Featured
ಕಾಂಪೌಂಡ್ ಗೋಡೆ ಜಂಪ್ ಮಾಡಿದ CBI ಅಧಿಕಾರಿಗಳು : ಚಿದಂಬರಂ ರಹಸ್ಯ ಕೊನೆಗೂ ಬಯಲು.!
![](https://risingkannada.com/wp-content/uploads/2019/08/cbi-chidu.jpg)
ನವದೆಹಲಿ : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಬಂಧನ ನಿಜಕ್ಕೂ ಒಂದ್ ರೀತಿ ಸಿನಿಮಾ ಶೈಲಿಯಲ್ಲೇ ನಡೀತು. ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಚಿದಂಬರಂ ಇವತ್ತು ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ರು. ತಕ್ಷಣ ಜಾಗೃತರಾದ ಸಿಬಿಐ ಅಧಿಕಾರಿಗಳು, ಕಾಂಗ್ರೆಸ್ ಕಚೇರಿಯತ್ತ ಮುಖ ಮಾಡಿದ್ರು. ಅಷ್ಟೊತ್ತಿಗಾಗ್ಲೇ ಚಿದು, ತಮ್ಮ ಮನೆ ಸೇರಿದ್ರು.
ಚಿದು ಮನೆ ಬಳಿ ಹೈಡ್ರಾಮಾ..!
ರಾಜ್ಯಸಭಾ ಸದಸ್ಯರೂ ಆಗಿರೋ ಚಿದಂಬರಂ, ಮನೆ ಇರೋದು ಜೋರ್ ಭಾಗ್ ಕಾಲೋನಿಯಲ್ಲಿ. ಸಿಬಿಐ ಹಾಗೂ ಇಡಿ ಅಧಿಕಾರಿಗಳು ಚಿದು ಮನೆ ಬಳಿ ಬರ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಮಾಯಿಸಿದ್ರು. ಈ ವೇಳೆ ಸಿಬಿಐ ಅಧಿಕಾರಿಗಳು ಇದ್ದರಿಂದ ಇಡಿ ಅಧಿಕಾರಿಗಳು ವಾಪಸ್ ಹೋದ್ರು. ಆದ್ರೆ, ಸಿಬಿಐ ಅಧಿಕಾರಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದ್ರು. ಅಡ್ಡ ಬಂದ್ರು, ಪ್ರತಿಭಟನೆ ಮಾಡಿ, ಬಿಜೆಪಿ ಹಾಗೂ ಸಿಬಿಐ ವಿರುದ್ಧ ಘೋಷಣೆ ಕೂಗಿದ್ರು. ಆದ್ರೂ, ಸಿಬಿಐ ಅಧಿಕಾರಿಗಳು ಮಾತ್ರ ಜಾಗ ಬಿಡಲಿಲ್ಲ..
ಕಾಂಪೌಂಡ್ ಹಾರಿದ ಸಿಬಿಐ ಅಧಿಕಾರಿಗಳು..!
ಅಕ್ಷರಶಃ ಚಿದು ಮನೆ ಬಳಿ ದೊಡ್ಡ ಹೈಡ್ರಾಮಾವೇ ನಡೆದು ಹೋಯ್ತು. ಸಿಬಿಐ ಅಧಿಕಾರಿಗಳಿಗೆ ದೆಹಲಿ ಪೊಲೀಸರು ಸಾಥ್ ನೀಡಿದ್ರು. ಎಷ್ಟರ ಮಟ್ಟಿಗೆ ಅಂದ್ರೆ, ಸಿಬಿಐ ಅಧಿಕಾರಿಗಳು ಸಿನಿಮಾ ಹೀರೋಗಳಿಗೆ ಕಡಿಮೆ ಇಲ್ಲದಂತೆ ಚಿದಂಬರಂ ಮನೆಯ ಕಾಂಪೌಂಡ್ ಗೋಡೆಯನ್ನ ಹಾರಿ, ಮನೆ ಪ್ರವೇಶಿಸಿದ್ರು. ಸಿಬಿಐನ ಮೂವರು ಅಧಿಕಾರಿಗಳು ಕಾಂಪೌಂಡ್ ಗೋಡಿ ಹಾರಿದ್ರು.
ದೆಹಲಿ ಪೊಲೀಸರ ಸಹಾಯದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲಾಯ್ತು. ಕೊನೆಗೂ ಚಿದಂಬರಂ ಅವರನ್ನ ಬಂಧಿಸಿ, ವಿಚಾರಣೆಗಾಗಿ ಸಿಬಿಐ ಕಚೇರಿಗೆ ಕರೆತರಲಾಯ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?