Featured
ರೋರಿಂಗ್ ಸ್ಟಾರ್ V/S ಗೋಲ್ಡನ್ ಸ್ಟಾರ್ ಪೈಪೋಟಿ ಯಾಕೆ..? : ಏನಿದರ ಗುಟ್ಟು..?

ಬೆಂಗಳೂರು : ಬಿಗ್ ಸ್ಟಾರ್ ಸಿನಿಮಾಗಳು ಒಂದೇ ವಾರದಲ್ಲಿ ರಿಲೀಸ್ ಆದ್ರೆ, ಇಬ್ಬರಿಗೂ ನಷ್ಟ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಾಗಿಯೇ ಬಹಳಷ್ಟು ಸಂದರ್ಭಗಳಲ್ಲಿ ಇಬ್ಬರು ಸ್ಟಾರ್ ಸಿನಿಮಾಗಳು ಒಂದೇ ವಾರ ರಿಲೀಸ್ ಆಗೋದಿಲ್ಲ. ಆದ್ರೆ, ಸೆಪ್ಟೆಂಬರ್ 27ರಂದು ಇಬ್ಬರು ಸ್ಟಾರ್ ಸಿನಿಮಾಗಳು ರಿಲೀಸ್ ಆಗ್ತಿದ್ದು, ಕ್ಲಾಷ್ ಆಗುವ ಸಾಧ್ಯತೆ ಇದೆ.
ಒಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಬಹು ನಿರೀಕ್ಷಿತ ಭರಾಟೆ
ಸಿನಿಮಾ. ಮತ್ತೊಂದು ಗೋಲ್ಡನ್ ಸ್ಟಾರ್ ಅಭಿನಯಿಸಿರೋ ಗೀತಾ ಸಿನಿಮಾ. ಎರಡು ಸಿನಿಮಾಗಳು ಈಗಾಗ್ಲೇ
ಟೀಸರ್ ಹಾಗೂ ಮೇಕಿಂಗ್ನಿಂದಲೇ ಸಾಕಷ್ಟು ಗಮನ ಸೆಳೆದಿದ್ದು, ನಿರೀಕ್ಷೆ ಹುಟ್ಟಿಸಿವೆ. ಸೆಪ್ಟೆಂಬರ್
27ಕ್ಕೆ ಸಿನಿಮಾ ಬಿಡುಗಡೆ ಎಂದು ಭರಾಟೆ ಚಿತ್ರತಂಡ ಮೊದಲೇ ಘೋಷಿಸಿತ್ತು. ಈಗ ಗೀತಾ ಸಿನಿಮಾ ತಂಡ ಕೂಡ
ಅದೇ ಡೇಟ್ ಅನೌನ್ಸ್ ಮಾಡಿದೆ.
ಗೀತಾ ಸಿನಿಮಾವನ್ನ ವಿಜಯ್ ನಾಗೇಂದ್ರ ನಿರ್ದೇಶನ ಮಾಡ್ತಿದ್ರೆ, ಭರಾಟೆ ಸಿನಿಮಾವನ್ನ ಚೇತನ್ ಕುಮಾರ್ ಡೈರೆಕ್ಟ್ ಮಾಡ್ತಿದ್ದಾರೆ. ಗೀತಾ ಸಿನಿಮಾದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಹೇಳಿರೋ ಡೈಲಾಗ್ಗಳು ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿವೆ. ಅದರಂತೆ ಶ್ರೀಮುರಳಿಯ ಭರಾಟೆ ಹಾಡುಗಳು, ಮೇಕಿಂಗ್, ಟೀಸರ್ ಕೂಡ ಸಾಕಷ್ಟು ಕುತೂಹಲ ಹುಟ್ಟಿಸಿವೆ.ಹೀಗಾಗಿ, ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆದ್ರೆ, ಕ್ಲಾಷ್ ಅಂತೂ ಗ್ಯಾರೆಂಟಿ. ನೋಡೋಣ, ಮುಂದೇನು ನಿರ್ಧಾರಕ್ಕೆ ಬರ್ತಾರೆ ಅನ್ನೋದನ್ನ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?