Featured
ಶಾಸಕ ಜಮೀರ್ ಅಹ್ಮದ್, ಶೇಖ್ ಫಾಜೀಲ್ ಇಬ್ಬರ ನಂಟಿನ ಬಗ್ಗೆ ವಿಚಾರಿಸಿ: ಸಿಸಿಬಿಗೆ ಪ್ರಶಾಂತ್ ಸಂಬರಗಿ ಮನವಿ
![](https://risingkannada.com/wp-content/uploads/2020/09/prashant-sambargi-2.jpg)
ರೈಸಿಂಗ್ ಕನ್ನಡ :
ಬೆಂಗಳೂರು:
ನನ್ನಲ್ಲಿದ್ದ ಸಾಕ್ಷಿಗಳನ್ನ ಸಿಸಿಬಿ ಅಧಿಕಾರಿಗಳಿಗೆ ಕೊಟ್ಟಿದ್ದು ಶಾಸಕ ಜಮೀರ್ ಅಹ್ಮದ್ ಮತ್ತು ಶೇಖ್ ಫಾಜೀಲ್ ನಂಟಿಗೆ ವಿಚಾರಣೆ ಮಾಡುವಂತೆ ಮನವಿ ಮಾಡಿರುವುದಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿದ್ದರು.ವಿಚಾರಣೆ ಮುಗಿದ ನಂತರ ಬಂದು ಮಾತನಾಡಿದ ಅವರು, ಸಿಸಿಬಿಗೆ ನನ್ನ ಬಳಿ ಇದ್ದ ಸಾಕ್ಷ್ಯಗಳನ್ನ ನೀಡಿದ್ದೇನೆ. ಶಾಸಕ ಜಮೀರ್ ಅಹ್ಮದ್ ಮತ್ತು ಶೇಖ್ ಫಾಜೀಲ್ ಇಬ್ಬರ ವ್ಯವಹಾರ ಬಯಲಾಗಬೇಕು.
![](https://risingkannada.com/wp-content/uploads/2020/09/zameer-1.jpg)
ನಟ,ನಟಿಯರ ಬಗ್ಗೆ ಯಾವ ದಾಖಲೆಗಳನ್ನು ಕೊಟ್ಟಿಲ್ಲ.ನಾನು ಯಾರ ವಕ್ತಾರನೂ ಅಲ್ಲ. ಯಾವುದೇ ರಾಜಕೀಯ ಪ್ರೇರಿತನಾಗಿ ಕೆಲಸ ಮಾಡುತ್ತಿಲ್ಲ ಎಂದು ಮಾಧ್ಯಮಾಗಳಿಗೆ ಹೇಳಿದರು.
ನಾನು ಗಾಳಿಯಲ್ಲಿ ಗುಂಡು ಹೊಡೆಯುವವನಲ್ಲ. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ವಿರುದ್ಧ ಹೋರಾಟ ನಡೆಸುತ್ತೇನೆ. ಶಾಸಕ ಜಮೀರ್ ಅವರ 50ನೇ ಹುಟ್ಟುಹಬ್ಬದ ಸಂಭ್ರಮದ ಪಾರ್ಟಿಯಲ್ಲಿ ಬಾಲಿವುಡ್ ನಟರಾದ ಜಾಕಿಶ್ರಾಫ್,ಸಂಜಯ್ ದತ್, ಶಕ್ತಿ ಕಪೂರ್,ಅಫ್ತಾಬ್ ಶಿವದಾಸನಿಯಂಥ ಶ್ರೇಷ್ಠ ನಟರು ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.
ಈ ಪ್ರಕರಣದ ವಿಚಾರಣೆ ಮುಂದಿನ ಶುಕ್ರವಾರ ನಡೆಯಲಿದ್ದು ಮತ್ತೆ ವಿಚಾರಣೆ ಎದುರಿಸುವುದಾಗಿ ಪ್ರಶಾಂತ್ ಸಂಬರಗಿ ಹೇಳಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?