Featured
ಬೆಂಗಳೂರು ಗಲಭೆ: ಪೂರ್ವ ಯೋಜಿತ, ಕೋಮು ಪ್ರೇರಿತ
![](https://risingkannada.com/wp-content/uploads/2020/09/bsy-citizen.jpg)
ರೈಸಿಂಗ್ ಕನ್ನಡ :
ಬೆಂಗಳೂರು:
ಇತ್ತಿಚೆಗೆ ನಡೆದ ಬೆಂಗಳೂರು ಗಲಭೆ ಪೂರ್ವ ಯೋಜಿತ ಮತ್ತು ಸಂಘಟಿತ ಮತ್ತು ಯಾವುದೇ ಅನುಮಾನವಿಲ್ಲದೇ ಇದೊಂದು ಕೋಮು ಪ್ರೇರಿತ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ತನ್ನ ಸತ್ಯ ಶೋಧನಾ ವರದಿಯಲ್ಲಿ ತಿಳಿಸಿದೆ.
ಮದನ್ ಗೋಪಾಲ್ ನೇತೃತ್ವದ ಸಿಟಿಜನ್ಸ್ ಫಾರ್ ಡೆಮಾಕ್ರಸಿ ತನ್ನ ವರದಿಯನ್ನ ಶುಕ್ರವಾರ ಸಿಎಂ ಯಡಿಯೂರಪ್ ಅವರಿಗೆ ಸಲ್ಲಿಸಿದೆ.
ಆ.11ರಂದು ರಾತ್ರಿ ನಡೆದ ಗಲಭೆಯ ಸಮಯದಲ್ಲಿ ಆ ಗುಂಪು ಕೆಲವು ಹಿಂದೂಗಳನ್ನ ನಿರ್ದಿಷ್ಟವಾಗಿ ಗುರಿಯಾಗಿಸಿತ್ತು ಮತ್ತು ಇಡೀ ಘಟನೆ ಜನರ ನಂಬಿಕೆ ಇಲ್ಲದಂತೆ ಮಾಡು ವುದು, ಗಲಭೆಯಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಾಬಲಾಡಿ ನೇತೃಥ್ವದ ಸತ್ಯ ಶೋಧನಾ ಸಮಿತಿ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಫ್ಎಸ್ ಅಧಿಕಾರಿ ಆರ್.ರಾಜು ಪತ್ರಕರ್ತರು, ವಕೀಲರು ಪ್ರಾಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒಳಗೊಂಡ ಸಮಿತಿಯಾಗಿತ್ತು.
ಗಲಬೆಯಲ್ಲು 300 ಖಾಸಗಿ ವಾಹನಗಳು, 36 ಸರ್ಕಾರಿ ವಾಹನಗಳು, ಮನೆಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ.ಒಟ್ಟು 10ರಿಂದ 15 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.