ರೈಸಿಂಗ್ ಕನ್ನಡ :
ಬೆಂಗಳೂರು:
ಡ್ರಗ್ಸ್ ದಂಧೆ ಜಾಲದ ನಂಟು ಹೊಂದಿದ ಆರೋಪ ಸಂಬಂಧ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಕಳೆದ 8 ದಿನಗಳಿಂದ ನಟಿ ರಾಗಿಣಿ ಮತ್ತು 4 ದಿನಗಳಿಂದ ನಟಿ ಸಂಜನಾ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಇದೀಗ ಮತ್ತೆ ಸಾಂತ್ವನ ಕೇಂದ್ರ ಫಿಕ್ಸ್ ಆಗಿದೆ.
ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳನ್ನ ಕೇಳಿದ್ದರು. ಆದರೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ನಟಿ ರಾಗಿಣಿ, ಸಂಜನಾ ಮತ್ತು ಇತರೆ ಆರು ಆರೋಪಿಗಳಿಗೆ ಮೂರು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ.
ನಟಿಯರ ಪರವಾಗಿ ವಕೀಲರು ಬಂಧನದಿಂದ ಬಿಡುಗಡೆ ಮಾಡುವುದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ನ್ಯಾಯಾಲಯ ನಟಿಮಣಿಯರಿಗೆ ಯಾವ ಕರುಣೆಯನ್ನ ತೋರಿಸಿಲ್ಲ.
ಆಕ್ರೋಶಗೊಂಡ ಸಂಜನಾ,ರಾಗಿಣಿ
ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆ ಸಂಜನಾ ಮತ್ತು ರಾಗಿಣಿ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ. ನ್ಯಾಯಾಲಯದ ವಿಚಾರಣೆ ವಿಡಿಯೊ ಕಾನ್ಫೆರೆನ್ಸ್ ಮೂಲಕ ನಡೆದಿತ್ತು. ಲ್ಯಾಪ್ ಟಾಪ್ ಮುಂದೆ ಕೂತಿದ್ದ ರಾಗಿಣಿ ಮತ್ತು ಸಂಜನಾ ತಮ್ಮ ವಿರುದ್ಧ ತೀರ್ಪು ಬಂದ ಕೂಡಲ್ಲೇ ಅಸಮಾಧಾನಗೊಂಡು ಎದ್ದು ಹೋಗಿದ್ದಾರೆ.
ಇಡಿ ಅಧಿಕಾರಿಗಳಿಂದಲೂ ತನಿಖೆ
ಸಂಜನಾ,ರಾಗಿಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹವಾಲಾ ಹಣ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಡಿ ಇಸಿಆರ್ ಪ್ರಕರಣವನ್ನ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಿದೆ. ನಟಿಯರು ಬರೀ ಸಿಸಿಬಿ ಅಧಿಕಾರಿಗಳಿಗೆ ಮಾತ್ರವಲ್ಲ ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೂ ಉತ್ತರಿಸಬೇಕಾದ ಸವಾಲನ್ನ ಎದುರಿಸಲಿದ್ದಾರೆ.
ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಫುಲ್ ಡ್ರಿಲ್ : ಏನ್ ಹೇಳಿದ್ರೂ ಸ್ವೀಟಿ..?
ಡ್ರಗ್ಸ್ ಮಾಫಿಯಾ: ಕಣ್ಣೀರು ಹಾಕಿದ ನಿರೂಪಕಿ ಅನುಶ್ರಿ
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ: ಪೊಲೀಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ: ನಿರೂಪಕಿ ಅನುಶ್ರಿ
ಡ್ರಗ್ಸ್ ಜಾಲದ ನಂಟು: ಮಂಗಳೂರು ಸಿಸಿಬಿ ಪೊಲೀಸ್ರಿಂದ ನಿರೂಪಕಿ ಅನುಶ್ರಿಗೆ ನೋಟಿಸ್
ಡ್ರಗ್ಸ್ ಮಾಫಿಯಾ: ಸಿಸಿಬಿ ಎದುರು ಮತ್ತೆ ಹಾಜರಾದ ನಟ ದಿಗಂತ್
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ: ಕಿರುತೆರೆ ಕಲಾವಿದರಾದ ನಟಿ ಗೀತಾ, ನಟ ಅಭಿಷೇಕ್ ವಿಚಾರಣೆ