Featured
ಡಿಜಿಟಲ್ ಆರೋಗ್ಯ ಕ್ರಾಂತಿಗೆ ಭಾರತದ ಪ್ಲಾನ್- ಅಂತಿಮ ಹಂತದ ಪ್ರಯೋಗದಲ್ಲಿವೆ 3 ಕೊರೊನಾ ಲಸಿಕೆಗಳು- ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ
![](https://risingkannada.com/wp-content/uploads/2020/08/PM-modi-independense.jpg)
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಮಹಾಮಾರಿ ಕೊರೊನಾ ವಿರುದ್ಧ ಭಾರತ ಅತೀ ದೊಡ್ಡ ಹೋರಾಟ ಮಾಡುತ್ತಿದೆ. ಲಸಿಕೆ ಅಭಿವೃದ್ಧಿಯಲ್ಲೂ ಭಾರತ ಮುಂದೆ ಇದೆ. ಕೋವಿಡ್-19ಗೆ ಲಸಿಕೆ ಕಂಡು ಹಿಡಿಯಲು ಭಾರತದಲ್ಲಿ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಕೊರೋನಾಗೆ ಶೀಘ್ರವೇ ಲಸಿಕೆ ಕಂಡುಹಿಡಿಯುವ ಪ್ರಯತ್ನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಿಂದ ಭಾಷಣ ಮಾಡಿದ ಪ್ರಧಾನ ಮಂತ್ರಿಗಳು ಕೋವಿಡ್-19ಗೆ ಲಸಿಕೆ, ಔಷಧಿ ಯಾವಾಗ ಸಿದ್ದವಾಗಿ ಮಾರುಕಟ್ಟೆಗೆ ಬರುತ್ತದೆ ಎಂದು ಜನರು ಕೇಳುತ್ತಿದ್ದಾರೆ ಮತ್ತು ಕಾಯುತ್ತಿದ್ದಾರೆ. ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯಲು ಸತತ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಅಭಿವೃದ್ಧಿ ಹಂತಗಳಲ್ಲಿವೆ.
ವಿಜ್ಞಾನಿಗಳಿಂದ ಅನುಮತಿ ಸಿಕ್ಕಿದ ನಂತರ ಬೃಹತ್ ಪ್ರಮಾಣದಲ್ಲಿ ಇವುಗಳ ಉತ್ಪಾದನೆ ಆರಂಭವಾಗುತ್ತದೆ. ಈ ಕೊರೋನಾ ಸಂಕಷ್ಟವನ್ನು ಭಾರತ ಖಂಡಿತವಾಗಿಯೂ ಧೈರ್ಯವಾಗಿ ಎದುರಿಸಿ ಜಯಶಾಲಿಯಾಗಲಿದೆ. ಅಲ್ಲಿಯವರೆಗೆ ಜನತೆ ತಾಳ್ಮೆಯಿಂದ ಸರ್ಕಾರ ಜೊತೆ ಸಹಕರಿಸಬೇಕೆಂದು ಕೇಳಿಕೊಂಡರು. ದೇಶದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಜಾರಿಗೆ ತರುವುದಾಗಿ ಇದೇ ಸಂದರ್ಭದಲ್ಲಿ ಪ್ರಧಾನಿ ಘೋಷಿಸಿದರು. ಭಾರತದ ಆರೋಗ್ಯ ವಲಯದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಹೊಸ ಕ್ರಾಂತಿಯನ್ನುಂಟುಮಾಡಲಿದೆ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?