Featured
ವಿಜಯಪುರದಲ್ಲಿ ಹಾಡು ಹಗಲೇ ಕಳ್ಳರ ಕೈಚಳಕ : ಜಲನಗರದಲ್ಲಿ ಚಿನ್ನ,ಬೆಳ್ಳಿ ದೋಚಿ ಪರಾರಿ
![](https://risingkannada.com/wp-content/uploads/2020/08/vijaypura-crime.jpg)
ರೈಸಿಂಗ್ ಕನ್ನಡ :
ವಿಜಯಪುರ :
ಹಾಡು ಹಗಲೇ ಜನನಿಭೀಡ ಕಾಲೋನಿಯಲ್ಲಿನ ಮನೆಯಲ್ಲಿ ಕಣ್ಣು ಮುಚ್ಚಿ ತೆಗೆಯೋದ್ರೊಳಗಾಗಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ವಿಜಯಪುರ ನಗರದ ಜಲ ನಗರ ಪೊಲೀಸ್ ಠಾಣಾ ವ್ಯಾಪ್ತಿ ಲಕ್ಷ್ಮೀ ನಗರದಲ್ಲಿನ ಮನೆಯಲ್ಲಿ ಕಳ್ಳತನವಾಗಿದೆ. ಮಲ್ಲಿಕಾರ್ಜುನ ಪಾಟೀಲ್ ಎಂಬುವರರ ಮನೆಯಲ್ಲಿ ಕದೀಮರ ಚಿನ್ನ ಬೆಳ್ಳಿ ನಗದು ಕದ್ದು ಪರಾರಿಯಾಗಿದ್ದಾರೆ. ಮಲ್ಲಿಕಾರ್ಜುನ್ ಪಾಟೀಲ್ ಬೆಳಿಗ್ಗೆ ಎಂದಿನಂತೆ ತಮ್ಮ ಸ್ವಂತ ಅಂಗಡಿಗೆ ತೆರಳಿದ್ದಾರೆ. ಅವರ ಪತ್ನಿ ಅಶ್ವಿನಿ ಮಗುವಿನೊಂದಿಗೆ ಇದ್ದರು.
ಕೆಲಸದ ನೀಮಿತ ಬೀಗ ಹಾಕಿಕೊಂಡು ಪಕ್ಕದ ಮನೆಗೆ ತೆರೆಳಿದ್ದಾರೆ. 10 ರಿಂದ 20 ನಿಮಿಷದಲ್ಲಿಯೇ ವಾಪಸ್ ಮನೆಗೆ ಬಂದಿದ್ದಾಗ ಕಳ್ಳತನ ಆಗಿರೋದು ಬೆಳಕಿದೆ ಬಂದಿದೆ. ಮನೆಯಲ್ಲಿದ್ದ ಅಲ್ಮೇರಾ ಹಾಗೂ ವಾರ್ಡ್ ಬೋರ್ಡ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಡಿವೈಎಸ್ಪಿ ಲಕ್ಷ್ಮೀ ನಾರಾಯಣ, ಜಲನಗರ ಪೊಲೀಸ್ ಠಾಣೆಯ ಪಿಎಸ್ಐ ರಾಯಗೊಂಡ ಜನಾರ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ಹಾಗೂ ಶ್ವಾನದಳ ತಂಡ ತಜ್ಞರು ಸ್ಥಳಕ್ಕೆ ಭೇಟಿ ನೀಡಿದರು.
![](https://risingkannada.com/wp-content/uploads/2020/08/Sanju-Kumar-Tolle-1024x460.jpg)
ಮನೆಯ ಹಿಂಬಾಗಿಲಿನ ಲಾಕ್ ಹಾಕದೇ ಕೇವಲ ಬೋಲ್ಟ್ ಹಾಕಿದ್ದಾರೆ. ಆ ಬೋಲ್ಟ್ ಸಹ ಪೂರ್ಣವಾಗಿ ಹಾಕಲಾಗದ ಸ್ಥಿತಿಯಲ್ಲಿರುವುದೇ ಖದೀಮರಿಗೆ ವರದಾನವಾಗಿದೆ. ಒಟ್ಟು 105 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ 29,000 ನಗದು ಕಳ್ಳತನವಾಗಿದೆ.
ಕಳೆದ ಆಗಷ್ಟ್ 3ರಂದು ನಗರದ ಶಾಂತಿನಗರದಲ್ಲಿ ಪಿನಾಯಿಲ್ ಮಾರಾಟ ಮಾಡಲು ಓರ್ವ ಯುವತಿ ಆಗಮಿಸಿ ಫೆನಾಯಿಲ್ ಕೊಳ್ಳಿರಿ ಎಂದು ಫುಸಲಾಯಿಸಿ, ಪ್ರಜ್ಞೆ ತಪ್ಪಿಸಿ ಮನೆಯವರಿಗೆ ಸ್ಪ್ರೇ ಬಳಸಿ ಮೂರ್ಚೆಗೊಳಿಸಿ ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದಳು. ಇದಾದ 11 ದಿನಗಳ ಬಳಿಕ ಹಾಡು ಹಗಲೇ ಮನೆಗಳ್ಳತನವಾಗಿದ್ದು ಕದೀಮರ ಕೈಚಳಕಕ್ಕೆ ಸಾಕ್ಷಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?