Featured
ಉಮೇಶ್ ಕತ್ತಿ-ಸಿದ್ದು ಮೀಟಿಂಗ್ ಫಿಕ್ಸ್..?

ಬೆಂಗಳೂರು : ಬಹುನಿರೀಕ್ಷಿತ ಸಚಿವ ಸಂಪುಟ ರಚನೆ ಬೆನ್ನಲ್ಲೇ ಅಸಮಾಧಾನದ ಹೊಗೆ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿದೆ, ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಉಸಿರುಗಟ್ಟುವಂತೆ ಮಾಡಿದೆ. ಸಚಿವ ಸ್ಥಾನಕ್ಕೆ ತನ್ನನ್ನ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಉಮೇಶ್ ಕತ್ತಿ ಅಸಮಾಧಾನ ಹೊರಹಾಕಿದ್ದು ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಜೊತೆ ನಿನ್ನೆಯೇ ದೂರವಾಣಿ ಕರೆ ಮಾಡಿ ತಮ್ಮ ಬಳಿ ಮಾತನಾಡಬೇಕಿದೆ ಎಂದಿದ್ಡಿದರು, ಸಿದ್ದರಾಮಯ್ಯ ಕೂಡ ಬೆಳಗ್ಗೆ ಮನೆಗೆ ಬರುವಂತೆ ತಿಳಿಸಿದ್ದರು, ಇಂದು ಸಂಜೆ ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಸೇರುವ ಕುರಿತು ಸಮಾಲೋಚನೆ ನಡೆಸಬಹುದು ಎಂಬ ಊಹಾಪೋಹಗಳು ಹಬ್ಬಿವೆ,
Post Views: 7
Continue Reading
Advertisement
You may like
Click to comment
















