Connect with us

Featured

ಸೀತಾಮಾತೆಗೊಂದು ಮಂದಿರ ಬ್ರಿಟೀಷಪ್ಪ ಕಟ್ಟಿಸಿಕೊಟ್ಟ..!

ಬರಹ: ಡಾ.ಬಸವರಾಜ್ ಗುರೂಜಿ, ಖ್ಯಾತ ಜ್ಯೋತಿಷ್ಯರು, ವಾಸ್ತುತಜ್ಞರು ಮತ್ತು ಆಧ್ಯಾತ್ಮಿಕ ಚಿಂತಕರು

ತಮಿಳುನಾಡಿನ ಚಂಗಲ್‌ಪೇಟೆಗೆ ಹದಿನೈದು ಮೈಲಿಗಳ ದೂರದಲ್ಲಿ ಮಧುರಾಂತಕ ಎನ್ನುವ ಊರಿನಲ್ಲಿ ಆ ದೇವಾಲಯವಿದೆ.

ಅಲ್ಲಿ ದೊಡ್ದದೊಂದು ಕೆರೆಯಿದೆ. ಹನ್ನೆರಡು ಚದರ ಮೈಲಿ ಅದರ ವಿಸ್ತಾರ. ಸಾವಿರಾರು ಎಕರೆ ಗದ್ದೆಗಳಿಗೆ ಅದು ಆಧಾರ. ಆದರೆ ಮಾಯದಂತ ಮಳೆ ಬಂತೆಂದರೆ ಆ ಕೆರೆ ನಾ ನಿಲ್ಲುವಳಲ್ಲ ಎನ್ನುತ್ತಿತ್ತು. ಕೆರೆ ತುಂಬಿತು ಎಂದರೆ ಊರೆಲ್ಲ ಮುಳುಗುತ್ತಿತ್ತು. ಊರಿಗೂ ಹಾನಿ, ದೇವರಗುಡಿಗೂ ಹಾನಿ. ಊರನ್ನು ಮುಟ್ಟುವುದೂ ಅಸಾಧ್ಯವಾಗುತ್ತಿತ್ತು.

ಅದು ಬ್ರಿಟಿಷರು ಭಾರತವನ್ನಾಳುತ್ತಿದ್ಡ ಕಾಲ. ಚಂಗಲ್‌ಪೇಟೆಯಲ್ಲಿ ಕರ್ನಲ್ ಪ್ಲೇಸ್ ಎಂಬ ಬ್ರಿಟಿಷಿನವನು ಜಿಲ್ಲಾಧಿಕಾರಿ. ಜನರೆಲ್ಲ ಆತನ ಮೊರೆಹೊಕ್ಕರು. ಸ್ಥಳಪರೀಕ್ಷೆ ಮಾಡಿದ ಅವರು ಅಲ್ಲೊಂದು ಸೇತುವೆ ಕಟ್ಟುವುದು ಸಮಸ್ಯೆಗೆ ಸಾರ್ವಕಾಲಿಕ ಪರಿಹಾರವೆಂದು ತೀರ್ಮಾನಿಸಿದರು. ಕೆಲಸ ಆರಂಭವಾಗಿ ಸೇತುವೆ ನಿರ್ಮಾಣವಾಗುತ್ತಿರುವಂತೆ ಮಾಯದಂತ ಮಳೆ ಬಂತು. ಸೇತುವೆ ನಾ ನಿಲ್ಲುವಳಲ್ಲ ಎನ್ನುತ್ತ ಕುಸಿದುಬಿತ್ತು. ಅಲ್ಲಿಯೇ ಮೊಕ್ಕಾಂ ಹೂಡಿದ್ದ ಜಿಲ್ಲಾಧಿಕಾರಿ ಕರ್ನಲ್ ಪ್ಲೇಸ್ ಮತ್ತೆ ಕಟ್ಟಲು ಆದೇಶವನ್ನಿತ್ತ. ಕೆಲಸ ಮುಗಿಯುವ ಮೊದಲೇ ಮತ್ತೆ ಮಳೆ, ಮತ್ತೆ ಸೇತುವೆಯ ಕುಸಿತ. ತಿಂಗಳಾನುಗಟ್ಟಲೆಯ ಪ್ರಯತ್ನ ವ್ಯರ್ಥ. ಆಗ ಅಲ್ಲಿದ್ದ ಒಬ್ಬ ಹಳೆಯ ತಲೆಮಾರಿನ ಮುದುಕಪ್ಪ “ದೊರೆಯೇ! ನಮ್ಮೂರ ಸೀತಮ್ಮನವರಿಗೆ ಸರಿಯಾದ ಗುಡಿಯಿಲ್ಲ. ಗುಡಿ ಕಟ್ಟಿಸುತ್ತೇನೆಂದು ಹರಕೆ ಹೊತ್ತುಕೊಂಡರೆ ಕೆರೆ ಏರಿ ಉಳಿಯಬಹುದೇನೋ” ಎಂದ. ಕೆಲಸ ಮುಗಿಸಲು ಎಲ್ಲದಕ್ಕೂ ಸಿದ್ಧವಿದ್ದ ಕರ್ನಲ್ ಗುಡಿ ಕಟ್ಟಿಸಿಕೊಡುತ್ತೇನೆಂದು ಹರಕೆ ಹೊತ್ತರು. ಕೆಲಸ ಪುನರಾರಂಭವಾಯಿತು. ಅಂದು ರಾತ್ರಿ ಮತ್ತೆ ಧಾರಾಕಾರ ಮಳೆ ಸುರಿಯಿತು. ಆತಂಕಗೊಂಡಿದ್ದ ಕರ್ನಲ್ ಪ್ಲೇಸ್ ಮಧ್ಯರಾತ್ರಿಯಲ್ಲಿ ಟಾರ್ಚ್ ಹಿಡಿದು ಮಳೆಯಲ್ಲಿ ನೆನೆಯುತ್ತಲೇ ಕೆಲಸ ನಡೆಯುತ್ತಿದ್ದ ಜಾಗಕ್ಕೆ ಬಂದು ನೋಡಿದ. ಆ ಮಳೆಯಲ್ಲೂ ಯಾರೋ ಒಬ್ಬಾತ ಬಿರುಕು ಬಿಡುತ್ತಿದ್ದ ಸೇತುವೆಗೆ ಮಣ್ಣು ತಂದು ಸೇರಿಸುತ್ತಿರುವಂತೆ, ಆತನಿಗೆ ಒಬ್ಬ ಹೆಂಗಸು ಮಕ್ಕರಿಯಲ್ಲಿ ಮಣ್ಣು ತಂದುಕೊಡುತ್ತಿರುವಂತೆ, ಅವರಿಗೆ ಅನೇಕ ಜನ ಸಹಾಯ ಮಾಡುತ್ತಿರುವಂತೆ ಕರ್ನಲ್‌ಗೆ ಭಾಸವಾಯಿತು. ಈ ಮಳೆಯಲ್ಲೂ ದುಡಿಯುತ್ತಿರುವ ಕೂಲಿಯವರಿಗೆ ಬೆಳಗ್ಗೆ ಭಕ್ಷೀಸು ಕೊಡಬೇಕೆಂದುಕೊಳ್ಳುತ್ತ ಆತ ಹೊರಟುಹೋದರು.

ಬೆಳಗ್ಗೆ ಬಂದು ನೋಡಿದಾಗ ಕಟ್ಟಡ ಭದ್ರವಾಗಿ ನಿಂತಿತು. ಆತ ರಾತ್ರಿ ತಾನು ಕಂಡದ್ದನ್ನು ವಿವರಿಸಿದಾಗ ಹಳೆಯ ಮುದುಕ “ನಿಮಗೆ ಕಂಡ ಆ ಹೆಣ್ಣು-ಗಂಡು ಮತ್ತಾರೂ ಅಲ್ಲ. ಅವರು ಸಾಕ್ಷಾತ್ ಸೀತಾರಾಮರು!” ಎಂದು ಘೋಷಿಸಿದ. ಅಂತೂ ಇಂತೂ ಕಟ್ಟಡದ ಕೆಲಸ ಮುಗಿಯಿತು. ಊರಿನ ಕಂಟಕ ನಿವಾರಣೆಯಾಯಿತು. ಕರ್ನಲ್ ಪ್ಲೇಸ್ ಸೀತಾಮಾತೆಗೆ ಮಂದಿರ ಕಟ್ಟಿಸಿಕೊಟ್ಟು ಹರಕೆ ತೀರಿಸಿದರು.

Advertisement

ಈಗಲೂ ಮಧುರಾಂತಕ ಊರಿನ ದೊಡ್ಡಕೆರೆಯ ಪಕ್ಕದಲ್ಲೇ ಆ ಮಂದಿರವಿದೆ. ಆ ರಾಮದೇವರಿಗೆ “ಏರಿಕಾಪಾತ್ತರಾಮನ್” ಎಂಬ ಹೆಸರಿದೆ. ದೇವಾಲಯದಲ್ಲಿರುವ ಶಿಲಾಶಾಸನ ಇದನ್ನು ವಿವರಿಸುತ್ತದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ