Featured
ದರ್ಶನ್ ಕುದುರೆ ಸವಾರಿ ಹೇಗಿದೆ ನೋಡಿ : ವೀಕೆಂಡ್ನಲ್ಲಿ ಡಿ-ಬಾಸ್ ರಿಲ್ಯಾಕ್ಸ್ ಮೂಡ್
ಬೆಂಗಳೂರು : ಕುರುಕ್ಷೇತ್ರ ಸಿನಿಮಾದ ಸೂಪರ್ ಸಕ್ಸಸ್ನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ, ವೀಕೆಂಡ್ಅನ್ನ ಸಖತ್ ಎಂಜಾಯ್ ಮಾಡಿದ್ರು. ತಮ್ಮ ತೋಟದ ಮನೆಯಲ್ಲಿ ಸಮಯ ಕಳೆದ ದರ್ಶನ್, ಕುದುರೆ ಸವಾರಿ ಮಾಡಿ ಎಂಜಾಯ್ ಮಾಡಿದ್ರು. ತಮ್ಮ ನೆಚ್ಚಿನ ಬಿಳಿ ಕುದುರೆ ಮೇಲೆ ತೋಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರೌಂಡ್ ಹಾಕಿದ್ರು ದರ್ಶನ್.
ದರ್ಶನ್, ಕುದುರೆ ಸವಾರಿಗೆ ಸ್ನೇಹಿತರು ಕೂಡ ಸಾಥ್ ನೀಡಿದ್ರು. ದರ್ಶನ್ ಬಿಳಿ ಕುದುರೆಗೆ ಮತ್ತೊಂದು ಮರಿ ಕುದುರೆಯನ್ನ ಕಟ್ಟಲಾಗಿತ್ತು. ಅದರ ಹಿಂದೆ ಮತ್ತೆರಡು ಕುದುರೆಗಳ ಮೇಲೆ ದರ್ಶನ್ ಸ್ನೇಹಿತರು ಸವಾರಿ ಮಾಡಿದ್ರು.
ಕೌಬಾಯ್ ಸ್ಟೈಲ್ ರೀತಿಯಾಗಿ ಡ್ರೆಸ್ ಮಾಡಿದ್ದ ದರ್ಶನ್, ಕುದುರೆ ಸವಾರಿ ಮಾಡ್ತಿದ್ರೆ, ರಸ್ತೆ ಪಕ್ಕದಲ್ಲಿದ್ದ ಜನ ಡಿ-ಬಾಸ್ ಡಿ-ಬಾಸ್ ಎಂದು ಕೂಗ್ತಿದ್ರು. ಡಿ-ಬಾಸ್ ಬಂದ್ರು ಡಿ-ಬಾಸ್ ಬಂದ್ರು ಅಂತ ಘೋಷಣೆ ಜೊತೆಗೆ ಜೈಕಾರ ಕೂಗ್ತಿದ್ರು.
ಕುದುರೆ ಸವಾರಿ ಬಳಿಕ, ತೋಟದಲ್ಲಿದ್ದ ಆತ್ಮೀಯರನ್ನ, ಸ್ನೇಹಿತರನ್ನ ಭೇಟಿಯಾಗಿ ಅವರ ಉಭಯಕುಶಲೋಪರಿ ವಿಚಾರಿಸಿದ್ರು. ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿ ಪಟ್ರು.
ಒಟ್ಟಿನಲ್ಲಿ ವೀಕೆಂಡ್ನಲ್ಲಿ ಡಚ್ಚು ಸ್ನೇಹಿತರು ಮತ್ತು ಕುದುರೆಗಳ ಜೊತೆ ಮಸ್ತ್ ಎಂಜಾಯ್ ಮಾಡಿದ್ರು. ದರ್ಶನ್ ಹೊಸ ಅವತಾರ ಹಾಗೂ ವೀಕೆಂಡ್ ಮಸ್ತಿ ನೋಡಿದ ಅಭಿಮಾನಿಗಳು, ಇದು ಡಿ-ಬಾಸ್ ಖದರ್ ಎಂದು ಕೊಂಡಾಡಿದ್ರು..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?