Featured
ಕೆಂಪುಕೋಟೆಯಲ್ಲಿ ಸರಳ ಸ್ವಾತಂತ್ರ್ಯೋತ್ಸವದ ಕಂಪು- ಆತ್ಮನಿರ್ಭರ ಭಾರತಕ್ಕೆ ಪ್ರಧಾನಿ ಮೋದಿ ಒತ್ತು- ನ್ಯಾಷನಲ್ ಹೆಲ್ತ್ ಮಿಷನ್, ಡಿಜಿಟಲ್ ಇಂಡಿಯಾ ಕಡೆ ಸರ್ಕಾರದ ನಡೆ
![](https://risingkannada.com/wp-content/uploads/2020/08/MODI-SPEECH.jpg)
ರೈಸಿಂಗ್ ಕನ್ನಡ್:
ನವದೆಹಲಿ:
ಕೊರೊನಾ ಮಹಾಮಾರಿಯ ನಡುವೆಯೂ ರಾಷ್ಟ್ರವು ಇಂದು 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಸರಳವಾಗಿ ನಡೆದಿದೆ. ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ಮಾಡಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೊರೊನಾ ವಿರುದ್ಧವೂ ಭಾರತ ತನ್ನ ಸಾಮೂಹಿಕ ಶಕ್ತಿಯನ್ನು ತೋರಿದೆ. ಭಾರತದ ಪ್ರತಿಯೊಬ್ಬರಿಗೂ ಆತ್ಮನಿರ್ಭರ ಮಂತ್ರವಾಗಿದೆ. ಕೊರೊನಾ ಸಂದರ್ಭದಲ್ಲೂ ಆತ್ಮನಿರ್ಭರ ಸಂಕಲ್ಪ ಕೈಗೊಳ್ಳಲಾಗಿದ್ದು ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಒಂದು ಬಾರಿ ನಿರ್ಧಾರ ಕೈಗೊಂಡರೆ, ಸಾಧಿಸಿಯೇ ತೀರುತ್ತದೆ. ಈ ದಿಶೆಯಲ್ಲಿ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯುವಶಕ್ತಿಯನ್ನು ಹೊಂದಿರುವ ಭಾರತದ ಮೊದಲ ಮಂತ್ರ ಆತ್ಮನಿರ್ಭರ ಆಗಿದೆ ಎಂದು ಹೇಳಿದರು.
![Puranik Full](https://risingkannada.com/wp-content/uploads/2020/07/full-plate.jpg)
ಕೊರೋನಾ ಸಂಕ್ರಾಮಿಕ ರೋಗದ ವಿರುದ್ಧ ಭಾರತಕ್ಕೆ ಜಯ ಸಿಗಲಿದೆ. ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಲಕ್ಷಾಂತರ ಜನರ ತ್ಯಾಗ ಬಲಿದಾನ ಇದರ ಹಿಂದೆ ಇದೆ. ಸ್ವಾತಂತ್ರ್ಯ ಸೇನಾನಿಗಳು, ಹುತಾತ್ಮರಿಗೆ ನನ್ನ ನಮನಗಳು ಎಂದು ಹೇಳಿದ್ದಾರೆ.
ಪೂಜ್ಯ ಬಾಪೂಜಿ ನೇತೃತ್ವದಲ್ಲಿ ಹೋರಾಟ ಯಶಸ್ವಿಯಾಗಿದೆ. ಸಾಮ, ದಂಡ, ಭೇದದ ಮೂಲಕ ಸ್ವಾತಂತ್ರರ್ಯ ಗಳಿಸಲಾಗಿದೆ. ಇಡೀ ದೇಶ ಒಗ್ಗೂಡುವುದಿಲ್ಲ ಎನ್ನುವವರಿಗೆ ಹಿನ್ನೆಡೆಯಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು.
ಆತ್ಮನಿರ್ಭರ ಭಾರತ ಸಮರ್ಥ ಭಾರತ ಮಂತ್ರ ಜಪಿಸಿದ ಪ್ರಧಾನಿ ಮೋದಿ, ಡಿಜಿಟಲ್ ಭಾರತದ ಜನರಲ್ಲಿ ಅದ್ಭುತವನ್ನು ಸೃಷ್ಟಿಸಿದೆ. ಭೀಮ್, ಯುಪಿಐ ಆ್ಯಪ್ಗಳು ಮೂರು ಲಕ್ಷ ಕೋಟಿ ವಹಿವಾಟು ನಡೆಸಿವೆ. ಡಿಜಿಟಲ್ ಇಂಡಿಯಾ ಜತೆ ಗ್ರಾಮ ಪಂಚಾಯಿತಿಗಳ ಜೋಡಣೆ ಅನಿವಾರ್ಯ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ಸಿಗಲಿದೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ದೊರಕಿದೆ ಎಂದರು.
ಇದೇ ವೇಳೆ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಸಹ ಎರಡು ಯುದ್ಧಗಳಲ್ಲಿ ಹಿನ್ನೆಡೆ ಕಂಡಿದ್ದಾರೆ. ವಿಸ್ತಾರವಾದಕ್ಕೆ ಸವಾಲಾಗಿದ್ದೇ ಭಾರತ ದೇಶ. ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಎಂದಿಗೂ ಉನ್ನತಿ ಕಾಣಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಭಾರತ ಆತ್ಮನಿರ್ಭರ ಆಗಬೇಕಿದೆ ಎಂದು ಹೇಳಿದರು.
ಆತಂಕವಾದವಿರಲಿ, ವಿಸ್ತಾರವಾದವಿರಲಿ ಭಾರತವು ಒಗ್ಗಟ್ಟಿನಿಂದ ಹೋರಾಡುತ್ತಿದೆ. ದೇಶದ ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಯೋಧರು ಸರಿಯಾದ ಉತ್ತರ ನೀಡಿದ್ದಾರೆ. ಸ್ವಾವಲಂಬಿ ಭಾರತಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 100 ಕ್ಕೂ ಹೆಚ್ಚು ರಕ್ಷಣಾ ವಸ್ತುಗಳ ಆಮದನ್ನು ನಿಲ್ಲಿಸಿದ್ದೇವೆ. ಗಡಿಯಲ್ಲಿ 1 ಲಕ್ಷ ಎನ್‌ಸಿಸಿ ಕೆಡೆಟ್‌ಗಳನ್ನು ನಿಯೋಜನೆ ಮಾಡಲು ಉದ್ದೇಶಿಸಲಾಗಿದ್ದು, ಅದರಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಮೋದಿ ಭಾಷಣದಲ್ಲಿ ಹೇಳಿದರು
ಜಮ್ಮು ಕಾಶ್ಮೀರಲ್ಲಿ 370ನೇ ವಿಧಿ ನಿಷೇಧಿಸಿ ಒಂದು ವರ್ಷ ಕಳೆದಿದೆ. ಇಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಮೂಲಕ ಅಲ್ಲಿನ ಜನರ ಬಹು ವರ್ಷಗಳ ಕನಸನ್ನು ನಾವು ಈಡೇರಿಸಿದ್ದೇವೆ, ಇನ್ನು ಅಲ್ಲಿ ಅಭಿವೃದ್ಧಿಯ ಅವಶ್ಯಕತೆ ಇದೆ ಅನ್ನುವುದನ್ನು ಪ್ರಧಾನ ಮಂತ್ರಿಗಳು ತಿಳಿಸಿದರು.
ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಪ್ರಾರಂಭ ಮಾಡುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ. ಕೊರೊನಾ ಸಂದರ್ಭದಲ್ಲಿ 1400 ಲ್ಯಾಬ್‌ಗಳ ನಿರ್ಮಾಣವಾಗಿದೆ . 7 ಲಕ್ಷ ಪರೀಕ್ಷೆಗಳು ನಡೆಯುತ್ತಿವೆ. ದೇಶದಲ್ಲಿ ಮೂರು ಕಂಪನಿಗಳು ವಿವಿಧ ಹಂತಗಳಲ್ಲಿ ಕೊವಿಡ್ ಲಸಿಕೆಯ ತಯಾರಿಕೆಗೆ ಪರೀಕ್ಷೆ ನಡೆಸುತ್ತಿವೆ. ಕೊವಿಡ್ 19 ಸಂದರ್ಭದಲ್ಲಿ ಸಹಾಯ ಮಾಡಿದ ನೆರೆಯ ರಾಷ್ಟ್ರಗಳಿಗೆ ಇದೇ ವೇಳೆ ಕೃತಜ್ಞತೆಗಳು ಎಂದು ಮೋದಿ ಹೇಳಿದ್ದಾರೆ.
You may like
ಗ್ಯಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದೇಕೆ ಹೈಕೋರ್ಟ್..?
PM Narendra Modi | ಭಾರತ 2047ಕ್ಕೆ ಅಭಿವೃದ್ಧಿಶೀಲ ದೇಶವಾಗಿಸಲು ಮೋದಿ ಸಂಕಲ್ಪ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಹಾವೇರಿಯಲ್ಲಿ ಹಾಲಿನಂತೆ ಹರಿದ ಜನಸಾಗರ : ವಿಜಯೇಂದ್ರ ದಿಲ್ ಖುಷ್.!