ರೈಸಿಂಗ್ ಕನ್ನಡ:
ಚಿಕ್ಕೋಡಿ:
ಅಥಣಿ ಪಟ್ಟಣ, ತಾಲೂಕಿನಾದ್ಯಾಂತ ಹೆಚ್ಚುತ್ತಿರುವ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧೀಕ್ಷಕರು ಡಾ. ಲಕ್ಷ್ಮಣ ನಿಂಬರಗಿ , ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಕಾರ್ಯಾರಚರಣೆ ನಡೆದಿದೆ.
ಬಾಗಲಕೋಟ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ ಒಟ್ಟು ಸುಮಾರು 5 ಲಕ್ಷ ರೂ ಮೌಲ್ಯದ 15 – ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ .