಹಾಸ್ಯ, ಟೀಕೆಗಳು ಮತ್ತು ಗಾಸಿಪ್ಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಸುಪ್ರೀಮ್ ಕೋರ್ಟ್ನ ನ್ಯಾಯಾಮೂರ್ತಿಗಳಾದ ಎನ್.ವಿ.ರಮಣ ಮತ್ತು ಎಸ್.ಎ.ಬೊಬ್ಡೆ ಅಸಮಾಧಾನ ಹೊರ ಹಾಕಿದ್ದಾರೆ.
ಭಾನುವಾರ ಮಾಜಿ ನ್ಯಾಯಧೀಶ ಆರ್.ಭಾನುಮತಿ ಅವರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನ್ಯಾಯಾಧೀಶರ ವಿರುದ್ಧದ ಟೀಕೆ, ಅಪಹಾಸ್ಯಗಳು ಹೆಚ್ಚಾಗಲು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವೇ ಕಾರಣ ಎಂದು ನ್ಯಾಯಾಮೂರ್ತಿ ರಮಣ ಹೇಳಿದ್ದಾರೆ.
ಜಾಹೀರಾತು
ನ್ಯಾಯಾಧೀಶರು ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಲು ಮುಕ್ತವಾಗಿ ಮಾತನಾಡಲು ಸ್ವಯಂ ನಿರ್ಬಂಧಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ನ್ಯಾಯಾಧಿಶರು ಟೀಕಾಕಾರಿಗೆ ಆಹಾರವಾಗುತ್ತಾರೆ ಎಂದು ಎಂದು ವಿವರಿಸಿದ್ದಾರೆ.
ಇನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮಾತನಾಡಿ, ಜನರ ಭಾವನೆಗಳನ್ನ ವ್ಯಕ್ತಪಡಿಸುವುದಕ್ಕೆ ತಡೆಯೊಡ್ಡುವ ಕಾನೂನುಗಳೇ ನ್ಯಾಯಾಧೀಶರ ವಾಕ್ ಸ್ವಾತಂತ್ರ್ಯಕ್ಕೆ ತಡೆ ತರುತ್ತಿದೆ. ಈ ರೀತಿಯ ಟೀಕೆ ನ್ಯಾಯಾಂಗದ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದಿದ್ದಾರೆ.
ಜನರ ಮನಸಲ್ಲಿ ನ್ಯಾಯಾಧೀಶರು ಶ್ರೀಮಂತರಂತೆ ಜೀವನಸಾಗಿಸುತ್ತಿರುತ್ತಾರೆ ಎಂಬ ತಪ್ಪು ಗ್ರಹಿಕೆ ಇದೆ. ಆದರೆ ನ್ಯಾಯಧಿಶರ ಜೀವನ ಹೂವಿನ ಹಾಸಿಗೆಯಲ್ಲ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?