Featured
ಆರ್ಥಿಕತೆ ದೇವರ ಆಟ ಹೇಳಿಕೆ :ನಿರ್ಮಲಾ ಸೀತಾರಾಮನ್ಗೆ ಮಾಜಿ ಸಚಿವ ಪಿ.ಚಿದಂಬರಂ ತರಾಟೆ
![](https://risingkannada.com/wp-content/uploads/2020/08/nirmala-and-chidambarma.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಕೊರೊನಾ ಲಾಕ್ಡೌನ್ ಮತ್ತು ಆರ್ಥಿಕತೆ ಕುಸಿಯುತ್ತಿರವುದು ದೇವರ ಆಟ ಎಂದು ಹೇಳಿಕೆ ಕೊಟ್ಟಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತರಾಟೆಗೆ ತೆಗದುಕೊಂಡಿದ್ದಾರೆ.
ದೇವರ ಸಂದೇಶಕರರಾಗಿ ನಿರ್ಮಲಾ ಸೀತಾರಾಮನ್ ಅವರು ಕೊರೊನಾಕ್ಕಿಂತ ಮೊದಲು ಆರ್ಥಿಕತೆಯ ಅಸಮರ್ಪಕ ನಿರ್ವಹಣೆ ಹೇಗಾಯಿತು ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನ ಟೀಕಿಸಿದ್ದಾರೆ.
ಕೊರೊನಾ ಸಾಂಕ್ರಮಿಕ ದೇವರ ಆಟವಾದರೆ ಸತತ ಮೂರು ವರ್ಷಗಳಿಂದ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯನ್ನ ಏನೆಂದು ವಿವರಿಸಬಹುದು.
ಸಾಂಕ್ರಾಮಿಕ ಹರಡುವುದಕ್ಕೆ ಮೊದಲು ದೇಶಕ್ಕೆ ಏನಾಗಿತ್ತು. ದೇವರ ಸಂದೇಶವಾಹಕರಾಗಿ ಹಣಕಾಸು ಸಚಿವೆ ಇದಕ್ಕೆ ಉತ್ತರಿಸಬಲ್ಲರೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಜಿಎಸ್ಟಿ ಬಾಕಿ ಉಳಿಕೆಯಿಂದ ಆಗಿರುವ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರದ ಬಳಿ ಸಾಲ ಕೇಳಲು ಕೇಂದ್ರದ ನಿರ್ಧಾರವನ್ನ ಚಿದಂಬರಂ ಟೀಕಿಸಿದ್ದಾರೆ. ಹಣಕಾಸು ಜವಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಲು ನೋಡುತ್ತಿದೆ. ಇದು ಕಾನೂನಿನ ಉಲ್ಲಂಘನೆ ಮತ್ತು ಜನರಿಗೆ ಮಾಡಿದ ದ್ರೋಹ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?