Featured
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ವಿದಾಯ: ಎಲ್ಲಾ ಮಾದಿರಿಯ ಕ್ರಿಕೆಟ್ಗೆ ಮಾಹಿ ಗುಡ್ ಬೈ
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ನಾಯಕ, ಎರಡು ವಿಶ್ಬಾವಕಪ್ ಗೆದ್ದು ಕೊಟ್ಟ ಚಾಂಪಿಯನ್ ಆಟಗಾರ ಎಮ್.ಎಸ್.ಧೋನಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 16 ವರ್ಷದ ಸುದೀರ್ಘ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಭಾರತದ ಕ್ರಿಕೆಟ್ ದಿಕ್ಕನ್ನೆ ಬದಲಿಸಿದ ಎಮ್.ಎಸ್.ಧೋನಿ ಎರಡು ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ಟ ವಿಶ್ವ ಕ್ರಿಕೆಟ್ನ ಶ್ರೇಷ್ಠ ಆಟಗಾರರಾಗಿದ್ದಾರೆ.
ಶನಿವಾರ ಇನ್ಸ್ಸ್ಟಾಗ್ರಾಂನಲ್ಲಿ ಧನ್ಯವಾದ, ನಿಮ್ಮ ಪ್ರೀತಿಗೆ ಧನ್ಯವಾದ ಮತ್ತು ಬೆಂಬಲಕ್ಕಾಗಿ. 7.29 ಗಂಟೆಯಿಂದ ನಾನು ನಿವೃತ್ತಿ ಎಂದು ಪರಿಗಣಿಸಿ ಎಂದು ಬರೆದಿದ್ದಾರೆ.
2014, ಡಿ,30ರಂದು ಧೋನಿ ಟೆಸ್ಟ್ಗೆ ನಿವೃತ್ತಿ ಘೋಷಿಸಿದ್ದರು. 2017 ಜನವರಿಯಲ್ಲಿ ಏಕದಿನ ಆವೃತ್ತಿಯ ನಾಯಕತ್ವದ ಪಟ್ಟದಿಂದ ಕೆಳಗಿಳಿದರು. 37 ವರ್ಷದ ಧೋನಿ 199 ಏಕದಿನ ಮತ್ತು 72 ಟಿ20 ಪಂದ್ಯಗಳನ್ನ ಆಡಿದ್ದಾರೆ. 2007ರಲ್ಲಿ ಧೋನಿ ನಾಯಕರಾಗಿ ಭಾರತ ತಂಡವನ್ನ ಮುನ್ನಡೆಸಿದರು. ಟೆಸ್ಟ್ನಲ್ಲಿ ಭಾರತ ತಂಡಕ್ಕೆ ನಂ.1 ಪಟ್ಟ ಕೊಡಿಸಿದರು. ಮೂರು ಫಾರ್ಮೆಟ್ನಲ್ಲಿ 50ಕ್ಕೂ ಹೆಚ್ಚು ಪಂದ್ಯಗಳನ್ನ ಮುನ್ನಡೆಸಿದ ಏಕೈಕ ನಾಯಕರಾಗಿದ್ದಾರೆ.
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಧೋನಿ ಭಾರತ ತಂಡವನ್ನ ಇಡೀ ವಿಶ್ವ ಕ್ರಿಕೆಟ್ ತಿರುಗಿ ನೋಡುವಂತೆ ಮಾಡಿದರು. 2007ರಲ್ಲಿ ಧೋನಿ ನೇತೃಥ್ವದ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ಗೆ ಮುತ್ತಿಕ್ಕಿ ಹೊಸ ಇತಿಹಾಸ ಬರೆದಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?