Featured
ಗೋಗರೆದರೂ ಬಾರದ ಅಧಿಕಾರಿಗಳು, ಹಳ್ಳಿಗರೇ ನಿರ್ಮಿಸಿದರು ಕಾಲು ಸಂಕ : ಓದಲೇ ಬೇಕು ಈ ಸ್ಟೋರಿ
![](https://risingkannada.com/wp-content/uploads/2019/08/WhatsApp-Image-2019-08-17-at-8.17.54-PM.jpeg)
ಶಿವಮೊಗ್ಗ: ಸಾಗರ ತಾಲೂಕಿನ ತುಮರಿ ಗ್ರಾಮಪಂಚಾಯಿತಿ ಶರಾವತಿ ನದಿ ತೀರದ ದ್ವೀಪ ಪ್ರದೇಶ, ಲಿಂಗನಮಕ್ಕಿ ಜಲಾಶಯದಿಂದ ಮುಳುಗಡೆಯಾಗಿ ಆಸ್ತಿ – ಮನೆ ಕಳೆದುಕೊಂಡವರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಗ್ರಾಮ ಪಂಚಾಯಿತಿ ಸಾಗರ ನಗರದ ಸಂಪರ್ಕಕ್ಕೆ ಬರಲು ಸಿಗಂದೂರು ಲಾಂಚ್ ಬಳಸಬೇಕು ಅಥವಾ ಅರವತ್ತು ಕಿಲೋಮೀಟರ್ ಸುತ್ತಿಕೊಂಡು ಬರಬೇಕು. ಏನೇ ಸಮಸ್ಯೆಯಾದರೂ ಆಡಳಿತ ವರ್ಗಕ್ಕೆ ಮುಟ್ಟುವುದು ತಡವಾಗಿ.
ಕಳೆದ ವಾರ ಸುರಿದ ಆಶ್ಲೇಷ ಮಳೆಗೆ ಸಾಗರವೂ ಕೂಡ ಸಾಕಷ್ಟು ಹಾನಿಯಾಗಿತ್ತು, ಇಲ್ಲಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಟ್ಟು ಸಂಪರ್ಕ ಸೇತುವಾದ ದಂಡೆ ಕುಸಿದು ಆಚೀಚೆ ಸಂಚಾರ ನಿಷೇಧವಾಗಿತ್ತು. ಹತ್ತಾರು ಹಳ್ಳಿಗಳೂ ಸಂಪರ್ಕ ಕಳೆದುಕೊಂಡವು.
ಗ್ರಾಮ ಪಂಚಾಯಿತಿ ಉತ್ಸಾಹಿ ಅಧ್ಯಕ್ಷ ಜಿಟಿ ಸತ್ಯನಾರಾಯಣ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಲುಪಿದರು, ಎಷ್ಟು ಗೋಗರೆದರೂ ಯಾರೂ ಸುಳಿಯಲಿಲ್ಲ. ಆಗ ಜನರೇ ಸೇರಿಕೊಂಡು ಕಾಲುಸಂಕ ನಿರ್ಮಾಣಕ್ಕೆ ಮುಂದಾದರು.
![](https://risingkannada.com/wp-content/uploads/2019/08/WhatsApp-Image-2019-08-17-at-8.19.49-PM-1024x576.jpeg)
ಮುಂಜಾನೆಯೇ ಹದಿನಾಲ್ಕು ಮನೆಯ ಸದಸ್ಯರೆಲ್ಲಾ ( ಮಹಿಳೆಯರು ಹಾಗೂ ಮಕ್ಕಳು) ಸೇರಿ ದಿಮ್ಮಿಗಳನ್ನ ಜೋಡಿಸಿ, ಶುದ್ಧ ಹಳ್ಳಿಯ ಶೈಲಿಯಲ್ಲಿ ಮೂರು ಕಾಲು ಸಂಕಗಳನ್ನ ಸಂಜೆಯೊಳಗೇ ಮಾಡಿ ಮುಗಿಸಿದರು. ಅಡಕೆ ದಬ್ಬೆ ಜೋಡಿಸಿ ಸುಮಾರು 75 ಅಡಿ ಉದ್ದದ ಸೇತುವೆ ನಿರ್ಮಾಣಮಾಡಿದ್ದಾರೆ.
ಈ ಕುರಿತು ಮಾತನಾಡಿದ ತುಮರಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿಟಿ ಸತ್ಯನಾರಾಯಣ, ಇಂಥಹ ಅವಘಡಗಳು ಸಂಭವಿಸಿದಾಗ ನಿಯಮಾವಳಿ, ಅನುದಾನ ಎಂದು ನೋಡಲು ಸಾಧ್ಯವಿಲ್ಲ, ಸುಮಾರು ಹದಿನೈದು ಸಾವಿರ ರುಪಾಯಿ ಕೆಲಸಕ್ಕೆ ಕನಿಷ್ಠ ತಿಂಗಳಾದರೂ ಬೇಕು. ನಾವೀಗ ಸ್ವತಂತ್ರವಾಗಿ ದೇಸಿ ಶೈಲಿಯ ಸಂಕ ನಿರ್ಮಾಣ ಮಾಡಿಕೊಂಡಿದ್ದೇವೆ, ಇನ್ನಾದರೂ ಸರ್ಕಾರ ಹೊಸದೊಂದು ಸೇತುವೆ ನಿರ್ಮಾಣ ಮಾಡುತ್ತಾ, ಈ ಭಾಗದ ಜನರಿಗೆ ಸ್ಪಂದಿಸುತ್ತಾರಾ ನೋಡುತ್ತೇನೆ ಎಂದು ಹೇಳುತ್ತಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?