Connect with us

Featured

2ನೇ ಸ್ಥಾನಕ್ಕೆ ನ್ಯೂಸ್ 18 ಕನ್ನಡ ಲಗ್ಗೆ : ಪಬ್ಲಿಕ್ ಟಿವಿಗೆ ಶಾಕ್..! TV9ಗೂ ನಡುಕ ಶುರುನಾ..? ಹೊಸ ಇತಿಹಾಸಕ್ಕೆ ನಾಂದಿ

ಬೆಂಗಳೂರು : ಇದು ಕನ್ನಡ ಮಾಧ್ಯಮ ಲೋಕದಲ್ಲೇ ಹೊಸ ಸಂಚಲನ ಸೃಷ್ಟಿಸಿರೋ ಸುದ್ದಿ. ಕಳೆದ ವಾರವಷ್ಟೇ ರೈಸಿಂಗ್ ಕನ್ನಡ ವೆಬ್​​ಸೈಟ್​​ನಲ್ಲೇ ಈ ಕುರಿತು ವರದಿ ಮಾಡಲಾಗಿತ್ತು. ಹೌದು, ನ್ಯೂಸ್​ 18 ಕನ್ನಡ, ಸುದ್ದಿ ವಾಹಿನಿ ಈಗ ಕರ್ನಾಟಕದಲ್ಲಿ ಎರಡನೇ ಸ್ಥಾನವನ್ನ ಪಡೆದಿದೆ. ಈ ಮೂಲಕ ಕಳೆದ 4 ವರ್ಷಗಳಿಂದ ಎರಡನೇ ಸ್ಥಾನವನ್ನ ಕಾಯ್ದುಕೊಂಡಿದ್ದ ಪಬ್ಲಿಕ್​ ಟಿವಿಗೆ ಶಾಕ್​ ನೀಡಿದೆ.

ಕಳೆದ ಎರಡು ವಾರಗಳ ಹಿಂದಷ್ಟೇ ಸುವರ್ಣ ನ್ಯೂಸ್​ ಅನ್ನ ನಾಲ್ಕನೇ ಸ್ಥಾನಕ್ಕೆ ತಳ್ಳಿದ ನ್ಯೂಸ್​ 18 ಕನ್ನಡ, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಆದ್ರೀವಾರ ಪಬ್ಲಿಕ್ ಟಿವಿಯನ್ನೇ ಮೂರನೇ ಸ್ಥಾನಕ್ಕೆ ತಳ್ಳಿದ್ದು, ನ್ಯೂಸ್​ 18 ಕನ್ನಡ ಎರಡನೇ ಸ್ಥಾನಕ್ಕೆ ಬಂದಿದೆ. ಪಬ್ಲಿಕ್​ ಟಿವಿ ಹಾಗೂ ನ್ಯೂಸ್​ 18 ಕನ್ನಡದ ರೇಟಿಂಗ್​ ವ್ಯತ್ಯಾಸ ಕಡಿಮೆ ಇದ್ರೂ ಕೂಡ, ಪಬ್ಲಿಕ್​​​ ಟಿವಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.

ನ್ಯೂಸ್​ 18 ಕನ್ನಡದ ವೇಗ ನೋಡ್ತಿದ್ರೆ, ಮುಂದಿನ ಟಾರ್ಗೆಟ್​ ಟಿವಿ9 ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ, ಕಳೆದ 12 ವರ್ಷಗಳಿಂದ ಟಿವಿ9 ಮೊದಲ ಸ್ಥಾನದಲ್ಲೇ ಇದೆ. ಹೀಗಾಗಿ, ಟಿವಿ9 ಅನ್ನು ಮೀರಿ ನಂಬರ್​ ಒನ್​ ಸ್ಥಾನ ಪಡೆಯೋದು ಅಷ್ಟು ಸುಲಭವಲ್ಲ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಆದ್ರೂ, ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಕಳೆದ ನಾಲ್ಕು ವಾರಗಳ ರೇಟಿಂಗ್​ ಸಾಕ್ಷಿ ಎನ್ನಲಾಗ್ತಿದೆ.

ನಾಲ್ಕು ವರ್ಷಗಳಿಂದ ಪಬ್ಲಿಕ್​ ಟಿವಿಯನ್ನ ಯಾರು ಕೂಡ ಮುಟ್ಟಲು ಆಗಿರಲಿಲ್ಲ. ಆದ್ರೀಗ, ಪಬ್ಲಿಕ್​ ಟಿವಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ನ್ಯೂಸ್​ 18 ಕನ್ನಡದಲ್ಲಿ ಸಂಭ್ರಮವೋ ಸಂಭ್ರಮ

ಕಳೆದ ನಾಲ್ಕು ವಾರಗಳಿಂದ ನ್ಯೂಸ್​ 18 ಕನ್ನಡ ಅತ್ಯುತ್ತಮವಾಗಿ ರೇಟಿಂಗ್ ಗಳಿಸುತ್ತಿದ್ದು, ಕಚೇರಿಯಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿದೆ. ಪ್ರತಿವಾರ ಕೇಕ್​ ಕಟ್​ ಮಾಡಿ, ಈ ಸಂಭ್ರಮವನ್ನ ಆಚರಣೆ ಮಾಡಲಾಗ್ತಿದೆ.

Advertisement

ರೇಟಿಂಗ್​​ಗೆ ಲ್ಯಾಂಡಿಂಗ್ ಪೇಜ್​ ಆರೋಪ..!

ಈ ಮಧ್ಯೆ, ನ್ಯೂಸ್​ 18 ಕನ್ನಡ ವೇಗವಾಗಿ ರೇಟಿಂಗ್ ಪಡೆದಿರೋದಕ್ಕೆ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಲ್ಯಾಂಡಿಂಗ್​ ಪೇಜ್​​ಗೆ ಅನುಮತಿ ನೀಡಲಾಗಿದೆ. ಬಹುತೇಕ ಕರ್ನಾಟಕ ಕೇಬಲ್​ಗಳಲ್ಲಿ ನ್ಯೂಸ್​ 18 ಕನ್ನಡ ಲ್ಯಾಂಡಿಂಗ್ ಪೇಜ್​ ಆಗಿದೆ. ಹೀಗಾಗಿ ರೇಟಿಂಗ್ ಬರ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.

ಏನಿದು ಲ್ಯಾಂಡಿಂಗ್ ಪೇಜ್​..?

ಲ್ಯಾಂಡಿಂಗ್ ಪೇಜ್​ ಅಂದ್ರೆ, ಟಿವಿ ಆನ್​ ಮಾಡಿದ ತಕ್ಷಣ ಬರುವಂತಹ ಚಾನೆಲ್​. ನೀವೀಗ ಮನೆಯಲ್ಲಿ ಟಿವಿ ಆನ್​ ಮಾಡಿದ ತಕ್ಷಣ ನಿಮ್ಮ ಮನೆಯಲ್ಲಿ ಯಾವುದಾದರೊಂದು ಚಾನೆಲ್ ಬರುತ್ತೆ. ಹಾಗೆ ಬಂದಾಗ, ಆ ಚಾನೆಲ್​ಅನ್ನ ನೀವು ನೋಡಬಹುದು, ಅಥವಾ ಬದಲಾವಣೆ ಮಾಡಬಹುದು. ಆದ್ರೆ, ಟಿವಿ ಹಾಕಿದ ತಕ್ಷಣ ಆ ಚಾನೆಲ್ ಬರೋದ್ರಿಂದ, ಅದನ್ನ ಕನಿಷ್ಠ 2 ನಿಮಿಷ ನೋಡಿದರೂ, ಚಾನೆಲ್ ರೇಟಿಂಗ್​ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ತಜ್ಞರ ವಾದ.

ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ..!

ಇದೇ ಲ್ಯಾಂಡಿಂಗ್ ಪೇಜ್​ ವಿಚಾರವಾಗಿ ಹಲವು ಸಂಸ್ಥೆಗಳು ಕೋರ್ಟ್​ ಮೆಟ್ಟಿಲೇರಿವೆ. ಈಗಾಗಲೇ ವಿಚಾರಣೆ ನಡೆಸಿರೋ ಸುಪ್ರೀಂಕೋರ್ಟ್​​, ಟ್ರಾಯ್​​ಗೆ ನೊಟೀಸ್​ ನೀಡಿದೆ. ಮುಂದಿನ ತಿಂಗಳು ಸೆಪ್ಟೆಂಬರ್​ 12ರಂದು ಈ ಕುರಿತು ಸುಪ್ರೀಂನಲ್ಲಿ ವಿಚಾರಣೆ ನಡೆಯಲಿದೆ.

Advertisement

ಅದೇನೇ ಆಗ್ಲಿ, ಕನ್ನಡ ಸುದ್ದಿ ಮಾಧ್ಯಮ ಇತಿಹಾಸದಲ್ಲಿ ನ್ಯೂಸ್​ 18 ಕನ್ನಡ ಹೊಸ ಮೈಲಿಗಲ್ಲು ಸೃಷ್ಟಿಸಿರೋದು ಸುಳ್ಳಲ್ಲ..

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ